Thursday, January 20, 2011

ಸ್ವಭಾವ vs ಸಾಮರ್ಥ್ಯ


ಒಳ್ಳೆಯವರಾಗಿರಬೇಕೋ, ಸಮರ್ಥರಾಗಿರಬೇಕೋ...
ಕ್ರೀಡೆಯಲ್ಲೂ ಕಚೇರಿಗಳಲ್ಲೂ ಆಗಾಗ ಇಂಥ ಸಮಸ್ಯೆ ಎದುರಾಗುತ್ತಿರುತ್ತದೆ.
ತಮ್ಮ ಜೊತೆ ಕೆಲಸ ಮಾಡುವವರು ಸಮರ್ಥರಾಗಿರಬೇಕೇ ಅಥವಾ ಒಳ್ಳೆಯವರಾಗಿರಬೇಕೇ ಎಂಬ ಸಂದಿಗ್ಧ ಅದು.ೆಂದರೆ ಎಲ್ಲಾ ಒಳ್ಳೆಯವರೂ ಕೆಲಸದ ವಿಷಯದಲ್ಲಿ ದಕ್ಷರಾಗಿರುವುದಿಲ್ಲ. ಅವರಿಗೆ ಆತ್ಮವಿಶ್ವಾಸ ಕಡಿಮೆ ಇರುತ್ತದೆ. ಎಷ್ಟೋ ಬಾರಿ ಅತಿಯಾದ ವಿನಯ ಹಾಗೂ ಒಳ್ಳೆಯತನ ಅವರ ಅಸಾಮರ್ಥ್ಯದ ಕುರಿತ ಕೀಳರಿಮೆಯೊಂದಿಗೆ ನೇರ ಸಂಪರ್ಕ ಹೊಂದಿರುತ್ತದೆ.ೆಲಸದಲ್ಲಿ ಚುರುಕಿರುವವರು ಯಾವಾಗಲೂ ವಿಧೇಯರಾಗಿ, ಒಳ್ಳೆಯವರಾಗಿ ಇರಲೇಬೇಕೆಂದೇನೂ ಇಲ್ಲ. ಅವರು ತಮ್ಮ ಪಾಲಿನ ಕೆಲಸವನ್ನು ಆಕ್ಷೇಪಕ್ಕೆ ಅವಕಾಶವಿಲ್ಲದಂತೆ ಮಾಡುತ್ತಿರುತ್ತಾರೆ. ಆದರೆ, ತಮ್ಮ ಮೇಲಿನವರ ಹಿಡಿತಕ್ಕೆ ಸಿಗುವುದಿಲ್ಲ. ಅವರಲ್ಲಿ ತಮ್ಮ ಸಾಮರ್ಥ್ಯದ ಬಗ್ಗೆ ಸ್ವಲ್ಪ ಆತ್ಮವಿಶ್ವಾಸ, ಹೆಚ್ಚು ಅಹಂ, ಹುಂಬತನ ಎಲ್ಲವೂ ಇರುತ್ತದೆ. ಂಥ ಇಬ್ಬರು ವ್ಯಕ್ತಿಗಳ ನಡುವೆ ಆಯ್ಕೆ ಮಾಡುವ ಪ್ರಸಂಗ ಬಂದಾಗ ಯಾರು ಹಿತವರು ಎಂಬ ಸಂದಿಗ್ಧ ಎದುರಾಗುವುದು ಸಹಜ. ವಿಶ್ವಕಪ್ಗೆ ಭಾರತ ತಂಡ ಆಯ್ಕೆ ಮಾಡುವಾಗ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಮರ್ಥ್ಯಕ್ಕಿಂತ ಒಳ್ಳೆಯತನವೇ ಇರಲಿ ಎಂದರು. ವಿಶ್ವಕಪ್ ತಂಡದಿಂದ ಶ್ರೀಶಾಂತ್ ಹೊರಗುಳಿದಿದ್ದು, ಆಶಿಶ್ ನೆಹ್ರಾ ಆಯ್ಕೆಯಾಗಿದ್ದು ಇದೇ ರೀತಿ.
ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ಶ್ರೀಶಾಂತ್ ಅದ್ಭುತ ಪ್ರದರ್ಶನ ನೀಡಿದ್ದರು. ಹಾಲಿ ಏಕದಿನ ಸರಣಿಯಲ್ಲಿ ಆಶಿಶ್ ನೆಹ್ರಾ ಪ್ರದರ್ಶನ ಅಷ್ಟಕ್ಕಷ್ಟೇ. ಮೊದಲ ಎರಡು ಏಕದಿನಗಳಲ್ಲಂತೂ ಅವರ ಬೌಲಿಂಗ್ ನಿಕೃಷ್ಟ ಮಟ್ಟದ್ದಾಗಿತ್ತು. ನೆಹ್ರಾ ಅಂಥ ಕಳಪೆ- ಕ್ಲಬ್ ದರ್ಜೆಯ ಬೌಲರ್ ಅಲ್ಲವಾದರೂ, ವರ್ತಮಾನದ ಾರ್ಮ್ ಆಧಾರದ ಮೇಲೆ ತಂಡ ಆಯ್ಕೆ ಮಾಡಿದ್ದರೆ, ಶ್ರೀಶಾಂತ್ ಆಯ್ಕೆಯಾಗುತ್ತಿದ್ದರು. ನೆಹ್ರಾ ಹೊರಗುಳಿಯುತ್ತಿದ್ದರು. ಆದರೆ, ಕೆಲವು ವರದಿಗಳ ಪ್ರಕಾರ ಕೇರಳದ ವೇಗಿ ಬೇಡವೇ ಬೇಡ ಎಂದು ಧೋನಿ ಪಟ್ಟು ಹಿಡಿದರು. ಹಾಗಾಗಿ ನೆಹ್ರಾ ಆಯ್ಕೆ ಅನಿವಾರ್ಯವಾಯಿತು.
ಧೋನಿ ಹಾಗೇಕೆ ಮಾಡಿದರು?
ಅದಕ್ಕೆ ಕಾರಣ ಶ್ರೀಶಾಂತ್ ಸ್ವಭಾವ. ಈ ಹುಡುಗ ಮುಂಗೋಪಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ತುಂಟಾಟ, ಹುಡುಗಾಟ, ಹಟ ಎಲ್ಲವೂ ಈ ಹುಡುಗನಿಗೆ ಜಾಸ್ತಿ. ಅತಿ ವಿನಯ, ವಿಧೇಯತೆ ಈತನಿಗೆ ಗೊತ್ತಿಲ್ಲ. ಅನಗತ್ಯವಾಗಿ ಯಾರನ್ನೂ ಓಲೈಸುವುದೂ ಇಲ್ಲ. ಮೌನವಾಗಿರುವುದೂ ಗೊತ್ತಿಲ್ಲ. ತಾಳ್ಮೆಯೂ ಸ್ವಲ್ಪ ಕಡಿಮೆ. ಯಾವುದೇ ವಿಷಯದಕ್ಕೂ ತಕ್ಷಣ ಪ್ರತಿಕ್ರಿಯಿಸುವುದು ರೂಢಿ. ಆತುರಗಾರನಿಗೆ ಬುದ್ಧಿಮಟ್ಟ ಎನ್ನುವುದು ಇವರಿಗೆ ಅನ್ವರ್ಥ. ರಂಗೋಲಿ ಕೆಳಗೆ ನುಸುಳುವುದಿರಲಿ, ಚಾಪೆ ಕೆಳಗೆ ತೂರುವ ಜಾಣತನವೂ ಗೊತ್ತಿಲ್ಲ. ಕೇವಲ ತನ್ನ ಪ್ರದರ್ಶನವೊಂದೇ ತನ್ನನ್ನು ಕಾಪಾಡುತ್ತದೆ ಎಂದು ನಂಬಿದಾತ. ಇದೇ ಕಾರಣಕ್ಕೆ ಕಳೆದ ಅನೇಕ ವರ್ಷಗಳಿಂದ ಭಾರತ ತಂಡದ ಪರ ಆಡುತ್ತಿದ್ದರೂ, ಇವತ್ತಿಗೂ ಶ್ರೀಶಾಂತ್ ಅಕ್ಷರಶಃ ಏಕಾಂಗಿ. ತಂಡದಲ್ಲಿ ಯಾರೂ ಅಂತರಂಗದ ಗೆಳೆಯರಿಲ್ಲ. ಕಷ್ಟಕಾಲದಲ್ಲಿ ಬೆಂಬಲಕ್ಕೆ ನಿಲ್ಲುವವರಿಲ್ಲ. ಸ್ವಭಾವದಲ್ಲಿ ಒರಟನಾದರೂ, ಚೆನ್ನಾಗಿ ಆಡುತ್ತಾನೆ. ಆ ಕಾರಣಕ್ಕಾದರೂ ತಂಡದಲ್ಲಿರಲಿ ಎಂದು ಶಿಾರಸು ಮಾಡುವವರಿಲ್ಲ.
ನಾಯಕ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯುದ್ದಕ್ಕೂ ಶ್ರೀಶಾಂತ್ರನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಬಂದಿದ್ದರು. ಅವರನ್ನು ಹದ್ದುಬಸ್ತಿನಲ್ಲಿಡುವುದು ಕಷ್ಟ ಎಂದು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದರು. ಬೌಲಿಂಗ್ ಮಾಡುವಾಗ ತುಂಬಾ ಕಾಲಹರಣ ಮಾಡುತ್ತಾರೆ, ಎಲ್ಲೆ ಮೀರಿ ವರ್ತಿಸುತ್ತಾರೆ ಎಂದೆಲ್ಲಾ ಸ್ಕೂಲ್ ಹುಡುಗನಂತೆ ದೂರಿಕೊಂಡಿದ್ದರು.
ಧೋನಿ ಬಹಳ ಚಾಣಾಕ್ಷ ನಾಯಕ ಎನ್ನುವುದು ಎಲ್ಲೆಡೆ ಇರುವ ಅಭಿಪ್ರಾಯ. ಆದರೆ, ಶ್ರೀಶಾಂತ್ ವಿಷಯದಲ್ಲಿ ಅವರು ಪ್ರದರ್ಶಿಸಿದ್ದು ಅಪ್ರಬುದ್ಧತೆ. ಶ್ರೀಯನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗದಿದ್ದರೆ, ಅದು ಸ್ವತಃ ಧೋನಿಯ ವೈಲ್ಯವೇ ಹೊರತು ಬೇರೇನೂ ಅಲ್ಲ. ಅದನ್ನು ಬಹಿರಂಗವಾಗಿ ರಾಣಾರಂಪ ಮಾಡುವ ಅಗತ್ಯವಿರಲಿಲ್ಲ. ಅಷ್ಟಕ್ಕೂ ಶ್ರೀಶಾಂತ್ರ ಬುದ್ಧಿ ತಿದ್ದುವುದಕ್ಕೆ ಧೋನಿ ಯಾರು? ತಾವು ಕ್ರಿಕೆಟ್ ತಂಡದ ನಾಯಕನೇ ಹೊರತು ಸ್ಕೂಲ್ ಟೀಚರ್ ಅಲ್ಲ ಎನ್ನುವುದು ಅವರಿಗೆ ನೆನಪಿರಬೇಕು. ತಮ್ಮ ಕೈಕೆಳಗಿನ ಆಟಗಾರರಿಂದ ಉತ್ತಮ ಪ್ರದರ್ಶನ ಹೊರತೆಗೆಯಬೇಕೇ ಹೊರತು, ಅವರು ದೇವತೆಗಳಂತೆ ವರ್ತಿಸಲಿ ಎಂದು ಅಪೇಕ್ಷಿಸುವ ಅಧಿಕಾರ ಅವರಿಗಿಲ್ಲ.
ನಿಜ, ಎಲ್ಲಾ ಕ್ರೀಡೆಗಳಂತೆ ಕ್ರಿಕೆಟ್ನಲ್ಲೂ ಕ್ರೀಡಾಮನೋಭಾವ, ಸದ್ವರ್ತನೆಯ ಲಕ್ಷ್ಮಣರೇಖೆ ಮೀರದಂತೆ ನೋಡಿಕೊಳ್ಳುವುದು ತಂಡದ ನಾಯಕನ ಕರ್ತವ್ಯ. ಆದರೆ, ಆಕ್ರಮಣಶೀಲತೆಗೂ ದುಷ್ಟ ಪ್ರವೃತ್ತಿಗೂ ವ್ಯತ್ಯಾಸವಿದೆ. ಒಂದು ವೇಳೆ ತಂಡದ ಆಟಗಾರರು ಎಲ್ಲೆ ಮೀರಿ ವರ್ತಿಸಿದ ಸಂದರ್ಭದಲ್ಲೂ ನಾಯಕರಾದವರು ಅದನ್ನು ಬೇರೆ ಮಾರ್ಗದಲ್ಲಿ ಸರಿಪಡಿಸಬೇಕೇ ಹೊರತು ಬಹಿರಂಗವಾಗಿ ತಪ್ಪಿತಸ್ಥ ಆಟಗಾರನನ್ನು ನೇಣಿಗೇರಿಸಬಾರದು.ರಡು ವರ್ಷ ಕೆಳಗೆ ಆಸ್ಟ್ರೇಲಿಯಾ ಪ್ರವಾಸದಲ್ಲೂ ಆಂಡ್ರ್ಯೂ ಸೈಮಂಡ್ಸ್ ವಿಚಾರದಲ್ಲಿ ಹರ್ಭಜನ್ ಸಿಂಗ್ ಎಲ್ಲೆ ಮೀರಿದ್ದರು. ಬಹುಶಃ ಧೋನಿ ಆಗ ನಾಯಕರಾಗಿದ್ದಿದ್ದರೆ ಹರ್ಭಜನ್ರನ್ನು ತಕ್ಷಣ ಮನೆಗೆ ಕಳಿಸುತ್ತಿದ್ದರೋ ಏನೋ. ಆದರೆ, ಅನಿಲ್ ಕುಂಬ್ಳೆ ಬಹಳ ವಿವೇಚನೆಯಿಂದ, ರಾಜತಾಂತ್ರಿಕವಾಗಿ ನಡೆದುಕೊಂಡರು. ಮುಳ್ಳಿನ ಮೇಲೆ ಒಣಗಲು ಹಾಕಿದ ಬಟ್ಟೆಯನ್ನು ತೆಗೆಯುವಷ್ಟೇ ನಾಜೂಕಾಗಿ ಪ್ರಕರಣವನ್ನು ಬಗೆಹರಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ತಂಡದ ಪ್ರತಿಯೊಬ್ಬರೂ ಹರ್ಭಜನ್ರನ್ನು ಬೆಂಬಲಿಸುವ ಮೂಲಕ ಅವರಿಗೆ ಅನಾಥಪ್ರಜ್ಞೆ ಕಾಡದಂತೆ ನೋಡಿಕೊಂಡರು.
ದಕ್ಷಿಣ ಆಫ್ರಿಕಾದಲ್ಲಿ ಶ್ರೀಶಾಂತ್ಗೆ ಇಂಥ ಅನಾಥಪ್ರಜ್ಞೆಯೇ ಕಾಡಿತ್ತು.ಂತೂ ಹೇಳಿದ ಮಾತು ಕೇಳದಿದ್ದರೆ ಕೆಲಸದಿಂದ ತೆಗೆದುಹಾಕು ಎಂಬ ಕಾರ್ಪೋರೇಟ್ ಬಾಸ್ಗಳ ಧೋರಣೆಯಂತೆ ಧೋನಿ ಸಹ ವರ್ತಿಸಿ ಶ್ರೀಶಾಂತ್ರ ಕೊಕ್ಗೆ ಕಾರಣರಾದರು.್ರಕೆಟ್ ಮೈದಾನದಲ್ಲಿ ಆಕ್ರಮಣಶೀಲರಾಗಿರುವುದು ತಪ್ಪಲ್ಲ. ಆದರೆ, ಮೋಸಗಾರ ಆಗಿರಬಾರದು. ಅಷ್ಟಕ್ಕೂ ಆಕ್ರಮಣಶೀಲ ಗುಣವೆನ್ನುವುದು ಇಲ್ಲದಿದ್ದರೆ ಕ್ರಿಕೆಟ್ ಸಪ್ಪೆ ಎನಿಸಿಬಿಡುತ್ತದೆ. ಕ್ರೀಡೆಗೆ ಶ್ರೀಶಾಂತ್ರಂಥ ವಿಲಕ್ಷಣ ವ್ಯಕ್ತಿಗಳೂ ಬೇಕು.
ಹಾಗೆ ನೋಡಿದರೆ, ಉತ್ತಮ ಆಟಗಾರರಾಗಿಯೂ ಸ್ವಭಾವದಿಂದ ಕಷ್ಟ-ನಷ್ಟ ಅನುಭವಿಸಿದವರ ಪೈಕಿ ಶ್ರೀಶಾಂತ್ ಮೊದಲಿಗರೂ ಅಲ್ಲ, ಕೊನೆಯವರೂ ಅಲ್ಲ. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ಗೆ ಇಂಥ ಪಟ್ಟಿಯಲ್ಲಿ ನಂ.1 ಸ್ಥಾನ. ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಆಂಡ್ರೆ ನೆಲ್, ನ್ಯೂಜಿಲೆಂಡ್ನ ಜೆಸ್ಸಿ ರೈಡರ್ ಇಂಥ ಕೆಲವು ಉದಾಹರಣೆಗಳು.
ಪಾಕಿಸ್ತಾನದಲ್ಲಿ ಶೋಯಿಬ್ ಅಖ್ತರ್ರನ್ನು ಹದ್ದುಬಸ್ತಿನಲ್ಲಿಡುವುದು ಯಾವ ನಾಯಕರಿಂದಲೂ ಸಾಧ್ಯವಾಗಲಿಲ್ಲ. ಬಹುಶಃ ಅಖ್ತರ್ಗೆ ಮೂಗುದಾರ ಹಾಕುವ ಪ್ರಯತ್ನಮಾಡುವ ಬದಲು ನಾಯಕ ಪಟ್ಟ ಕಟ್ಟಿದ್ದರೆ ಇಷ್ಟು ಹೊತ್ತಿಗೆ ಪಾಕ್ ಕ್ರಿಕೆಟ್ ಉದ್ಧಾರವಾಗಿಬಿಡುವ ಸಾಧ್ಯತೆ ಇತ್ತು. ಇದಕ್ಕೆ ಎರಡು ಉದಾಹರಣೆಯೆಂದರೆ, ರಿಕಿ ಪಾಂಟಿಂಗ್ ಮತ್ತು ಸೌರವ್ ಗಂಗೂಲಿ. ಇವರಿಬ್ಬರೂ ನಾಯಕರಾಗುವ ಮುನ್ನ ಭಾರೀ ಅಹಂಕಾರಿಗಳೆಂದು ಹೆಸರಾಗಿದ್ದರು. ಯಾರ ಮಾತನ್ನೂ ಕೇಳುತ್ತಿರಲಿಲ್ಲ. ಮೈದಾನಕ್ಕೆ ನೀರು ಕೊಂಡುಹೋಗಲು ಒಪ್ಪುತ್ತಿರಲಿಲ್ಲ. ಆದರೆ, ಅವರೇ ನಾಯಕರಾದ ಮೇಲೆ ಆಯಾ ತಂಡಗಳ ಅದೃಷ್ಟವೇ ಬದಲಾಯಿತು. ಅವರ ಆತ್ಮವಿಶ್ವಾಸ, ಆಕ್ರಮಣಶೀಲ ಧೋರಣೆಯೇ ತಂಡಗಳನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿತು.ಆಧಾರದ ಮೇಲೆ ಹೇಳುವುದಾದರೆ ಬಹುಶಃ ಶ್ರೀಶಾಂತ್ ಕೂಡ ಕ್ಯಾಪ್ಟನ್ಸಿ ಮೆಟೀರಿಯಲ್ಲೇ ಆಗಿರಬಹುದು!

No comments:

Post a Comment