Thursday, December 16, 2010

ಬೆಂಕಿಯಲ್ಲಿಅರಳಿದ ಹೂವುಗಳು


೧೦೦ ಮೀ. ಓಟ 10 ಸೆಕೆಂಡ್ ಒಳಗೆ ಮುಗಿದುಹೋಗುತ್ತದೆ. ಬಾಕ್ಸಿಂಗ್ ಪಂದ್ಯಕ್ಕೆ ಹೆಚ್ಚೆಂದರೆ 6 ನಿಮಿಷ ಸಾಕು. ಬ್ಯಾಡ್ಮಿಂಟನ್ ಪಂದ್ಯಗಳು ಸರಾಸರಿ ಅರ್ಧ ಗಂಟೆಯಲ್ಲಿ ಮುಗಿಯುತ್ತವೆ. ಇಷ್ಟು ಕಡಿಮೆ ಅವಧಿಯಲ್ಲಿ ಕ್ರೀಡಾ ಪಟುಗಳು ಕೀರ್ತಿ ಶಿಖರ ಏರಬೇಕು. ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬೇಕು. ಆದರೆ, ಈ ಹತ್ತು ಸೆಕೆಂಡ್, 6 ನಿಮಿಷ, ಅರ್ಧ ಗಂಟೆಗಳಲ್ಲಿ ಗಳಿಸಬಹುದಾದ ವಿಶ್ವ ಮನ್ನಣೆಗಾಗಿ ಕ್ರೀಡಾಪಟುಗಳು ಅದೆಷ್ಟು ಕಷ್ಟ-ಕೋಟಲೆ ಅನುಭವಿಸಬೇಕಾಗುತ್ತದೆ? ಅದೆಂಥಾ ತ್ಯಾಗಗಳನ್ನು ಮಾಡಬೇಕಾಗುತ್ತದೆ? ಭಾರತದಲ್ಲಿ ಶ್ರೀಮಂತ ಹಿನ್ನೆಲೆಯಿಂದ ಯಶಸ್ವಿ ಕ್ರೀಡಾಪಟುಗಳಾಗುವವರ ಸಂಖ್ಯೆ ಬಹಳ ಕಡಿಮೆ. ಎಲ್ಲೋ ಸಾವಿರಕ್ಕೆ ಒಂದು. ಜೊತೆಗೆ ಪ್ರತಿಯೊಬ್ಬ ಕ್ರೀಡಾ ಪಟುವಿನ ಯಶಸ್ಸಿನ ಹಿಂದೆಯೂ ಅನೇಕ ರೋಚಕ, ಮೈಝುಮ್ಮೆನಿಸುವ, ಮರುಕ ಹುಟ್ಟಿಸುವ ಕಥೆಗಳಿರುತ್ತವೆ.
ಭಾರತದ ಕೆಲವು ಯಶಸ್ವಿ ಕ್ರೀಡಾಪಟುಗಳ ಯಶಸ್ಸಿನ ಹಿಂದಿನ ಕಥೆಗಳು ಇಲ್ಲಿವೆ.ೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ಗೆ ಬಂದ ಆರಂಭದ ದಿನಗಳಲ್ಲಿ ಅವರು ದಿನಕ್ಕೆ ಎರಡು ಲೀ. ಹಾಲು ಕುಡಿಯುತ್ತಾರೆ ಎನ್ನುವುದು ದೊಡ್ಡ ಸುದ್ದಿಯಾಗಿತ್ತು. ಕ್ರೀಡಾಪಟುಗಳ ಜೀವನದಲ್ಲಿ ಪೌಷ್ಠಿಕ ಆಹಾರಕ್ಕೆ ಬಹುಮುಖ್ಯ ಪಾತ್ರಘಿ. ಅದಿಲ್ಲದೆ ಎಷ್ಟೇ, ಅಭ್ಯಾಸ ಮಾಡಿದರೂ,ಲಾಗ ಹೊಡೆದರೂ, ಸ್ಪರ್ಧೆಯಲ್ಲಿ ಗೆಲ್ಲಲಾಗುವುದಿಲ್ಲ.
ನಮ್ಮ ಕುಸ್ತಿ ವಿಶ್ವಚಾಂಪಿಯನ್ ಸುಶೀಲ್ ಕುಮಾರ್ ಕಥೆಯೂ ಇದಕ್ಕಿಂತ ಭಿನ್ನವಲ್ಲ. 13ನೇ ವಯಸ್ಸಿನಲ್ಲೇ ಅಖಾಡಕ್ಕಿಳಿದು ಮೈಗೆ ಮಣ್ಣು ಮೆತ್ತಿಸಿಕೊಂಡಿದ್ದ ಸುಶೀಲ್ ದೆಹಲಿಯ ಛತ್ರಸಾಲ ಕ್ರೀಡಾಂಗಣದಲ್ಲಿದ್ದುಕೊಂಡು ಅಭ್ಯಾಸ ನಡೆಸುತ್ತಿದ್ದರು. ಅವರ ಅಪ್ಪ ದಿನಂಪ್ರತಿ ಕೆಲಸಕ್ಕೆ ಹೋಗುವಾಗ 2 ಲೀ. ಹಾಲು, ಕಾಲು ಕೆಜಿ ತಾಜಾ ಪನ್ನೀರ್, ಸೇಬು, ಬಾದಾಮಿ ಮತ್ತು 100 ಗ್ರಾಂನಷ್ಟು ಆಗಷ್ಟೇ ಕಾಯಿಸಿದ ಬೆಣ್ಣೆಯನ್ನು ಮಗನಿಗೆಂದು ತಂದುಕೊಡುತ್ತಿದ್ದರು. ಇಷ್ಟು ಆಹಾರ ಪ್ರತೀ ದಿನ ಸುಶೀಲ್ಗೆ ಅಗತ್ಯವಿತ್ತು ಅವರ ಕುಟುಂಬ ಆರ್ಥಿಕವಾಗಿ ಅಷ್ಟೇನೂ ಗಟ್ಟಿಯಾಗಿರಲಿಲ್ಲಘಿ. ಆದರೂ, ಒಂದು ವಿಷಯದಲ್ಲಿ ಸುಶೀಲ್ ಅದೃಷ್ಟವಂತ. ಅವರಿಗೆ ಅವರದೇ ಆದ ಹೊಲವಿತ್ತು. ಎಮ್ಮೆ ಸಾಕಿದ್ದರು. ಹಾಗಾಗಿ ಬೆಳೆದಿದ್ದರಲ್ಲಿ ಒಂದು ಪಾಲನ್ನು ಮಗನ ಡಯೆಟ್ಗಿಂದು ಮೀಸಲಿಡುತ್ತಿದ್ದರು.ದರೆ, ವಿಶ್ವ ನಂ.1 ಬಾಕ್ಸರ್ ವಿಜೇಂದರ್ಗೆ ಇಂಥ ಅನುಕೂಲವಿರಲಿಲ್ಲ. ಆದರೂ, ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಅದರ ಬಿಸಿ ತಟ್ಟದಂತೆ ಅಪ್ಪ-ಅಮ್ಮ ನೋಡಿಕೊಳ್ಳುತ್ತಿದ್ದರು. ತ್ತ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟ ಪಾಲಿಗೆ ಬಾಲ್ಯವೆನ್ನುವುದು ಪಾನಿಪುರಿ, ಬೇಲ್ಪುರಿ, ಸಮೋಸ, ಐಸ್ಕ್ರೀಮ್, ಕ್ಯಾಂಡಿಗಳು, ಸಿಹಿ ತಿಂಡಿ ಹಾಗೂ ಹುರಿದ ತಿಂಡಿಗಳಿಲ್ಲದ ಸಪ್ಪೆ ಬದುಕಾಗಿತ್ತುಘಿ. ಎಲ್ಲಾ ಮಕ್ಕಳೂ ತಿನ್ನುವಾಗ ನನಗೇಕೆ ಈ ಶಿಕ್ಷೆ ಎಂದು ಜ್ವಾಲಾ ಕಣ್ಣೀರು ಹಾಕಿದ ದಿನಗಳೂ ಇದ್ದವು.ತ್ತೀಚೆಗೆ ಹಾಂಕಾಂಗ್ ಓಪನ್ ಗೆದ್ದಿರುವ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ವಿಷಯದಲ್ಲೂ ಅಷ್ಟೇ. ಬೆಳಗಿನ ಜಾವ 4ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸೈನಾ ಒಂದೆಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುತ್ತಿರುತ್ತಿದ್ದರು, ಓದುತ್ತಿದ್ದರು, ಅಭ್ಯಾಸ ನಡೆಸುತ್ತಿದ್ದರು. 8ನೇ ವರ್ಷದಿಂದ ಇದೇ ಅವರ ದೈನಂದಿನ ವೇಳಾಪಟ್ಟಿಯಾಗಿತ್ತು. ಕ್ರೀಡಾಂಗಣಕ್ಕೆಂದು ಅಪ್ಪನ ಬೈಕ್ನಲ್ಲಿ ಇಲ್ಲವೇ ಬಸ್ ಅಥವಾ ರೈಲಿನಲ್ಲಿ ತೆರಳುವಾಗ ಅವರಿಗೆ ದಾರಿಯಲ್ಲಿಯೇ ನಿದ್ರೆ ಬರುತ್ತಿತ್ತುಘಿ. ಇವತ್ತೊಂದು ದಿನ ಅಭ್ಯಾಸ ಬೇಡವಮ್ಮಾ ಎಂದು ಅವರು ಅಮ್ಮನ ಬಳಿ ಗೋಗರೆಯುತ್ತಿದ್ದರು. ಆದರೆ, ಅಮ್ಮ ಕೇಳುತ್ತಿರಲಿಲ್ಲ.ಬಲವಂತ ಮಾಡಿ ಕಳಿಸುತ್ತಿದ್ದರು. ಭಾನುವಾರ ಬಂತೆಂದರೆ ಸೈನಾ ಪಾಲಿಗೆ ಕೇವಲ ನಿದ್ರೆ, ನಿದ್ರೆ ಮತ್ತು ಕೇವಲ ನಿದ್ರೆ ಮಾತ್ರ.
ಸತತ ಐದು ಬಾರಿಯ ವಿಶ್ವ ಚಾಂಪಿಯನ್ ಎಂಸಿ ಮೇರಿಕೋಮ್ಗೆ ಭಾನುವಾರವೂ ವಿಶ್ರಾಂತಿ ಲಭಿಸುತ್ತಿರಲಿಲ್ಲ. ಶಾಲೆಗೆ ರಜಾ ಇದ್ದ ದಿನ ಎಲ್ಲಾ ಮಕ್ಕಳಂತೆ ಅವರಿಗೆ ಮಜಾ ಅನುಭವಿಸುವ ಮಾತೇ ಇರಲಿಲ್ಲ. ಅಪ್ಪ ಅಮ್ಮನ ಜೊತೆ ಜಮೀನಿನಲ್ಲಿ ದುಡಿಯಬೇಕಾಗಿತ್ತುಘಿ. ಶಾಲೆ ಇದ್ದ ದಿನವೂ ಅಪರಾಹ್ನದ ಹೊತ್ತಿನಲ್ಲಿ ಹೊಲಕ್ಕೆ ಹೋಗಿ ಕೆಲಸ ಮಾಡಬೇಕಾಗಿತ್ತು. ಸಂಜೆಯಾದ ಮೇಲೆ ಮನೆಗೆಲಸದಲ್ಲಿ ಅಮ್ಮನಿಗೆ ಸಹಾಯ ಮಾಡಬೇಕಿತ್ತುಘಿ. ಇಬ್ಬರು ತಮ್ಮಂದಿರು ಹಾಗೂ ತಂಗಿಯನ್ನು ನೋಡಿಕೊಳ್ಳಬೇಕಿತ್ತು. ಬಡಮಕ್ಕಳಿಗೆ ಬಾಲ್ಯವೆಂದರೇನೆಂದೇ ತಿಳಿದಿರುವುದಿಲ್ಲ ಎಂಬ ಮಾತು ಮೇರಿಕೋಮ್ ವಿಷಯದಲ್ಲಿ ನಿಜವಾಗಿತ್ತು.ದರೂ, ಮೇರಿಕೋಮ್ಗೊಂದು ಕನಸಿತ್ತು. ಆತ್ಮವಿಶ್ವಾಸವಿತ್ತು. ತಾನು ಕ್ರೀಡಾಪಟುವಾದರೆ ಹೆಚ್ಚು ಹಣ ಸಂಪಾದನೆ ಮಾಡಿ ಮನೆಗೆ ಸಹಾಯ ಮಾಡಬಹುದು ಎನ್ನುವುದು ಹುಡುಗಿಯ ಯೋಚನೆಯಾಗಿತ್ತು. ಹಾಗೆಂದೇ ಹುಡುಗಿ ಮನೆಯಿಂದ 45 ಕಿಮೀ ದೂರದಲ್ಲಿದ್ದ ಇಂಾಲದಲ್ಲಿ ಶಾಲೆಗೆ ಸೇರಿಸಲು ಹುಡುಗಿ ಹಟ ಹಿಡಿದಳು. ಅಪ್ಪ-ಅಮ್ಮನಿಗೆ ಇಷ್ಟವಿರದಿದ್ದರೂ ಹುಡುಗಿ ಕೇಳಲಿಲ್ಲ. ಆಗಿನ್ನೂ ಆಕೆಗೆ 13 ವರ್ಷ. 16 ವರ್ಷವಾಗುವಾಗ ಮೇರಿಕೋಮ್ ಇಂಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಕಾರದಲ್ಲಿ ಇಂಬೋಚಾ ಸಿಂಗ್ ಬಳಿ ಬಾಕ್ಸಿಂಗ್ ಕಲಿಯುತ್ತಿದ್ದರು.
ಸುಶೀಲ್ ಕುಮಾರ್ ಸಹ 13ನೇ ವಯಸ್ಸಿನಲ್ಲೇ ಮನೆ ಬಿಟ್ಟವರು. ಅಂದಿನಿಂದ ಅವರ ಜೀವನ ಕಳೆದಿದ್ದೆಲ್ಲಾ ತರಬೇತಿ ಕೇಂದ್ರಗಳಲ್ಲಿ ಮತ್ತು ಕ್ರೀಡಾ ಹಾಸ್ಟೆಲ್ಗಳಲ್ಲಿ. ಅವರ ಅಮ್ಮನಿಗೆ ಮಗನನ್ನು ಬಿಟ್ಟಿರುವುದು ಕಷ್ಟವಾಗುತ್ತಿತ್ತು. ಆದರೂ, ಅದನ್ನವರು ತೋರಗೊಡಲಿಲ್ಲ. ಅವರು ಯಾವಾಗಲೂ ಸಕಾರಾತ್ಮಕವಾಗಿರುತ್ತಿದ್ದರು. ಮಗನಿಗೆ ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದರು. ಏನಾದರೂ ತಮಾಷೆ ಮಾಡುತ್ತಿದ್ದರು. ಸದ್ಗುಣಗಳನ್ನು ತಿಳಿಯಹೇಳುತ್ತಿದ್ದರು. ಅದೇ ಗುಣ ಸುಶೀಲ್ಗೂ ಬಂದಿದೆ.ಂದು ಸಾಧಾರಣ ಮಗುವನ್ನು ಕ್ರೀಡಾಪಟುವಾಗಿ ಬೆಳೆಸುವುದೆಂದರೆ ಅದಕ್ಕೆ ಸಾಕಷ್ಟು ಹಣಬೇಕು. ಪೌಷ್ಠಿಕ ಆಹಾರ, ಪ್ರಯಾಣವೆಚ್ಚ, ಸಲಕರಣೆಗಳು, ತರಬೇತಿ ಶುಲ್ಕ, ಉಡುಪುಗಳು... ಹೀಗೆ ಖರ್ಚಿನ ಮೂಲಗಳು ಒಂದೆರಡಲ್ಲ. ಬ್ಯಾಡ್ಮಿಂಟನ್ನಂಥ ಆಟ ಕೂಡ ದುಬಾರಿಯೇ. ಜ್ವಾಲಾ ಗುಟ್ಟ ಅವರ ತರಬೇತಿಯ ವೆಚ್ಚ ಭರಿಸಲು ಅವರ ತಂದೆ ಪರದಾಡುತ್ತಿದ್ದರು. ಅವರ ಅಮ್ಮ ಯೇಲನ್ ಸಹ ಕೆಲಸ ಹುಡುಕುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಯೇಲನ್ ಅವರ ಮ್ಯಾಂಡರಿನ್ ಮೂಲ ಅವರಿಗೆ ಕೆಲಸ ಹುಡುಕುವಾಗ ಉಪಯೋಗಕ್ಕೆ ಬಂತು. ಚೀನಾದೊಂದಿಗೆ ವ್ಯವಹಾರ ಸಂಪರ್ಕ ಹೊಂದಿರುವ ಾರ್ಮಾ ಕಂಪೆನಿಗಳಿಗೆ ಮ್ಯಾಂಡರಿನ್ ಭಾಷೆ ಬಲ್ಲವರ ಅಗತ್ಯ ತುರ್ತಾಗಿತ್ತು. ಯೇಲನ್ ಇದರ ಲಾಭ ಪಡೆದು ಕೆಲಸ ಗಿಟ್ಟಿಸಿಕೊಂಡರು. ಆಗ ಜ್ವಾಲಾಗೆ 16 ವರ್ಷ. ಅವರು ಮೊದಲ ಬಾರಿ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿದಾಗ ಅಗ್ಗದ ಕ್ಯಾನ್ವಾಸ್ ಶೂ ಧರಿಸಿ ಆಡಿದ್ದರು. ಆಗ ಅವರ ಬಳಿ ಇದ್ದಿದ್ದು ಎರಡೇ ರ್ಯಾಕೆಟ್. ಅವರಿಗೆ ಹುಟ್ಟುಹಬ್ಬದ ಗ್ಟಿಗಾಗಿ ಅವರ ಅಪ್ಪ ಸ್ನೇಹಿತರ ಬಳಿ ಸಾಲ ಮಾಡಿದ್ದರು.ಷ್ಟಗಳು ಎಷ್ಟೇ ಇದ್ದರೂ, ಜ್ವಾಲಾಗೆ ಅಪ್ಪ-ಅಮ್ಮನ ಸಂಪೂರ್ಣ ಬೆಂಬಲವಿತ್ತು. ನೆಂಟರಿಷ್ಟರೆಲ್ಲಾ ಜ್ವಾಲಾ ಆಟವಾಡುವುದನ್ನು ಆಕ್ಷೇಪಿಸಿದ್ದರು. ಇವಳು ಬ್ಯಾಡ್ಮಿಂಟನ್ ಹುಚ್ಚು ಹಿಡಿಸಿಕೊಂಡು ಓದಿನಲ್ಲಿ ಹಿಂದೆ ಬೀಳುತ್ತಾಳೆ. ಮುಂದೆ ಇವಳಿಗೆ ಮದುವೆಯಾಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ಅದೇ ಬ್ಯಾಡ್ಮಿಂಟನ್ ಇಂದು ಜ್ವಾಲಾಗೆ ಎಲ್ಲಾ ಕೊಡಿಸಿದೆ. ಹೈದರಾಬಾದ್ನ ಸಾಂಪ್ರದಾಯಿಕ ತೆಲುಗು ಕುಟುಂಬದ ಜ್ವಾಲಾ ಇಂದು ಮುಂಬೈನಲ್ಲಿ ಸ್ವಂತ ಮನೆಹೊಂದಿದ್ದಾರೆ. ಬಿಎಂಡಬ್ಲ್ಯು ಕಾರಿದೆ. ಮಹಿಳಾ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್ನಲ್ಲಿ ಅವರಿಂದು ವಿಶ್ವ ತಾರೆ.
ಭಿವಾನಿಯಲ್ಲಿ ಬಾಕ್ಸರ್ಗಳು ಮಾತ್ರ ಹುಟ್ಟುತ್ತಾರೆ ಎನ್ನುವುದೊಂದು ಮಾತು. ವಿಜೇಂದರ್ ಸಿಂಗ್ ಸಹ ಅಷ್ಟೇ. ಅವರು ಸಣ್ಣ ವಯಸ್ಸಿನಿಂದ ಹವಾ ಸಿಂಗ್ ಬಗ್ಗೆ ರೋಚಕ ಕಥೆಗಳನ್ನು ಕೇಳಿಕೊಂಡು ಬೆಳೆದವರು. 1966 ಮತ್ತು 1970ರ ಏಷ್ಯಾಡ್ನಲ್ಲಿ ಬಂಗಾರ ಗೆದ್ದಿದ್ದ ಹವಾ ಸಿಂಗ್ ಸತತ 11 ವರ್ಷ ರಾಷ್ಟ್ರೀಯ ಚಾಂಪಿಯನ್ ಪಟ್ಟಕ್ಕೇರಿ ದಂತಕಥೆಯಾದವರು. ಅವರ ಸ್ಫೂರ್ತಿಯಲ್ಲಿ ಬೆಳೆದ ವಿಜೇಂದರ್ಗೆ ಅಣ್ಣ ಮತ್ತು ಸ್ನೇಹಿತರು ಜಿಮ್ನಲ್ಲಿ ಕಾಲ ಕಳೆಯುತ್ತಿದ್ದುದು ಪ್ರೇರಣೆಯಾಗಿತ್ತು. ಭಿವಾನಿ ಬಾಕ್ಸಿಂಗ್ಗೆ ಪ್ರಸಿದ್ಧವಾದರೆ, ಹರ್ಯಾಣದ ಉಳಿದೆಡೆಯೆಲ್ಲಾ ಆವರಿಸಿರುವುದು ಕುಸ್ತಿ.
ಸುಶೀಲ್ ಕುಮಾರ್ ಕುಟುಂಬದಲ್ಲಿ ಕುಸ್ತಿಯ ಉದ್ದ ಪರಂಪರೆಯೇ ಇದೆ. ಅವರ ಅಪ್ಪಘಿ, ಚಿಕ್ಕಂಪ್ಪಂದಿರು, ಅಜ್ಜ ಎಲ್ಲರೂ ಮಲ್ಲರಾಗಿದ್ದವರೇ. ಹರ್ಯಾಣದಂತೆ ಮಣಿಪುರದಲ್ಲೂ ಕೂಡ ಕ್ರೀಡೆ ಸಂಸ್ಕೃತಿಯಾಗಿ ಬೆಳೆದಿದೆ. ರಾಷ್ಟ್ರ ಮಟ್ಟದಲ್ಲಿ ಅನೇಕ ುಟ್ಬಾಲ್, ಬಾಕ್ಸಿಂಗ್ ಆರ್ಚರಿ, ಸೈಕ್ಲಿಂಗ್ ಮತ್ತು ಹಾಕಿ ತಾರೆಗಳನ್ನು ಆ ರಾಜ್ಯ ಕೊಡುಗೆಯಾಗಿ ನೀಡಿದೆ. ಗುವಾಂಗ್ಝೌ ಏಷ್ಯಾಡ್ನಲ್ಲಿ ಕಂಚು ಗೆಲ್ಲುವ ಮುನ್ನ ಸತತ 7 ಅಂತಾರಾಷ್ಟ್ರೀಯ ಕೂಟಗಳಲ್ಲಿ ಚಿನ್ನ ಗೆದ್ದಿದ್ದ ಬಾಕ್ಸರ್ ಸುರಂಜಯ್ ಸಿಂಗ್ ಪ್ರಾರಂಭದಲ್ಲಿ ುಟ್ಬಾಲ್ ಆಟಗಾರನಾಗಿದ್ದರು. ಮುಂದೆ ಬಾಕ್ಸಿಂಗ್ನತ್ತ ವಾಲಿದರು. ಒಟ್ಟಾರೆ ಮಣಿಪುರದಲ್ಲಿ ಬಡತನವನ್ನು ದೂರ ಅಟ್ಟಿ ಶ್ರೀಮಂತರಾಗುವುದಕ್ಕೆ ಕ್ರೀಡಾಪಟುವಾಗುವುದೇ ಮಾರ್ಗ ಎಂದು ಯುವಜನತೆ ಭಾವಿಸಿದೆ.
ವಿಜೇಂದರ್ ಆರಂಭದ ಕೆಲವು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದರು. ಆದರೆ, ಅದರಿಂದ ಅವರೆಂದೂ ಹತಾಶರಾಗಲಿಲ್ಲಘಿ. ಬದಲಿಗೆ ಮುಂದಿನ ಪಂದ್ಯವನ್ನು ಯಾವ ರೀತಿ ಗೆಲ್ಲುವುದೆಂದೇ ಅವರ ಯೋಚನೆಯಾಗಿತ್ತು. ಸುರಂಜಯ್ ಪಂದ್ಯ ಸೋತರೆ ಆ ರಾತ್ರಿ ಅವರು ನಿದ್ರೆ ಮಾಡುವುದಿಲ್ಲಘಿ. ಬದಲಿಗೆ ಅವರ ತಾನು ಸೋತಿದ್ದು ಹೇಗೆ? ಏಕೆ ಎಂದು ಚಿಂತಿಸುತ್ತಾರೆ. ಮಾರನೇ ಮುಂಜಾನೆಯಿಂದ ಆ ನಿಟ್ಟಿನಲ್ಲಿ ಇನ್ನೂ ಕಠಿಣ ಅಭ್ಯಾಸ ಮಾಡುತ್ತಾರೆ.
ಸೈನಾಗೆ ಗೆಲುವಿನ ಚಟ ಬೆಳೆಸಿದ್ದು ಅವರ ಅಮ್ಮಘಿ. ಪಂದ್ಯ ಆಡುತ್ತಿರುವಾಗ ನೀನು ಕೇವಲ ಗೆಲುವಿನ ಬಗ್ಗೆ ಮಾತ್ರ ಯೋಚಿಸುತ್ತಿರಬೇಕು; ಎದುರಾಳಿಯ ಬಗ್ಗೆ ಅಲ್ಲ ಎನ್ನುವುದು ಸೈನಾಗೆ ಅಮ್ಮ ಹೇಳಿಕೊಟ್ಟ ಪಾಠವಾಗಿತ್ತು. ಮಗಳು ಅದನ್ನು ಚಾಚೂತಪ್ಪದೆ ಪಾಲಿಸಿದಳು.
ಲಿಯಾಂಡರ್ ಪೇಸ್ ಇಂದು ಟೆನಿಸ್ ದಿಗ್ಗಜ. ದಾಖಲೆ ಗ್ರಾಂಡ್ಸ್ಲಾಂಗಳ ಒಡೆಯ. ಅವರೀಗ ಅಂತಾರಾಷ್ಟ್ರೀಯ ಸೆಲೆಬ್ರಿಟಿ. ಅವರ ಪತ್ನಿಯೂ ದೊಡ್ಡ ಸೆಲೆಬ್ರಿಟಿ. ಆದರೆ, ಒಂದು ಕಾಲದಲ್ಲಿ ಲಿಯಾಂಡರ್ ತರಬೇತಿಗೆಂದು ತಿಂಗಳಿಗೆ 5-7 ಸಾವಿರ ರೂ ಹೊಂದಿಸಲು ಅವರ ಅಪ್ಪ ವೇಸ್ ಪೇಸ್ ಪರದಾಡುತ್ತಿದ್ದರು. 12ನೇ ವಯಸ್ಸಿನಿಂದ 5 ವರ್ಷ ಕಾಲ ಬ್ರಿಟಾನಿಯಾ ಅಮೃತ್ರಾಜ್ ಟೆನಿಸ್ ಅಕಾಡೆಮಿಯಲ್ಲಿ ಕಲಿತ ಲಿಯಾಂಡರ್ 1990ರಲ್ಲಿ ಜೂನಿಯರ್ ವಿಂಬಲ್ಡನ್ ಗೆದ್ದರು. ಆದರೆ, ಮುಂದಿನ ಆರು ತಿಂಗಳ ಅವರು ಒಂದೂ ಪಂದ್ಯ ಆಡಲಿಲ್ಲ. ಕಾರಣ ಹಣ. ಐಟಿಎ್ ಸರ್ಕ್ಯುಟ್ನಲ್ಲಿ ಆಡಬೇಕಾದರೆ, ಅವರು ಕಡ್ಡಾಯವಾಗಿ ಕೋಚ್, ಟ್ರೈನರ್ ಹೊಂದಬೇಕಾಗಿತ್ತು. ಅದಕ್ಕೆ ಕನಿಷ್ಠ 2 ಲಕ್ಷ ರೂ. ಬೇಕಾಗಿತ್ತು. ಕೊನೆಗೂ ಜೂನಿಯರ್ ಹಂತದಿಂದ ವೃತ್ತಿಪರರಾಗುವವರೆಗೆ ಲಿಯಾಂಡರ್ ಒಂದು ಟೂರ್ನಿಯಲ್ಲಿ ಗೆದ್ದ ಹಣದಿಂದ ಇನ್ನೊಂದು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದರು. ಮಮತಾ ಬ್ಯಾನರ್ಜಿ ಕೇಂದ್ರದಲ್ಲಿ ಕ್ರೀಡಾ ಸಚಿವರಾದಾಗ ಲಿಯಾಂಡರ್ಗೆ ಎರಡು ವರ್ಷ ಕಾಲ ವರ್ಷಕ್ಕೆ 30,000 ಡಾಲರ್ ನೆರವು ಕೊಡಿಸಿದರು. ಗ್ರಾಂಡ್ಸ್ಲಾಂಗಳಲ್ಲಿ ಡಬಲ್ಸ್ ಯಶಸ್ಸಿನ ಬಳಿಕ ಲಿಯಾಂಡರ್ ಜೀವನದಲ್ಲಿ ಭಾಗ್ಯೋದಯವಾಯಿತು.

No comments:

Post a Comment