Thursday, February 3, 2011

ದಾರಿ ತೋರುವ ಗುರು


ಬದುಕಿನಲ್ಲೂ ಕ್ರೀಡೆಯಲ್ಲೂ ಗುರುವಿನ ಪಾತ್ರ ದೊಡ್ಡದು. ಗುರುತರವಾದದು.
ಕುದುರೆ ಎಷ್ಟೇ ಸಮರ್ಥವಾಗಿದ್ದರೂ, ಶಕ್ತಿಶಾಲಿಯಾಗಿದ್ದರೂ ಅದರ ಮೇಲೆ ಕುಳಿತು ನಿಯಂತ್ರಿಸಲು ಸವಾರನೊಬ್ಬ ಬೇಕು. ಕಷ್ಟದಲ್ಲಿ, ಕತ್ತಲಲ್ಲಿ ದಾರಿ ತೋರಿಸುವವನು ಗುರ್ರುೀಡೆಯಲ್ಲೂ ತರಬೇತುದಾರನೆಂದು ಗುರುತಿಸಲ್ಪಡುವ ಗುರುವಿಗೆ ಎಲ್ಲಿಲ್ಲದ ಪ್ರಾಮುಖ್ಯತೆ. ುಟ್ಬಾಲ್ನಂಥ ಕ್ರೀಡೆಗಳಲ್ಲಿ ತರಬೇತುದಾರ ಹೇಳಿದ್ದೇ ವೇದವಾಕ್ಯ. ಅಲ್ಲಿ ರಾಷ್ಟ್ರದ ುಟ್ಬಾಲ್ ಸಂಸ್ಥೆ ತರಬೇತುದಾರನನ್ನು ನೇಮಕ ಮಾಡಿದರೆ, ತರಬೇತುದಾರ ಆಟಗಾರರನ್ನು ಆಯ್ಕೆ ಮಾಡುತ್ತಾನೆ. ಅಲ್ಲಿ ನಿಜ ಅರ್ಥದಲ್ಲಿ ಗುರುವಿನ ಗುಲಾಮನಾಗದ ಹೊರತು ಆಟಗಾರರಿಗೆ ಯಶಸ್ಸು ದೊರೆಯುವುದಿಲ್ಲ.್ರಕೆಟ್ನಲ್ಲಿ ಅಂಥ ಕಟ್ಟುನಿಟ್ಟಿನ ವಾತಾವರಣವಿಲ್ಲದಿದ್ದರೂ, ಸಾಕಷ್ಟು ಜವಾಬ್ದಾರಿ ಇದ್ದೇ ಇರುತ್ತದೆ. ಏಕೆಂದರೆ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ವೈಲ್ಯಕ್ಕೆ ಮೊದಲು ಬಲಿಪಶುವಾಗುವವನು ತರಬೇತುದಾರ.
ುಟ್ಬಾಲ್ ಕೋಚ್ನಂತೆ ಕ್ರಿಕೆಟ್ ಕೋಚ್ಗೆ ತಂಡದ ಆಯ್ಕೆಯಲ್ಲಿ ಅಧಿಕಾರವಿಲ್ಲ. ಆಯ್ಕೆಗಾರರು ಸೂಚಿಸಿದ ಆಟಗಾರರೊಂದಿಗೆ ಇಲ್ಲಿ ಕೋಚ್ ಹೆಣಗಬೇಕು. ಅಂದರೆ ಕೊಟ್ಟ ಕುದುರೆಯನ್ನು ಏರುವುದಷ್ಟೇ ಅವನ ಪಾಲಿಗಿರುವುದು.ದೇನೇ ಇರಲಿ, ಇದೇ 19ರಂದು ಪ್ರಾರಂಭವಾಗುವ 10ನೇ ವಿಶ್ವಕಪ್ ಕ್ರಿಕೆಟ್ ಮಹಾಸಮರದಲ್ಲಿ ಕಣದಲ್ಲಿರುವ 14 ತಂಡಗಳ ಪೈಕಿ ಯಾವ ಕೋಚ್ ವಿಶ್ವಕಪ್ ಗೆಲ್ಲಿಸಲು ಸಮರ್ಥರು ಎಂಬ ಜಿಜ್ಞಾಸೆಗೆ ಇದು ಸಕಾಲ.
ಮೊದಲನೆಯದಾಗಿ ಈ ಬಾರಿ ಯಾರೂ ವಿಶ್ವಕಪ್ ಗೆದ್ದ ಕೋಚ್ಗಳಿಲ್ಲ. 2007ರ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದ ಜಾನ್ ಬುಕನನ್ ಮತ್ತು ಬಾಂಗ್ಲಾದೇಶದ ಡೇವ್ ವಾಟ್ಮೋರ್ ಹಿಂದೆ ವಿಶ್ವಕಪ್ ಗೆದ್ದ ಅನುಭವದೊಂದಿಗೆ ಟೂರ್ನಿಗೆ ಆಗಮಿಸಿದ್ದರು. ಆದರೆ, ಈ ಬಾರಿ ಅಂಥ ದಿಗ್ಗಜರು ಯಾರಿಲ್ಲ. ಇದ್ದುದರಲ್ಲಿ ನ್ಯೂಜಿಲೆಂಡ್ ಕೋಚ್ ಜಾನ್ ರೈಟ್ ಅನುಭವಿ. ಅವರಿಗೆ 2003ರಲ್ಲಿ ಭಾರತ ತಂಡದ ಕೋಚ್ ಆಗಿ ೈನಲ್ ಸಾಧನೆ ಮಾಡಿದ ಅನುಭವವಿದೆ. ಉಳಿದ 13 ತಂಡದ ಕೋಚ್ಗಳಿಗೆ ಇದು ಮೊದಲ ವಿಶ್ವಕಪ್ ಅನುಭವ.
ಗುರುಮೂಲದ ದೃಷ್ಟಿಯಿಂದ ಹೇಳುವುದಾದರೆ ಈ ಬಾರಿ ಕಣದಲ್ಲಿರುವ 14ರಲ್ಲಿ 9 ತಂಡಗಳ ಭವಿಷ್ಯ ವಿದೇಶಿಯರ ಕೈಯಲ್ಲಿದೆ. ಅಂದರೆ ಕೇವಲ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ಮಾತ್ರ ಸ್ವದೇಶಿ ಕೋಚ್ ಮಾರ್ಗದರ್ಶನದಲ್ಲಿ ಆಡಲಿವೆ. ಉಳಿದ 9 ತಂಡಗಳು ವಿದೇಶಿ ಕೋಚ್ ನೆರವು ಪಡೆದಿವೆ.ಳೆದ ವಿಶ್ವಕಪ್ನಲ್ಲಿ ಬಹುತೇಕ ತಂಡಗಳು ಆಸ್ಟ್ರೇಲಿಯಾ ಮೂಲದ ಕೋಚ್ ಹೊಂದಿದ್ದವು. ಈ ಬಾರಿಯೂ ಆ ರಾಷ್ಟ್ರದ ತರಬೇತುದಾರರದೇ ಹೆಚ್ಚಿನ ಸಂಖ್ಯೆ. 14ರಲ್ಲಿ 4 ಕೋಚ್ಗಳು ಆಸೀಗಳಾದರೆ, ಆಟದಲ್ಲಿ ಪಾತಾಳ ಕಚ್ಚಿರುವ ವೆಸ್ಟ್ ಇಂಡೀಸ್ನ ಮೂವರು ಕೋಚ್ಗಳು ವಿವಿಧ ತಂಡ ಪ್ರತಿನಿಧಿಸುತ್ತಿರುವುದು ವಿಶೇಷ. ದಕ್ಷಿಣ ಆಫ್ರಿಕಾದ ಇಬ್ಬರು ಕೋಚ್ಗಳಿದ್ದರೆ, ಇಂಗ್ಲೆಂಡ್, ಜಿಂಬಾಬ್ವೆ, ಶ್ರೀಲಂಕಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ನ ತಲಾ ಒಬ್ಬರು ಕೋಚ್ಗಳಿದ್ದಾರೆ. ಭಾರತದ ಯಾವುದೇ ಕೋಚ್ಗೆ ಈ ವಿಶ್ವಕಪ್ನಲ್ಲಿ ಪಾತ್ರವಿಲ್ಲ. ಭಾರತೀಯ ತರಬೇತುದಾರರು ಈ ರೀತಿ ಬೇಡಿಕೆ ಕಳೆದುಕೊಂಡು ಮೂಲೆಗುಂಪಾಗಿರುವುದು ದುರದೃಷ್ಟಕರ.
ಯಾವ ಕೋಚ್ ಗೆಲ್ಲಬಹುದು?ಟೂರ್ನಿಯ ಸಂಖ್ಯಾಬಲ ಹೆಚ್ಚಿಸುವ ಸಲುವಾಗಿ ಐರ್ಲೆಂಡ್, ಕೆನಡಾ, ಹಾಲೆಂಡ್, ಕೀನ್ಯಾಕ್ಕೂ ಅವಕಾಶ ನೀಡಿದ್ದರಿಂದ ಈ ಬಾರಿ 14 ತಂಡಗಳಿವೆ. ಉಳಿದ 10 ತಂಡಗಳ ಪೈಕಿ ಗೆಲ್ಲುವ ಅವಕಾಶ ಇರುವುದು 6 ರಿಂದ 7 ತಂಡಗಳಿಗೆ ಮಾತ್ರ. ಜಿಂಬಾಬ್ವೆ ಈ ಬಾರಿ ಆಡುತ್ತಿರುವುದೇ ದೊಡ್ಡ ಸಾಧನೆ ಎನಿಸಬಹುದು. 1983ರಲ್ಲಿಭಾರತ ಗೆದ್ದಂತೆ ಈ ಬಾರಿ ಬಾಂಗ್ಲಾದೇಶ ಗೆಲ್ಲುವ ಸಾಧ್ಯತೆ ಕಡಿಮೆ. ಆದರೂ, ತವರಿನ ಲಾಭ ಪಡೆದು ಸೆಮಿೈನಲ್ ಹಂತದವರೆಗೆ ಕನಸಿನ ಓಟ ಓಡುವ ಸಾಧ್ಯತೆ ಸ್ವಲ್ಪ ಇದೆ.ನ್ನು ವೆಸ್ಟ್ ಇಂಡೀಸ್ ಕ್ವಾರ್ಟರ್ೈನಲ್ನಿಂದ ಮತ್ತೊಂದು ಹೆಜ್ಜೆ ಮುಂದಿಟ್ಟರೆ ಅದೇ ಹೆಚ್ಚು. ಆದರೂ, ಚೊಚ್ಚಲ ಚಾಂಪಿಯನ್ಸ್ಲೀಗ್ನಲ್ಲಿ ಟ್ರಿನಿಡಾಡ್ ಟೊಬ್ಯಾಗೋ ೈನಲ್ ಪ್ರವೇಶಿಸಿದಂತೆ ವಿಂಡೀಸ್ ದೈತ್ಯ ಓಟ ಪ್ರದರ್ಶಿಸಲೂ ಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 1 ಶೇ. ಮಾತ್ರ.ನ್ನುಳಿದ 7 ತಂಡಗಳ ಪೈಕಿ ಸದ್ಯ ಅತ್ಯಂತ ನಿಕೃಷ್ಟ ಾರ್ಮ್ ನಲ್ಲಿರುವ ತಂಡವೆಂದರೆ ನ್ಯೂಜಿಲೆಂಡ್. ಆದರೆ, ವಿಶ್ವಕಪ್ಗಳಲ್ಲಿ ಯಾವಾಗಲೂ ಕಿವೀಸ್ ಅಚ್ಚರಿ ಪ್ರದರ್ಶನ ನೀಡಿಸೆಮಿೈನಲ್ ಹಂತವನ್ನು ಸ್ಥಿರವಾಗಿ ಪ್ರವೇಶಿಸಿದ ಇತಿಹಾಸ ಹೊಂದಿದೆ. ಈ ಬಾರಿ ಜಾನ್ ರೈಟ್ ಮಾರ್ಗದರ್ಶನವೂ ಇರುವುದರಿಂದ ಏನಾದರೂ ಪವಾಡ ನಡೆಯಲೂಬಹುದು. ಆದರೆ, ಈ ಸಾಧ್ಯತೆ ನೂರಕ್ಕೆ 10ರಿಂದ 15 ಶೇ. ಮಾತ್ರ.
ಬಾಕಿ 6 ತಂಡಗಳಾದ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಲ್ಲಿ ಯಾವುದೇ ತಂಡ ವಿಶ್ವಕಪ್ ಗೆಲ್ಲಲು ಸಮರ್ಥವೆನಿಸಿದೆ. ಭಾರತ ಉಳಿದೆಲ್ಲವುಗಳಿಗಿಂತ ಪ್ರಬಲ ತಂಡ ಹೊಂದಿದೆ. ತವರಿನ ಅನುಕೂಲ, ದಕ್ಷ ಕೋಚ್ ಮಾರ್ಗದರ್ಶನ ತಂಡಕ್ಕಿದೆ. ಆಸ್ಟ್ರೇಲಿಯಾ ಟೆಸ್ಟ್ನಲ್ಲಿ ಬೋರಲಾಗಿದ್ದರೂ, ಏಕದಿನಗಳಲ್ಲಿ ಈಗಲೂ ನಂ.1 ತಂಡ. ಇಂಗ್ಲೆಂಡ್ನ ಟೆಸ್ಟ್ ಯಶಸ್ಸು ಏಕದಿನಗಳಿಗೂ ವಿಸ್ತರಿಸುವ ಅವಕಾಶವಿದೆ. ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್ ಹಸಿವಿಂದ ಬಳಲಿ ಸದ್ಯ ಕುಂಭಕರ್ಣನಂತೆ ಭೋರ್ಗರೆಯುತ್ತಿರುವ ಪಾಕಿಸ್ತಾನ ಈ ವಿಶ್ವಕಪ್ನ ಅತ್ಯಂತ ಅಪಾಯಕಾರಿ ತಂಡ. ನ್ಯೂಜಿಲೆಂಡ್ ಪ್ರವಾಸದಲ್ಲಿ ಪಾಕ್ನ ಪ್ರದರ್ಶನವೇ ಇದಕ್ಕೆ ನಿದರ್ಶನ. ದಕ್ಷಿಣ ಆಫ್ರಿಕಾ ಉತ್ತಮ ತಂಡವನ್ನು ಹೊಂದಿದ್ದರೂ ಅವರು ಚೋಕರ್ ಅಪಖ್ಯಾತಿಯಿಂದ ಈ ಬಾರಿಯಾದರೂ ಹೊರಬರಬೇಕಿದೆ.ದರೆ ಈ ಪೈಕಿ ಯಾವುದೇ ತಂಡ ಗೆಲ್ಲಬೇಕಾದರೂ, ಅದರಲ್ಲಿ ಕೋಚ್ ವಹಿಸುವ ಪಾತ್ರ ನಿರ್ಣಾಯಕ. ಒಟ್ಟಾರೆ ಈ ವಿಶ್ವಕಪ್ನಲ್ಲಿ ಕರ್ಸ್ಟನ್, ನೀಲ್ಸೆನ್, ಫ್ಲವರ್, ಬೇಲಿಸ್, ಯೂನಿಸ್, ಫೇವರಿಟ್ಕೋಚ್ಗಳು.

ಭಾರತ: ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ)
ದಕ್ಷಿಣ ಆಫ್ರಿಕಾ ಪರ 101 ಟೆಸ್ಟ್, 185 ಏಕದಿನಗಳಲ್ಲಿ ಆಡಿರುವ ಗ್ಯಾರಿ ಕರ್ಸ್ಟನ್ ಭಾರತ ತಂಡವನ್ನು ಟೆಸ್ಟ್ ಕ್ರಿಕೆಟ್ನಲ್ಲಿ ನಂ.1 ಹಾಗೂ ಏಕದಿನಗಳಲ್ಲಿ ನಂ.2 ಶ್ರೇಯಾಂಕಕ್ಕೆ ಮುನ್ನಡೆಸಿದ್ದಾರೆ. ಈ ವಿಶ್ವಕಪ್ನಲ್ಲಿ ಭಾರತ ೇವರಿಟ್ ತಂಡವಾಗಿರುವಂತೆ, ಕರ್ಸ್ಟನ್ ಟ್ರೋಫಿ ಗೆಲ್ಲಲು ೇವರಿಟ್ ಕೋಚ್.

ಆಸ್ಟ್ರೇಲಿಯಾ:ಟಿಮ್ ನೀಲ್ಸೆನ್(ಆಸಿಸ್)
43 ವರ್ಷದ ಟಿಮೋತಿ ಜಾನ್ ನೀಲ್ಸೆನ್ ಆಸ್ಟ್ರೇಲಿಯಾ ತಂಡ 2007ರ ವಿಶ್ವಕಪ್ ಗೆದ್ದ ಬಳಿಕ ಜಾನ್ ಬುಕನನ್ ಉತ್ತರಾಧಿಕಾರಿಯಾಗಿ ನೇಮಕಗೊಂಡವರು. 101 ಪ್ರಥಮ ದರ್ಜೆ ಪಂದ್ಯ ಆಡಿರುವ ವಿಕೆಟ್ಕೀಪರ್-ಬ್ಯಾಟ್ಸ್ಮನ್ ನೀಲ್ಸೆನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿದವರಲ್ಲ.


ಬಾಂಗ್ಲಾದೇಶ:ಜೇಮಿ ಸಿಡ್ಡನ್ಸ್ (ಆಸಿಸ್)
47 ವರ್ಷದ ಜೇಮ್ಸ್ ಡರೆನ್ ಸಿಡ್ಡನ್ಸ್ ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ ಹಾಗೂ ದಕ್ಷಿಣ ಆಸ್ಟ್ರೇಲಿಯಾ ತಂಡಗಳ ಪರ 16 ವರ್ಷ ಪ್ರಥಮ ದರ್ಜೆ ಕ್ರಿಕೆಟ್ ಆಡಿದವರು. 146 ಪಂದ್ಯಗಳಲ್ಲಿ 10,643 ರನ್ ಅವರ ಸಾಧನೆ. ಆಸ್ಟ್ರೇಲಿಯಾ ಪರ 1988ರಲ್ಲಿ ಏಕೈಕ ಏಕದಿನ ಪಂದ್ಯ ಆಡಿರುವ ಜೇಮಿ, 2007ರಿಂದ ಬಾಂಗ್ಲಾದೇಶದ ಕೋಚ್.

ಕೆನಡಾ: ಪುಬುಡು ದಾಸನಾಯಕೆ (ಶ್ರೀಲಂಕಾ)
ಶ್ರೀಲಂಕಾ ಪರ 1993-94ರ ಅವಧಿಯಲ್ಲಿ 11 ಟೆಸ್ಟ್ ಹಾಗೂ 16 ಏಕದಿನ ಪಂದ್ಯ ಆಡಿರುವ 41 ವರ್ಷದ ದಾಸನಾಯಕೆ 1998ರಿಂದ ಕೆನಡಾ ಪರ ಐಸಿಸಿ ಟ್ರೋಫಿಯಲ್ಲಿ ಆಡಿದವರು. 2007ರಿಂದ ಆ ತಂಡದ ಕೋಚ್.


ಇಂಗ್ಲೆಂಡ್:ಆಂಡಿ ್ಲವರ್ (ಜಿಂಬಾಬ್ವೆ)ಜಿಂಬಾಬ್ವೆಯ ಅತ್ಯಂತ ಯಶಸ್ವಿ ಕ್ರಿಕೆಟಿಗ ಆಂಡಿ ್ಲವರ್ ಇಂಗ್ಲೆಂಡ್ ಕೋಚ್ ಆಗಿ ಅಪಾರ ಯಶಸ್ಸು ಪಡೆದಿದ್ದಾರೆ. ಮಾಜಿ ಕೋಚ್ ಪೀಟರ್ ಮೂರ್ಸ್ಗೆ ಸಹಾಯಕರಾಗಿದ್ದ ಆಂಡಿ, ಕೆರಿಬಿಯನ್ ಪ್ರವಾಸದ ಸಂದರ್ಭದಲ್ಲಿ ಹಂಗಾಮಿ ಕೋಚ್ ಆಗಿದ್ದರು. ನಂತರ ಬಡ್ತಿ ಪಡೆದರು. ಇಂಗ್ಲೆಂಡ್ ತಂಡವನ್ನು ಆಶಸ್ ಗೆಲುವಿಗೆ ಮುನ್ನಡೆಸಿರುವುದು ಅವರ ಹೆಗ್ಗಳಿಕೆ. ಇಂಗ್ಲೆಂಡ್ಗೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿರುವ ಆಂಡಿ ಏಕದಿನ ವಿಶ್ವಕಪ್ನಲ್ಲೂ ಅದೇ ಮ್ಯಾಜಿಕ್ ಮೆರೆಯುವ ಉತ್ಸಾಹದಲ್ಲಿದ್ದಾರೆ.

ಐರ್ಲೆಂಡ್: ಫಿಲ್ ಸಿಮ್ಮನ್(ವೆಸ್ಟ್ ಇಂಡೀಸ್)
ಫಿಲ್ ಸಿಮ್ಮನ್ಸ್ 1990ರ ದಶಕದಲ್ಲಿ ವೆಸ್ಟ್ ಇಂಡೀಸ್ನ ಅಗ್ರಮಾನ್ಯ ಆಲ್ರೌಂಡರ್ ಆಗಿದ್ದವರು. 2004ರಲ್ಲಿ ಜಿಂಬಾಬ್ವೆ ಕೋಚ್ ಹುದ್ದೆಗೇರಿದರೂ, ಒಂದು ವರ್ಷ ಬಳಿಕ ಉಚ್ಛಾಟನೆಗೊಂಡ ಅವರು 2007ರಿಂದ ಐರ್ಲೆಂಡ್ ಕೋಚ್ ಆಗಿದ್ದಾರೆ.

ಜಿಂಬಾಬ್ವೆ: ಆಲನ್ ಬುಚರ್ (ಇಂಗ್ಲೆಂಡ್)
ಇಂಗ್ಲೆಂಡ್ ಪರ 1 ಟೆಸ್ಟ್ ಆಡಿರುವ 56 ವರ್ಷದ ಬುಚರ್ ಹಿಂದೆ ಸರ್ರೆ ಕೌಂಟಿ ತಂಡದ ಮುಖ್ಯ ಕೋಚ್ ಆಗಿದ್ದವರು.

ಕೀನ್ಯಾ: ಎಲ್ಡಿನ್ ಬ್ಯಾಪ್ಟಿಸ್ಟೆ (ವೆಸ್ಟ್ ಇಂಡೀಸ್)
51 ವರ್ಷದ ಮಾಜಿ ವೇಗದ ಬೌಲರ್ ಬ್ಯಾಪ್ಟಿಸ್ಟೆ ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಗಳಲ್ಲಿ ಆಡಿದ್ದು ಆ ಎಲ್ಲಾ ಪಂದ್ಯಗಳಲ್ಲಿ ವಿಂಡೀಸ್ ಗೆದ್ದಿರುವುದು ವಿಶೇಷ. 43 ಏಕದಿನಗಳಲ್ಲೂ ಆಡಿರುವ ಅವರು 2009ರಿಂದ ಕೀನ್ಯಾ ಕೋಚ್.

ಹಾಲೆಂಡ್: ಪೀಟರ್ರ್ನೆನ್ (ಆಸ್ಟ್ರೇಲಿಯಾ)
ಕೇವಲ 5 ಪ್ರಥಮ ದರ್ಜೆ ಪಂದ್ಯ ಆಡಿರುವ ಡ್ರಿನೆನ್ 2006ರಲ್ಲಿ ಸ್ಕಾಟ್ಲೆಂಡ್ ಕೋಚ್ ಆಗಿದ್ದರು. ಸದ್ಯ ಹಾಲೆಂಡ್ಗೆ ಕೋಚ್.

ನ್ಯೂಜಿಲೆಂಡ್: ಜಾನ್ ರೈಟ್ (ನ್ಯೂಜಿಲೆಂಡ್)
ಈ ವಿಶ್ವಕಪ್ನಲ್ಲಿರುವ ಅತ್ಯಂತ ಹಿರಿಯ ಹಾಗೂ ಅನುಭವಿ ಕೋಚ್ 57 ವರ್ಷದ ಜಾನ್ ರೈಟ್ 2003ರಲ್ಲಿ ಭಾರತವನ್ನು ೈನಲ್ಗೆ ಮುನ್ನಡೆಸಿದ್ದರು. ಸದ್ಯ ಮಾರ್ಕ್ ಗ್ರೇಟ್ಬ್ಯಾಚ್ ತೆರವುಗೊಳಿಸಿದ ಕಿವೀಸ್ ಕೋಚ್ ಹುದ್ದೆ ತುಂಬಿದ್ದಾರೆ.

ಪಾಕಿಸ್ತಾನ: ವಕಾರ್ ಯೂನಿಸ್ (ಪಾಕಿಸ್ತಾನ)
ಸಾರ್ವಕಾಲಿಕ ಶ್ರೇಷ್ಠ ವೇಗದ ಬೌಲರ್ಗಳ ಯಾದಿಯಲ್ಲಿ ಸ್ಥಾನ ಪಡೆದಿರುವ ವಕಾರ್ ಯೂನಿಸ್ ಕೋಚ್ ಹುದ್ದೆಗೇರಿದ ಮೇಲೆ ಪಾಕ್ ತಂಡ ಮರುಹುಟ್ಟು ಪಡೆಯುತ್ತಿದೆ.

ದಕ್ಷಿಣ ಆಫ್ರಿಕಾ: ಕೊರ್ರಿ ವಾನ್ ಝಿಲ್ (ದ. ಆಫ್ರಿಕಾ)
ಕೇವಲ 2 ಏಕದಿನ ಪಂದ್ಯ ಆಡಿರುವ ವಾನ್ ಝಿಲ್ ಮಾಜಿ ಕೋಚ್ ಮಿಕಿ ಆರ್ಥರ್ಸ್ಗೆ ಸಹಾಯಕರಾಗಿದ್ದರು. ನಂತರ ಬಡ್ತಿ ಪಡೆದರು.

ಶ್ರೀಲಂಕಾ: ಟ್ರೆವರ್ ಬೇಲಿಸ್ (ಆಸ್ಟ್ರೇಲಿಯಾ)
ನ್ಯೂ ಸೌತ್ ವೇಲ್ಸ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಬೇಲಿಸ್ 2007ರಿಂದ ಲಂಕಾ ಕೋಚ್.


ವೆಸ್ಟ್ ಇಂಡೀಸ್: ಒಟ್ಟಿಸ್ ಗಿಬ್ಸನ್ (ವಿಂಡೀಸ್)
ವಿಂಡೀಸ್ ಪರ 2 ಟೆಸ್ಟ್, 15 ಏಕದಿನಗಳಲ್ಲಿ ಆಡಿರುವ ಮಾಜಿ ವೇಗದ ಬೌಲರ್ ಗಿಬ್ಸನ್ ಹಿಂದೆ ಇಂಗ್ಲೆಂಡ್ಗೆ ಬೌಲಿಂಗ್ ಕೋಚ್ ಆಗಿದ್ದರು.

ನೆನಪಾಗುವವರು
2007ರ ಕೆರಿಬಿಯನ್ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ ಪಾಕಿಸ್ತಾನ ಆಘಾತಕಾರಿಯಾಗಿ ಸೋತ ಬಳಿಕ ಹೋಟೆಲ್ ಕೊಠಡಿಯಲ್ಲಿ ನಿಗೂಢ ರೀತಿಯಲ್ಲಿ ಕೊಲೆಯಾದ ಪಾಕಿಸ್ತಾನದ ಮಾಜಿ ಕೋಚ್ ಬಾಬ್ ವೂಲ್ಮರ್....
ಸರ್ವಾಧಿಕಾರಿ ಧೋರಣೆಯಿಂದ ಎಲ್ಲರ ವೈರತ್ವ ಕಟ್ಟಿಕೊಂಡು, 2007ರಲ್ಲಿ ಭಾರತ ಮೊದಲ ಸುತ್ತಿನಲ್ಲೇ ನಿರ್ಗಮಿಸಲು ಕಾರಣರಾದ ಗ್ರೆಗ್ ಚಾಪೆಲ್....
ಶ್ರೀಲಂಕಾ ತಂಡವನ್ನು ೈನಲ್ಗೆ ಮುನ್ನಡೆಸಿದ ದಕ್ಷ ಕೋಚ್ ಟಾಮ್ ಮೂಡಿ...

No comments:

Post a Comment