Thursday, February 17, 2011

ಗೆಲುವಿನ ಪ್ರವೃತ್ತಿ

ನಾಡಿದ್ದು ವಿಶ್ವಕಪ್ ಕ್ರಿಕೆಟ್ ಮಹಾಸಮರ ಪ್ರಾರಂಭ. ಗೆಲುವಿಗೆ ೇವರಿಟ್ಗಳಲ್ಲಿ ಒಂದಾಗಿರುವ ಆತಿಥೇಯ ಭಾರತದ ದಂಡನಾಯಕ ಎಂಎಸ್ ಧೋನಿ, ತಂಡವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂಬಂಥ ಮಾತುಗಳನ್ನು ಕೊನೆಯ ಕ್ಷಣದಲ್ಲಿ ಆಡಿದ್ದಾರೆ. ದಯವಿಟ್ಟು ಅಂಥ ನಕಾರಾತ್ಮಕ ಮಾತುಗಳು ಬೇಡ. ಶಕ್ತಿ ಮೀರಿ ಆಡಿ, ಸ್ಫೂರ್ತಿಯಿಂದ ಆಡಿ. ಗೆಲುವಿನ ಮನೋವೃತ್ತಿ ಯಿಂದ ಆಡಿ ಎಂದು ಸ್ಫೂರ್ತಿ ತುಂಬುವ ಪ್ರಯತ್ನ ಇಲ್ಲಿದೆ.


ಮೊದಲಿಗೆ ಒಂದು ಓಶೋ ಕಥೆ....
ಸಾಮಾನ್ಯ ರೈತನೊಬ್ಬ ಮೊದಲ ಬಾರಿಗೆ ಗುಡ್ಡವೇರಲು ಹೊರಟ. ಆ ಗುಡ್ಡ ಅವನ ಹಳ್ಳಿಯಿಂದ ಬಹಳ ದೂರವೇನೂ ಇರಲಿಲ್ಲ. ಆದರೂ, ಸಹ ಅಂದಿನವರೆಗೆ ಆತ ಅಲ್ಲಿಗೆ ಹೋಗಿರಲಿಲ್ಲ. ಆತನ ಹೊಲದಿಂದ ಗುಡ್ಡದ ನೆತ್ತಿ ಕಾಣುತ್ತಿತ್ತು. ಒಮ್ಮೆಯಾದರೂ ಆ ಗುಡ್ಡ ಏರಲೇಬೇಕೆಂಬ ಹಂಬಲ ಅವನಲ್ಲಿತ್ತು. ಆದರೆ, ಅಲ್ಲಿಗೆ ಹೋಗಬೇಕಾದರೆ, ರಾತ್ರಿಯೇ ಎದ್ದು ಹೊರಡಬೇಕಿತ್ತು. ಅದಕ್ಕಾಗಿ ಅವನಿಗೊಂದು ಕಂದೀಲು ಬೇಕಿತ್ತು. ಕೊನೆಗೂ ಒಂದು ದಿನ ಕಂದೀಲು ತಂದ ಅವನು ರಾತ್ರಿಯೇ ಎದ್ದು ಹೊರಡುವುದೆಂದು ನಿಶ್ಚೈಸಿ ಬೇಗನೆ ಮಲಗಿದ. ಗುಡ್ಡ ಏರುತ್ತೇನೆಂಬ ಸಂಭ್ರಮದಲ್ಲಿ ಅವನಿಗೆ ನಿದ್ರೆಯೇ ಬರಲಿಲ್ಲ. ಕೊನೆಗೂ ರಾತ್ರಿ 2 ಗಂಟೆಗೆ ಎದ್ದು ಕಂದೀಲು ಹಿಡಿದು ಗುಡ್ಡದ ಕಡೆಗೆ ಹೊರಟ. ಮನೆಯಿಂದ ಸ್ವಲ್ಪ ದೂರ ಸಾಗಿದ ಬಳಿಕ ಆತನಿಗೆ ಇದು ಅಮಾವಾಸ್ಯೆ ರಾತ್ರಿ ಎನ್ನುವುದು ನೆನಪಾಯಿತು. ಆತನ ಕಂದೀಲಿನಲ್ಲೋ ದೂರದವರೆಗೆ ಬೆಳಕು ಕಾಣುತ್ತಿರಲಿಲ್ಲ. ಮಿಣುಕು ಬೆಳಕಿನಲ್ಲಿ ಹತ್ತು ಹೆಜ್ಜೆಯಷ್ಟೂ ದಾರಿ ಕಾಣುತ್ತಿರಲಿಲ್ಲ. ರೈತನಿಗೆ ಯೋಚನೆಗಿಟ್ಟುಕೊಂಡಿತು. ತಾನಿನ್ನೂ ಹತ್ತು ಮೈಲಿ ಸಾಗಬೇಕು. ಈ ಕಂದೀಲು ಹತ್ತು ಹೆಜ್ಜೆಗಿಂತ ಹೆಚ್ಚು ದಾರಿ ತೋರಿಸುವುದಿಲ್ಲ. ಈ ಕತ್ತಲೆಯಲ್ಲಿ ಇದನ್ನು ನಂಬಿಕೊಂಡು ಹೇಗೆ ಹೋಗುವುದು? ಇದು ಸಮುದ್ರವನ್ನು ದಾಟಲು ತೆಪ್ಪದಲ್ಲಿ ಹೋದಂತೆಯೇ ಸರಿ ಎಂದು ಹೆದರಿಕೊಂಡು ಅಲ್ಲಿಯೇ ಕುಳಿತ.
ಇದೇ ಸಂದರ್ಭದಲ್ಲಿ ವೃದ್ಧನೊಬ್ಬ ಪುಟ್ಟ ಕಂದೀಲು ಹಿಡಿದುಕೊಂಡು ಎತ್ತಲೋ ಹೊರಟಿದ್ದ. ರೈತ ಆತನನ್ನು ನಿಲ್ಲಿಸಿ ತನ್ನ ಸಮಸ್ಯೆ ಹೇಳಿಕೊಂಡ. ಇದನ್ನು ಕೇಳಿ ಆ ವೃದ್ಧ ನಕ್ಕು ಹೇಳಿದ... ಹುಚ್ಚ! ನೀನು ಮೊದಲು ಹತ್ತು ಹೆಜ್ಜೆ ನಡೆ. ಎಷ್ಟು ಕಾಣುವುದೋ ಅಷ್ಟು ಮುಂದೆ ನಡೆ. ಆಗ ಇನ್ನಷ್ಟು ಮುಂದೆ ದಾರಿ ಕಾಣುತ್ತದೆ. ಒಂದು ಹೆಜ್ಜೆ ಕಾಣಿಸಿದರೆ, ಅದರಿಂದ ಭೂಮಿಗೇ ಪ್ರದಕ್ಷಿಣೆ ಹಾಕಬಹುದು... ರೈತ ಅರ್ಥ ಮಾಡಿಕೊಂಡ. ಬೆಳಗು ಮೂಡುವ ಹೊತ್ತಿಗೆ ಗುಡ್ಡ ಏರಿದ್ದ...
ಈ ಕಥೆಯ ತಾತ್ಪರ್ಯವಿಷ್ಟೇ. ಎಲ್ಲಾ ದೊಡ್ಡ ದೊಡ್ಡ ಪ್ರಯಾಣಗಳೂ ಮೊದಲ ಹೆಜ್ಜೆಯಿಂದಲೇ ಪ್ರಾರಂಭಗೊಳ್ಳುತ್ತವೆ. ಕ್ರಿಕೆಟ್ನಲ್ಲಿ ವಿಶ್ವಕಪ್ಗಿಂಥ ದೊಡ್ಡ ಟೂರ್ನಿ ಇಲ್ಲ. ಇಲ್ಲಿ ಕೂಡ ಮೊದಲ ಹೆಜ್ಜೆಯಲ್ಲೇ ವಿಶ್ವಕಪ್ ಗೆದ್ದುಬಿಡಲು ಸಾಧ್ಯವಿಲ್ಲ. ಒಂದೊಂದೇ ಹೆಜ್ಜೆಯನ್ನು ಮುತುವರ್ಜಿಯಿಂದ, ಎಚ್ಚರಿಕೆಯಿಂದ ಇಡುತ್ತ ಮುಂದೆ ಸಾಗಬೇಕು. ಈ ಪ್ರಯಾಣದಲ್ಲಿ ಅರಿವೇ ಗುರು.
ಈ ಬಾರಿಯ ವಿಶ್ವಕಪ್ ಮಾದರಿ ಯಾವ ರೀತಿ ಇದೆಯೆಂದರೆ 9 ಪಂದ್ಯ ಗೆಲ್ಲುವವನು ವಿಶ್ವವಿಜೇತ ಎನಿಸಬಹುದು. ತಲಾ 7 ತಂಡಗಳ 2 ಗುಂಪುಗಳಿಂದ ತಲಾ 4 ತಂಡಗಳು ಕ್ವಾರ್ಟರ್ೈನಲ್ಗೆ ಅರ್ಹತೆ ಗಳಿಸುವ ಹಿನ್ನೆಲೆಯಲ್ಲಿ ಲೀಗ್ ಹಂತದ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದವರಿಗೂ ನಾಕೌಟ್ ಘಟ್ಟ ತಲುಪುವ ಅವಕಾಶ ಸಿಗಬಹುದು. ಆದರೆ, ಕೊನೆಯ ಮೂರು ಪಂದ್ಯಗಳಲ್ಲಿ ಮಾತ್ರ ಗೆಲ್ಲಲೇ ಬೇಕು. ಅಲ್ಲಿ ಒಂದು ಹೆಜ್ಜೆ ಎಡವಿದರೂ ಅದೇ ಟ್ರೋಫಿಗೂ ತಂಡಕ್ಕೂ ನಡುವೆ ತಡೆಗೋಡೆಯಾಗಿಬಿಡುತ್ತದೆ.
ವಿಶ್ವಕಪ್ಗೆ ಈಗ ಆಟದ ದೃಷ್ಟಿಯಿಂದ ಸಿದ್ಧತೆ ನಡೆಸುವುದೇನೂ ಇರುವುದಿಲ್ಲ. ಏಕೆಂದರೆ, ಟೂರ್ನಿಗೆ ಒಂದೆರಡು ವರ್ಷ ಮುನ್ನವೇ ಅಂಥ ಪ್ರಯತ್ನ ಆರಂಭವಾಗಿರುತ್ತದೆ. ಕೊನೆಯ ಘಟ್ಟದಲ್ಲಿ ಏನಿದ್ದರೂ ಮಾನಸಿಕ ಸಿದ್ಧತೆಯ ಕಾಲ. ನಾವು ಎಷ್ಟೇ ಸಮರ್ಥರಾಗಿದ್ದರೂ, ವಿಶ್ವಕಪ್ ವೇದಿಕೆಯಲ್ಲಿ ಅದನ್ನು ಪ್ರದರ್ಶಿಸದಿದ್ದಲ್ಲಿ ಅಂಥ ಸಾಮರ್ಥ್ಯಕ್ಕೆ ಬೆಲೆಯಿಲ್ಲ. ಆದರೆ, ವಿಶ್ವಕಪ್ಗೆ 5 ದಿನ ಬಾಕಿ ಇದ್ದಾಗ ಭಾರತ ತಂಡದ ನಾಯಕ ಎಂಎಸ್ ಧೋನಿ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಹೇಳಿ ವಿವಾದ ಹುಟ್ಟುಹಾಕಿದರು. ಬಿಡುವಿಲ್ಲದೆ ಕ್ರಿಕೆಟ್ ಆಡಿ ಮನಸ್ಸು ಜಡ್ಡುಗಟ್ಟಿದೆ ಎಂಬ ಮಾತನ್ನು ಅವರು ಹೇಳಿದರು. ಅದು ವಾಸ್ತವವೇ ಇರಬಹುದು. ಆದರೆ, ಅದನ್ನು ಹೇಳಿಕೊಳ್ಳುವ ಸಮಯ ಇದಾಗಿರಲಿಲ್ಲ.
ಈ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್, ಚಾಂಪಿಯನ್ಸ್ ಲೀಗ್ ಇವೆಲ್ಲಾ ವ್ಯಾಪಾರಿ ದೃಷ್ಟಿಕೋನದಿಂದ ನಡೆಯುವಂಥವು. ಇವುಗಳಲ್ಲಿ ಆಟಗಾರರಿಗಿರುವುದು ಕೇವಲ ಸ್ವ-ಹಿತಾಸಕ್ತಿ ಮಾತ್ರ. ಆದರೆ, ವಿಶ್ವಕಪ್ನಂಥ ಟೂರ್ನಿ ತಾಯ್ನಡನ್ನು ಪ್ರತಿನಿಧಿಸಿ ಹೆಮ್ಮೆಯ ಸಾಧನೆ ಮಾಡಲು ಇರುವ ಅಪೂರ್ವ ಅವಕಾಶ. ಹಿಂದೆಲ್ಲಾ ತಾಯ್ನಡಿನ ರಕ್ಷಣೆಗಾಗಿ ಮಧ್ಯರಾತ್ರಿ ನಿದ್ರೆಯಿಂದೆದ್ದು ಯುದ್ಧಕ್ಕೆ ಓಡಿದ ನಿದರ್ಶನಗಳಿವೆ. ಈ ಕಾಲದಲ್ಲಿ ರಾಷ್ಟ್ರ-ರಾಷ್ಟ್ರಗಳ ಕ್ರಿಕೆಟ್ ಪಂದ್ಯಗಳೇ ಯುದ್ಧಗಳು. ಅದರಲ್ಲೂ ವಿಶ್ವಕಪ್ನಂಥ ಮಹಾಸಮರ ಎದುರಿಗಿರುವಾಗ ದೈಹಿಕವಾಗಿ, ಮಾನಸಿಕವಾಗಿ ಅದನ್ನು ಗೆಲ್ಲಲು ಮುಂದಾಗಬೇಕು. ಅಂಥ ಸಂದರ್ಭದಲ್ಲಿ ನಮ್ಮ ಅತೃಪ್ತಿ, ಆಯಾಸಗಳೆಲ್ಲಾ ಮೂಲೆಗುಂಪಾಗಬೇಕು. ಸಕಾರಾತ್ಮಕ ಮನೋಭಾವವಿಲ್ಲದೆ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಧೋನಿ ಇನ್ನೂ ಮಾಗಬೇಕು.
ಇಲ್ಲಿ ಮುಖ್ಯವಾಗುವುದು ವಿಜೇತನ ಮನೋವೃತ್ತಿ. ವಿಜೇತರು ಯಾವಾಗಲೂ ಒಂದೇ ಬಗೆಯ ಮನೋವೃತ್ತಿ ಹೊಂದಿರುತ್ತಾರೆಯೇ ಅಥವಾ ವಿಜೇತರು ಒಂದೇ ಬಗೆಯ ಚಿಂತನಾ ಕ್ರಮ ಹೊಂದಿರುತ್ತಾರೆಯೇ ಎಂದು ಸುಪ್ರಸಿದ್ಧ ವಾಗ್ಮಿ ವಿನ್ಸಿ ಲೊಂಬಾರ್ಡಿ ಪ್ರಶ್ನೆ ಎತ್ತುತ್ತಾರೆ. ಅದಕ್ಕೆ ಉತ್ತರವೂ ಅವರ ಬಳಿಯೇ ಇದೆ. ಅದು ಗೆಲ್ಲಲೇ ಬೇಕೆಂಬ ಸಂಕಲ್ಪ. ಸಾಧಿಸಲೇಬೇಕೆಂಬ ಸಂಕಲ್ಪ. ಬದುಕು ನಮ್ಮತ್ತ ಅನೇಕ ಸವಾಲುಗಳನ್ನು ಒಡ್ಡುತ್ತವೆ. ನಾವು ಯಾವ ಮನೋವೃತ್ತಿಯಿಂದ ಆ ಸವಾಲುಗಳನ್ನು ಎದುರಿಸುತ್ತೇವೆ ಅಥವಾ ಎಂಥಾ ಮನೋಭಾವದಿಂದ ಈ ಸವಾಲುಗಳಿಗೆ ಸಜ್ಜಾಗುತ್ತೇವೆ ಎನ್ನುವುದು ನಮ್ಮ ಬದುಕು ಬರಡಾಗಿರುವುದೇ, ಬೆಳಕಾಗಿರುವುದೇ ಎನ್ನುವುದನ್ನು ನಿರ್ಧರಿಸುತ್ತವೆ ಎಂದು ಅವರು ಹೇಳುತ್ತಾರೆ.
ಅಲ್ಲಿ ಇರಬೇಕಾಗಿರುವುದು ನಮ್ಮಿಂದ ಸಾಧ್ಯ ಎನ್ನುವಂಥ ಮನೋವೃತ್ತಿ. ಬದುಕಿನ ಹೋರಾಟವಿರಲಿ, ವಿಶ್ವಕಪ್ ಇರಲಿ. ನಮ್ಮಿಂದ ಗೆಲ್ಲಲು ಸಾಧ್ಯ ಎಂಬ ಮನೋಭಾವ ಇರಬೇಕು. ಮೊದಲು ಮನಸ್ಸಿನಲ್ಲಿ ಗೆಲ್ಲಬೇಕು.
ಇದೇ ವಿಷಯವನ್ನು ಮೇರಿ ಕೇ ೌಂಡೇಷನ್ನ ಸಂಸ್ಥಾಪಕಿ ಹಾಗೂ ನಿವೃತ್ತ ಅಧ್ಯಕ್ಷೆ ಮೇರಿ ಕೇ ಆಶ್ ಬೇರೆ ರೀತಿ ಹೇಳುತ್ತಾರೆ. ಅವರ ಪ್ರಕಾರ ಪ್ರಪಂಚದಲ್ಲಿ ನಾಲ್ಕು ಬಗೆಯ ಜನರಿರುತ್ತಾರೆ. ಮೊದಲನೆ ವರ್ಗ ಏನೇ ಆಗುವುದಾದರೂ ತಮ್ಮ ಪ್ರಯತ್ನದಿಂದಲೇ ಆಗಲಿ ಎಂದು ಸದಾ ಪ್ರಯತ್ನಶೀಲರಾಗಿರುವವರು; ಇನ್ನೊಂದು ವರ್ಗ ಏನಾಗುವುದೋ ಆಗಲಿ ಎಂದು ನಿಂತು ನೋಡುವವರು; ಅರೇ ಇದೇನಾಯಿತು ಎಂದು ಅಚ್ಚರಿ ಪಡುವವರದು ಮೂರನೇ ವರ್ಗ; ನಾಲ್ಕನೇ ವರ್ಗದವರಿಗೆ ತಮ್ಮ ಸುತ್ತಮುತ್ತ ಏನೇನು ನಡೆದಿದೆ, ನಡೆಯುತ್ತಿದೆ ಎಂಬ ಪರಿವೆ-ಅರಿವೇ ಇರುವುದಿಲ್ಲ. ವಿಶ್ವಕಪ್ ಗೆಲ್ಲುವವರು ಮೊದಲ ವರ್ಗಕ್ಕೆ ಸೇರಿರುತ್ತಾರೆ.
ಭಾರತ 2007ರ ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋತು ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಆ ಸಂದರ್ಭದಲ್ಲಿ ಇಡೀ ತಂಡ ನಕಾರಾತ್ಮಕ ಗಾಳಿಯಲ್ಲೇ ಉಸಿರಾಡುತ್ತಿತ್ತು. ಕೋಚ್ ಚಾಪೆಲ್ ಹೆಚ್ಚು ಕಡಿಮೆ ತಂಡವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದರು. ಅಲ್ಲಿ ಚಾಪೆಲ್ ಗುಂಪು, ಸಚಿನ್ ಗುಂಪು, ನಾಯಕ ದ್ರಾವಿಡ್ ಗುಂಪು, ಗಂಗೂಲಿ ಗುಂಪು ಹೀಗೆ ಅನೇಕ ಗುಂಪುಗಳಾಗಿ ತಂಡ ಛಿದ್ರವಾಗಿತ್ತು. ಅದರ ಪರಿಣಾಮ ಭಿನ್ನವೇನೂ ಆಗಲಿಲ್ಲ.
ನಾವು ಸಕಾರಾತ್ಮಕ ಮನಸ್ಸು ಮತ್ತು ನಂಬಿಕೆ ಹೊಂದಿದ್ದರೆ, ಏನಾದರೂ ಕೆಡುಕು ಘಟಿಸಿದಾಗಲೂ ಹತಾಶರಾಗುವ ಬದಲು ಅದರಿಂದ ಪಾಠ ಕಲಿಯುತ್ತೇವೆ ಮತ್ತು ಅದರಿಂದ ಒಳಿತೇ ಆಗುತ್ತವೆ. ಇಂಥ ಅನುಭವಗಳಿಂದ ನಾವು ಬೆಳೆಯುತ್ತೇವೆ ಎಂದು ಸೀಕ್ರೆಟ್ಸ್ ಆ್ ಸ್ಟೇಯಿಂಗ್ ಇನ್ ಲವ್ ಎಂಬ ಪ್ರಸಿದ್ಧ ಕೃತಿಯ ಲೇಖಕಿ ರುತ್ ಸಾ್ಟೆೆರ್ಡ್ ಪೀಲ್ ಬರೆಯುತ್ತಾರೆ.
ಇಂಥ ಮನೋವೃತ್ತಿಯ ಬಗ್ಗೆಯೇ ಕುವೆಂಪು
ಏರು, ಏರು, ಮನವೆ, ಏರು;
ಭೂಮಿ ವ್ಯೋಮಗಳಲಿ ಹಾರು;
ಲೋಕ ಲೋಕಗಳನು ಮೀರು;
ಮಾತೃ ಚರಣತಲವ ಸೇರು;
ಏರು, ಮನವೆ, ಏರು, ಏರು!
-ಎಂದು ಬರೆಯುತ್ತಾರೆ.
ಗೆಲುವು ಅರ್ಥಾತ್ ಯಶಸ್ಸು ಯಾವತ್ತೂ ಸುಲಭಕ್ಕೆ ಲಭಿಸುವುದಿಲ್ಲ. ವಿಶ್ವಕಪ್ ಪಂದ್ಯಗಳನ್ನೇ ಉದಾಹರಣೆ ತೆಗೆದುಕೊಂಡರೆ ಭಾರತವೇ ಎರಡು ಬಾರಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲೇಬೇಕಾಗಿದ್ದ ಪಂದ್ಯಗಳನ್ನು ಕೇವಲ 1 ರನ್ ಅಂತರದಿಂದ (1987 ಹಾಗೂ 1992ರ ಟೂರ್ನಿ) ಸೋತಿದೆ. ಈ ಬಾರಿಯಂತೂ 45 ದಿನಗಳ ಸುದೀರ್ಘ ಟೂರ್ನಿಯಲ್ಲಿ ಹಾಗೂ ಪ್ರತೀ ಪಂದ್ಯದಲ್ಲಿ ಗೆಲುವಿನ ದಡ ಮುಟ್ಟುವ ತನಕ ಏಕಾಗ್ರತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ಕ್ರೀಡೆಯಲ್ಲಿ ಯಾವಾಗಲೂ ಪಂದ್ಯಗಳನ್ನು ಗೆದ್ದವರೇ ಗೆದ್ದಿರುವುದಿಲ್ಲ! ಅನೇಕ ಬಾರಿ ಎದುರಾಳಿ ಸೋತಿದ್ದರಿಂದ ಇವರಿಗೆ ಲಾಭವಾಗಿರುತ್ತದೆ. ಬಿಲಿಯರ್ಡ್ಸ್ ಮಾಂತ್ರಿಕ ಗೀತ್ ಸೇಥಿ ಈ ರೀತಿ ಗೆಲುವಿನ ದವಡೆಯಿಂದ ಸೋಲನ್ನು ಸಂಪಾದಿಸುವುದು ಹೇಗೆ ಎನ್ನುವುದಕ್ಕೆ ನಿದರ್ಶನವಾಗಿ ತಮ್ಮ ಯಶಸ್ಸು ವರ್ಸಸ್ ಆನಂದ ಕೃತಿಯಲ್ಲಿ ಒಂದು ಕಥೆ ಹೇಳುತ್ತಾರೆ.
ಥಾಯ್ಲೆಂಡ್ನ ಜೇಮ್ಸ್ ವಾಟನ್ 1989ರಲ್ಲಿ 18ನೇ ವಯಸ್ಸಿನಲ್ಲೇ ಎಲ್ಲಾ ದೇಶದ ಕ್ರೀಡಾಪಟುಗಳನ್ನು ಸೋಲಿಸಿ ಇಂಗ್ಲೆಂಡ್ನಲ್ಲಿ ನಡೆಯುವ ವೃತ್ತಿಪರ ಸ್ನೂಕರ್ ಆಡಲು ತೆರಳಿದ್ದರು.
ಇಂಗ್ಲೆಂಡ್ ಸೇರಿದ 3ನೇ ವರ್ಷದಲ್ಲೇ ವಾಟನ್, ಮೈಟ ವರ್ಲ್ಡ್ ಮಾಸ್ಟರ್ಸ್ ಟೂರ್ನಿಯಲ್ಲಿ ಸೆಮಿೈನಲ್ ತಲುಪಿದರು. ಆ ಟೂರ್ನಿಯಲ್ಲಿ ಗೆದ್ದವರಿಗೆ ಆ ದಿನಗಳಲ್ಲಿ ದಾಖಲೆ 2 ಲಕ್ಷ ಪೌಂಡ್ ಬಹುಮಾನ ನೀಡಲಾಗುತ್ತಿತ್ತು.
ಪ್ರಖ್ಯಾತ ಜಿಮ್ಮಿ ವೈಟ್ ವಿರುದ್ಧ ಉಪಾಂತ್ಯ ಪಂದ್ಯದ ದಿನ ವಾಟನ್ ಅಸ್ವಾಸ್ಥ್ಯದಿಂದ ಬಳಲುತ್ತಿದ್ದರು. ಆದರೂ, 19 ್ರೇಮ್ಗಳ ಆ ಪಂದ್ಯದಲ್ಲಿ ಅಸಾಧಾರಣ ಆಟವಾಡಿ ಒಂದು ಹಂತದಲ್ಲಿ 8-6 ್ರೇಮ್ಗಳಿಂದ ಮುನ್ನಡೆ ಸಾಧಿಸಿಬಿಟ್ಟರು. ಆಗ ಗೆಲುವು ಅವರ ಬೆರಳ ತುದಿಯಲ್ಲಿತ್ತು. ಆದರೆ, ಇದ್ದಕ್ಕಿದ್ದಂತೆ ಒಂದು ಸುಲಭ ಹೊಡೆತ ಅವರಿಗೆ ಕೈಕೊಟ್ಟಿತು. ಆ ಒಂದೇ ಒಂದು ತಪ್ಪಿನಿಂದ ಅವರು ಕುಸಿದುಬಿದ್ದರು. ಎದುರಾಳಿ ವೈಟ್ 10-8 ್ರೇಮ್ಗಳಿಂದ ಜಯ ಸಾಧಿಸಿದರು.
ಪಂದ್ಯ ಮುಗಿದ ಮೇಲೆ ವರದಿಗಾರನೊಬ್ಬ ಆಟದ ಒಂದು ಹಂತದಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ್ದ ನೀವು ಸೋತದ್ದಾದರೂ ಹೇಗೆ? ಎಂದು ಪ್ರಶ್ನಿಸುತ್ತಾನೆ. ನಾನು 8-6 ್ರೇಮ್ಗಳಿಂದ ಮುಂದಿದ್ದಾಗ ನನ್ನ ಮನಸ್ಸು ಬ್ಯಾಂಕಾಕ್ನ ರಸ್ತೆಯೊಂದರಲ್ಲಿರುವ ಒಂದು ಮನೆಯ ಬಗ್ಗೆ ಯೋಚನೆ ಮಾಡಲು ಪ್ರಾರಂಭಿಸಿತು. ನಾನು ಈ ಟೂರ್ನಿಯನ್ನು ಗೆದ್ದು, ಬರುವ ಹಣದಲ್ಲಿ ನನ್ನ ತಾಯಿಗಾಗಿ ಖರೀದಿಸಲು ಇಚ್ಛಿಸಿದ್ದ ಮನೆಯೇ ಅದು ಎಂದು ವಾಟನ್ ಆ ಸಂದರ್ಭದಲ್ಲಿ ಉತ್ತರ ನೀಡಿದ್ದರು. ಅಂದರೆ ವರ್ತಮಾನದಿಂದ ಒಂದೇ ಒಂದು ಕ್ಷಣ ಅವರ ಮನಸ್ಸು ವಿಚಲಿತಗೊಂಡಿದ್ದರಿಂದ ಗೆಲುವಿನ ಜಾಗದಲ್ಲಿ ಸೋಲು ಕಾಣಿಸಿಕೊಂಡಿತ್ತು.
ಕೊನೆಯದಾಗಿ ವಿಶ್ವಕಪ್ ಗೆಲ್ಲಿ ಎಂದು ಟೀಮ್ ಇಂಡಿಯಾ ಆಟಗಾರರನ್ನು ಹುರಿದುಂಬಿಸುವುದಕ್ಕೆ ಒಂದ ಕುವೆಂಪು ಸ್ಪೂರ್ತಿ ಕವಿತೆ:
ಮತ್ತೆ ಮತ್ತೆ ಗೆಲ್ಲಬೇಕು;
ನಿತ್ಯ ಗೆಲ್ಲುತಿರಲೆ ಬೇಕು.
ಗೆಲ್ಲುತಿಹುದೆ ಗೆಲ್ಲ !
ನಿನ್ನ ಗೆದ್ದು ಪೂರೈಸಿದೆ
ಎಂಬ ಮಾತೆ ಸಲ್ಲ;
ಪಡೆದು, ಪಡೆದು, ಪಡೆದು ನಿನ್ನ....
ಕಡೆಗೆ?-ಕಡೆಯೆ ಇಲ್ಲ !

No comments:

Post a Comment