Thursday, November 4, 2010

ಪುಟ್ಟ ರಾಜಕುಮಾರಿಯ ದಿಟ್ಟ ಹೆಜ್ಜೆಗಳು


ಅದ್ಭುತ ಆಟ, ಅಪ್ಸರೆಯ ಮೈಮಾಟ.
ಟೆನಿಸ್ ಜಗತ್ತು ನಿಬ್ಬೆರಗಾಗಲು ಇನ್ನೇನು ಬೇಕು?
ವಿಶ್ವ ನಂ.1 ಕಿರೀಟ ಮುಡಿ ಅಲಂಕರಿಸಿದೆ. ಪ್ರಾಯೋಜಕರು ಆಕೆಯ ಒಂದು ಸಹಿಗಾಗಿ ಕರಾರುಪತ್ರ ಹಿಡಿದುಕೊಂಡು ಮನೆಬಾಗಿಲು ಕಾಯುತ್ತಿದ್ದಾರೆ. ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಹೋದಲ್ಲೆಲ್ಲಾ ಹಿಂಬಾಲಿಸುತ್ತಿದ್ದಾರೆ, ದುಂಬಾಲು ಬೀಳುತ್ತಿದ್ದಾರೆ.
20ರ ಸಣ್ಣ ಹರೆಯದಲ್ಲೇ ಜಗತ್ತು ಕ್ಯಾರೊಲಿನ್ ವೊಜ್ನಿಯಾಕಿಯ ವಶವಾಗಿದೆ.
ಮಹಿಳಾ ಟೆನಿಸ್ನ ರೋಮಾಂಚನ ಇರುವುದೇ ಇಲ್ಲಿ. ಆಕೆ ಸ್ಟೆಫಿ ಗ್ರ್ಾ ಇರಬಹುದು, ಸೆಬಾಟಿನಿ, ಸ್ಯಾಂಚೆಜ್ ವಿಕಾರಿಯೋ ಆಗಿರಬಹುದು. ಮೋನಿಕಾ ಸೆಲಸ್, ಮಾರ್ಟಿನಾ ಹಿಂಗಿಸ್ ಇರಬಹುದು. ಇತ್ತೀಚಿನ ಶರಪೋವ, ಇವಾನೊವಿಕ್ ಆಗಿರಬಹುದು. ಹುಡುಗಿಯರು ಪ್ರಪಂಚವನ್ನು ಅರ್ಥ ಮಾಡಿಕೊಳ್ಳುವಷ್ಟು ಪ್ರಬುದ್ಧತೆ ಬಲಿಯುವ ಮೊದಲೇ ಚಾಂಪಿಯನ್ ಪಟ್ಟಕ್ಕೇರಿರುತ್ತಾರೆ. ಅಬ್ಬಾ ಹುಡುಗಿ ಎಂದು ಜನ ಆಕೆಯ ಯಶಸ್ಸು, ಆಟ, ಅಂದಕ್ಕೆ ಮರುಳಾಗಿರುವಾಗಲೇ ಇನ್ನೊಬ್ಬ ಪುಟ್ಟ ರಾಜಕುಮಾರಿಯ ರಂಗಪ್ರವೇಶವಾಗಿರುತ್ತದೆ. ಟೆನಿಸ್ ಅಭಿಮಾನಿಗಳ ನಿಷ್ಠೆ ಮ್ಯೂಸಿಕಲ್ ಚೇರ್ನಂತಾಗಿದ್ದರೆ, ಅದರಲ್ಲಿ ಅವರ ತಪ್ಪೇನೂ ಇಲ್ಲ. ೆಡರರ್, ನಡಾಲ್ ಮೇಲಿರುವ ಏಕನಿಷ್ಠೆಯನ್ನು ಅಭಿಮಾನಿಗಳು ಮಹಿಳಾ ಟೆನಿಸ್ನಲ್ಲಿ ಒಬ್ಬಳು ಶರಪೋವಾ ಅಥವಾ ಕ್ಲೈಸ್ಟರ್ಸ್ ಮೇಲಿರಿಸುವುದು ಕಷ್ಟ.
ಕ್ಯಾರೊಲಿನ್ ವೋಜ್ನಿಯಾಕಿಯನ್ನು ಡೆನ್ಮಾರ್ಕ್ನ ಜನ ಪುಟ್ಟ ರಾಜಕುಮಾರಿ ಎಂದೇ ಕರೆಯುತ್ತಾರೆ. 5 ಅಡಿ 10 ಇಂಚು ಎತ್ತರ ಬೆಳೆದಿದ್ದರೂ, ಆಕೆಯ ಮುಖದಲ್ಲಿನ್ನೂ ಮುಗ್ಧತೆ ಮಾಸದಿರುವುದು ಅದಕ್ಕೆ ಕಾರಣ. ಈ ವರ್ಷ ಹುಡುಗಿ ಉಳಿದೆಲ್ಲಾ ಮಹಿಳೆಯರಿಗಿಂತ ಅತೀ ಹೆಚ್ಚು ಟೆನಿಸ್ ಆಡಿದ್ದಾಳೆ. ಅತೀ ಹೆಚ್ಚು ಟ್ರೋಫಿಗಳನ್ನೂ ಗೆದ್ದಿದ್ದಾಳೆ. ಯುರೋಪ್ನ ಪುಟ್ಟ ದೇಶ ಡೆನ್ಮಾರ್ಕ್ನಿಂದ ಹೊರಹೊಮ್ಮಿದ ಮೊಟ್ಟಮೊದಲ ಚಾಂಪಿಯನ್ ಟೆನಿಸ್ ಹುಡುಗಿ ವೋಜ್ನಿಯಾಕಿ.
ತನ್ನ ಉದ್ದ ಹೆಸರನ್ನು ಕ್ಯಾರೋ ಎಂದಷ್ಟೇ ಮೊಟಕುಗೊಳಿಸಿಕೊಂಡು, ಜನರಿಂದ ಹಾಗೆಯೇ ಕರೆಸಿಕೊಳ್ಳಲು ಇಷ್ಟ ಪಡುವ ವೋಜ್ನಿಯಾಕಿ ಅಪ್ಪಟ ಡೆನ್ಮಾರ್ಕಿಯೇನೂ ಅಲ್ಲ. ಏಕೆಂದರೆ, ಪೋಲೆಂಡ್ನವರು ಸಹ ನಮ್ಮವಳವಳು ಎನ್ನುತ್ತಾರೆ. ಕಾರಣವೂ ಇಲ್ಲದಿಲ್ಲ. ಕ್ಯಾರೋಳ ಅಪ್ಪ-ಅಮ್ಮ ಇಬ್ಬರೂ ಮೂಲತಃ ಪೋಲೆಂಡ್ನವರು. ಬಹಳ ಹಿಂದೆಯೇ ಡೆನ್ಮಾರ್ಕ್ಗೆ ವಲಸೆ ಬಂದು ನೆಲೆಸಿದವರು. ಅಪ್ಪ ಡೆನ್ಮಾರ್ಕ್ನ ಕ್ಲಬ್ಗಳ ಪರ ವೃತ್ತಿಪರ ುಟ್ಬಾಲ್ ಆಡಿದವರು. ಅಮ್ಮ ಪೋಲೆಂಡ್ನಲ್ಲಿ ರಾಷ್ಟ್ರೀಯ ವಾಲಿಬಾಲ್ ಆಟಗಾರ್ತಿಯಾಗಿದ್ದವರು. ಕ್ಯಾರೋಳ ಅಣ್ಣ ಸದ್ಯ ಡೆನ್ಮಾರ್ಕ್ನಲ್ಲಿ ುಟ್ಬಾಲ್ ಆಡುತ್ತಾರೆ.
ಇಂಥ ಕ್ರೀಡಾ ಕುಟುಂಬದಿಂದ ಬಂದ ವೋಜ್ನಿಯಾಕಿ ಅದಕ್ಕೆ ತಕ್ಕ ಅಥ್ಲೆಟಿಕ್ ದೇಹ, ಫಿಟ್ನೆಸ್ ಬಳುವಳಿ ಪಡೆದವರು. ಅವರು ಟೆನಿಸ್ ಆಟವನ್ನು ುಟ್ಬಾಲ್ನಂತೆ ಯೋಜನಾಬದ್ಧವಾಗಿ ಆಡುವುದರಲ್ಲೂ ಅಪ್ಪನ ಕೊಡುಗೆ ಇರಬಹುದು. ಇಂಥ ವಿಶಿಷ್ಠ ಶೈಲಿ ವೋಜ್ನಿಯಾಕಿ ಆಟದ ಶಕ್ತಿಯೂ ಹೌದು, ಮಿತಿಯೂ ಹೌದು. ಅಂದರೆ, ಹುಡುಗಿಯ ಆಟದಲ್ಲಿ ಕ್ಲೈಸ್ಟರ್ಸ್ರ ಕಲಾವಂತಿಕೆಯಾಗಲೀ, ಸೆರೇನಾ ವಿಲಿಯಮ್ಸ್ರ ಶಕ್ತಿಯಾಗಲೀ, ಶರಪೋವಾರ ಸತ್ವವಾಗಲೀ ಕಡಿಮೆ. ವೋಜ್ನಿಯಾಕಿ ಸ್ವತಃ ತಾನೇ ಮುನ್ನುಗ್ಗಿ ಅಂಕ ಗಳಿಸುವುದಕ್ಕಿಂತ ಎದುರಾಳಿ ತಪ್ಪು ಎಸಗಿ ಅಂಕ ಬಿಟ್ಟುಕೊಡಲಿ ಎಂದು ಕಾಯುತ್ತಾರೆ; ನಿರ್ಬಂಧಿಸುತ್ತಾರೆ ಎಂಬ ಆರೋಪಗಳಿವೆ. ಇದು ನಿಜವೂ ಹೌದು; ಆಕೆಯ ಯಶಸ್ಸಿನ ಗುಟ್ಟೂ ಹೌದು.
2010ರ ಟೆನಿಸ್ ಋತು ಮೊನ್ನೆ ದೋಹಾದಲ್ಲಿ ಕೊನೆಗೊಂಡಿದೆ. ಮುಗಿದ ಮೇಲೊಮ್ಮೆ ಹಿಂತಿರುಗಿ ನೋಡಿದರೆ ಎಲ್ಲರಿಗಿಂತ ಎದ್ದು ಕಾಣುವುದು ವೋಜ್ನಿಯಾಕಿ ಆಟ.
ನಿಜ. ವರ್ಷದ ನಾಲ್ಕು ಗ್ರಾಂಡ್ಸ್ಲಾಂಗಳಲ್ಲಿ ನಮ್ಮ ಹುಡುಗಿಯ ಆಟ ಅಷ್ಟಕ್ಕಷ್ಟೇ. ಪ್ರಶಸ್ತಿ ಗೆಲ್ಲುವುದಿರಲಿ, ಕನಿಷ್ಠ ಒಂದರಲ್ಲೂ ೈನಲ್ ಸಹ ತಲುಪಲಿಲ್ಲ. ಆದರೂ, ವರ್ಷ ಮುಗಿಯುವ ಹೊತ್ತಿಗೆ ವಿಶ್ವ ಶ್ರೇಯಾಂಕದಲ್ಲಿ ನಂ.1 ಪಟ್ಟ ಒಲಿದಿತ್ತು. ಅದು ಹೇಗೆ ಸಾಧ್ಯವಾಯಿತು?
ಟೆನಿಸ್ ವರ್ಷದಲ್ಲಿ ನಡೆಯುವುದು ನಾಲ್ಕು ಗ್ರಾಂಡ್ಸ್ಲಾಂಗಳು ಮಾತ್ರವಲ್ಲ. ಇನ್ನೂ ಸಾಕಷ್ಟು ಉನ್ನತ ದರ್ಜೆಯ ಟೂರ್ನಿಗಳು ನಡೆಯುತ್ತವೆ. ಅಲ್ಲೆಲ್ಲಾ ಮೆರೆದಿದ್ದು ವೋಜ್ನಿಯಾಕಿ. 2007ರ ಋತುವಿನಲ್ಲಿ ಜಸ್ಟಿನ್ ಹೆನಿನ್ 11 ಪ್ರಶಸ್ತಿ ಗೆದ್ದಿದ್ದರು. ಅದನ್ನು ಬಿಟ್ಟರೆ ಈ ವರ್ಷ ವೋಜ್ನಿಯಾಕಿ ಗೆದ್ದ 6 ಪ್ರಶಸ್ತಿಗಳೇ ವರ್ಷದ ದಾಖಲೆ.
ಹಾಗೆಂದು ಎಲ್ಲರೂ ವೋಜ್ನಿಯಾಕಿಯನ್ನು ಕೊಂಡಾಡುತ್ತಿದ್ದಾರೆ ಎಂದೇನೂ ಅಲ್ಲ. ಟೆಸ್ಟ್ ಕ್ರಿಕೆಟ್ನ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎಂದು ಮುಖ ಹುಳ್ಳಗೆ ಮಾಡಿಕೊಳ್ಳುತ್ತಿರುವ ಆಸ್ಟ್ರೇಲಿಯನ್ನರಂತೆ ಅಮೆರಿಕನ್ನರು ಸಹ ಟೆನಿಸ್ ಶ್ರೇಯಾಂಕ ಪದ್ಧತಿ ಸರಿಯಿಲ್ಲ ಎನ್ನುತ್ತಿದ್ದಾರೆ. ಅವರ ವಾದಕ್ಕೊಂದು ತರ್ಕವೂ ಇದೆ. ಒಂದೂ ಗ್ರಾಂಡ್ಸ್ಲಾಂ ಗೆಲ್ಲದ ವೋಜ್ನಿಯಾಕಿಯನ್ನು ವಿಶ್ವ ನಂ.1 ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರವರು. ಹಾಗಾದರೆ, ಅವರ ಪ್ರಕಾರ ಯಾರಾಗಬೇಕು? ಅಮೆರಿಕದ ಸೆರೇನಾ ವಿಲಿಯಮ್ಸ್ ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. ಒಂದೂ ಸೆಟ್ ಬಿಟ್ಟುಕೊಡದೆ ವಿಂಬಲ್ಡನ್ ಸಹ ಗೆದ್ದಿದ್ದಾರೆ. ಆದರೂ, ಆಕೆ ಶ್ರೇಯಾಂಕದಲ್ಲಿ ಹಿಂದೆ ಬೀಳುವುದಕ್ಕೆ ಕಾರಣ? ಈ ವರ್ಷ ಸೆರೇನಾ ಆಡಿದ್ದು ಕೇವಲ 6 ಟೂರ್ನಿ ಮಾತ್ರ. ವಿಂಬಲ್ಡನ್ ಗೆದ್ದ ಬಳಿಕ ಆಕೆ ಕಾಲಿನ ಗಾಯದಿಂದಾಗಿ ಟೆನಿಸ್ ರ್ಯಾಕೆಟ್ ಹಿಡಿದಿಲ್ಲ. ಇಷ್ಟು ಕಡಿಮೆ ಆಡಿ ನಂ.1 ಪಟ್ಟ ಬೇಕೆನ್ನುವುದು ನ್ಯಾಯಯುತವಲ್ಲ. ಬೆಲ್ಜಿಯಂನ ಕಿಂ ಕ್ಲೈಸ್ಟರ್ಸ್ ಸತತ 2ನೇ ವರ್ಷ ಯುಎಸ್ ಓಪನ್ ಗೆದ್ದುಕೊಂಡಿದ್ದಾರೆ. ಆದರೆ ಆಕೆ ಸಹ ಪೂರ್ಣಾವ ಅಮ್ಮ, ಅರೆಕಾಲಿಕ ಆಟಗಾರ್ತಿ. ಹಾಗಾಗಿ ನಂ.1 ಆಗುವುದಕ್ಕೆ ಅಪೇಕ್ಷಿತ ಅಂಕ ಹಾಗೂ ಟೂರ್ನಿಗಳ ಸಂಖ್ಯೆ ಅವರ ಬಳಿಯೂ ಇಲ್ಲ. ವೀನಸ್ ವಿಲಿಯಮ್ಸ್ ಸಹ ಸೆರೇನಾರಂತೆ ತುಂಬಾ ಚೂಸಿ. ಅವರು ವರ್ಷದಲ್ಲಿ ಎಲ್ಲಾ ಟೂರ್ನಿ ಆಡುವುದಿಲ್ಲ. ಈ ವರ್ಷವಂತೂ ಗಾಯಾಳುವಾಗಿ ಋತುವಿನ ಬಹುಪಾಲು ಟೂರ್ನಿ ತಪ್ಪಿಸಿಕೊಂಡರು. ಇನ್ನು ನಂ.1 ಪಟ್ಟದ ಮತ್ತೋರ್ವ ಅಭ್ಯರ್ಥಿ ಮರಿಯ ಶರಪೋವ ಸಹ ಗಾಯದಿಂದಾಗಿ ಹೆಚ್ಚಿನ ಟೂರ್ನಿಗಳಲ್ಲಿ ಆಡಲಿಲ್ಲ. ವೋಜ್ನಿಯಾಕಿ ಟೀಕಾಕಾರರು ಈ ಅಂಶವನ್ನೆಲ್ಲಾ ಮುಂದು ಮಾಡುತ್ತಾರೆ. ಶರಪೋವ, ಕ್ಲೈಸ್ಟರ್ಸ್, ಸೆರೇನಾ, ವೀನಸ್ ಇವರೆಲ್ಲಾ ವರ್ಷ ಪೂರ್ತಿ ಆಡಿದ್ದರೆ, ವೋಜ್ನಿಯಾಕಿ ನಂ.1 ಆಗುತ್ತಿರಲಿಲ್ಲ ಎನ್ನುತ್ತಾರೆ. ಗೊತ್ತಿಲ್ಲ. ಇರಲೂ ಬಹುದು.
ಆದರೆ, ಅವರೆಲ್ಲಾ ಆಡದಿರುವುದರಲ್ಲಿ ವೋಜ್ನಿಯಾಕಿ ಪಾತ್ರವೇನೂ ಇಲ್ಲ.
ಕಿಂ ಕ್ಲೈಸ್ಟರ್ಸ್ ಮೊದಲ ಬಾರಿ ವಿಶ್ವ ನಂ.1 ಆದಾಗ ಒಂದೂ ಗ್ರಾಂಡ್ಸ್ಲಾಂ ಗೆದ್ದಿರಲಿಲ್ಲ. ಆದರೆ, ಈಗ ಅವರು 3 ಬಾರಿ ಯುಎಸ್ ಓಪನ್ ಗೆದ್ದಿದ್ದಾರೆ. ಅಮೇಲಿ ಮೌರೆಸ್ಮೋ ಸಹ ಮೊದಲು ವಿಶ್ವ ನಂ.1 ಆಗಿ ನಂತರ ಗ್ರಾಂಡ್ಸ್ಲಾಂ ಗೆದ್ದರು. ಜೆಲೆನಾ ಜಾಂಕೊವಿಕ್ ಮತ್ತು ದಿನಾರ ಸಫಿನಾ ಸಹ ವಿಶ್ವ ನಂ.1 ಆಗಿ ಮಾಜಿಗಳಾಗಿದ್ದಾರಾದರೂ, ಅವರಿಗಿನ್ನೂ ಗ್ರಾಂಡ್ಸ್ಲಾಂ ಗೆಲ್ಲುವುದು ಸಾಧ್ಯವಾಗಿಲ್ಲ.
ಆದರೆ, ವೋಜ್ನಿಯಾಕಿ, ಸಫಿನಾ ಅಥವಾ ಜಾಂಕೊವಿಕ್ರಂತಾಗುವುದಿಲ್ಲವೆಂಬ ಭರವಸೆ ಇದೆ. ಬಹುಶಃ 2011 ಡೆನ್ಮಾರ್ಕ್ ಹುಡುಗಿಯ ವರ್ಷವಾಗಬಹುದು. ಸೆರೇನಾ, ವೀನಸ್, ಶರಪೋವ ಇವರೆಲ್ಲರ ಉಪಸ್ಥಿತಿಯಲ್ಲೇ ವೋಜ್ನಿಯಾಕಿ ಗ್ರಾಂಡ್ಸ್ಲಾಂ ಗೆದ್ದರೆ ಅದು ಟೀಕಾಕಾರರಿಗೆ ಉತ್ತರ ಹಾಗೂ ಆಕೆಯ ಯೋಗ್ಯತೆಗೆ ಹಿಡಿವ ಕನ್ನಡಿ ಎರಡೂ ಆಗುತ್ತದೆ.

2010ರಲ್ಲಿ ಸಾಧನೆ
* ದೋಹಾ ವರ್ಷಾಂತ್ಯ ಟೂರ್ನಿಯಲ್ಲಿ ರನ್ನರ್ಅಪ್
* ಡಬ್ಲ್ಯುಟಿಎ ಶ್ರೇಯಾಂಕ ಪಟ್ಟಿಯಲ್ಲಿ
ನಂ.1 ಪಟ್ಟ
* ಬೀಜಿಂಗ್ ಓಪನ್ ಚಾಂಪಿಯನ್
* ಟೋಕಿಯೋ ಓಪನ್ ಚಾಂಪಿಯನ್
* ಯುಎಸ್ ಓಪನ್ ಸೆಮಿೈನಲ್
* ಯುಎಸ್ ಓಪನ್ ಸಿರೀಸ್ ಚಾಂಪಿಯನ್
* ನ್ಯೂ ಹೆವನ್ ಚಾಂಪಿಯನ್
* ಮಾಂಟ್ರಿಯಲ್ ಚಾಂಪಿಯನ್
* ಕೋಪನ್ಹೇಗನ್ ಚಾಂಪಿಯನ್
* ವಿಂಬಲ್ಡನ್ 4ನೇ ಸುತ್ತು
* ್ರೆಂಚ್ ಓಪನ್ ಕ್ವಾರ್ಟರ್ೈನಲ್
* ಚಾರ್ಲ್ಸ್ಟನ್ ಸೆಮಿೈನಲ್
* ಪಾಂಟೆ ವೆದ್ರಾ ಬೀಚ್ ಚಾಂಪಿಯನ್
* ಮಿಯಾಮಿ ಕ್ವಾರ್ಟರ್ೈನಲ್
* ಇಂಡಿಯನ್ ವೆಲ್ಸ್ ೈನಲ್
* ಆಸ್ಟ್ರೇಲಿಯನ್ ಓಪನ್ 4ನೇ ಸುತ್ತು

No comments:

Post a Comment