Monday, October 11, 2010
ಈಜಿ ಜೈಸಿದವಳು
ಜೀವನವೊಂದು ಹೋರಾಟ.
ಅಲ್ಲಿ ನಿತ್ಯ ಹೊಸ ಹೊಸ ಸವಾಲುಗಳು.
ಒಂದಕ್ಕಿಂತ ಇನ್ನೊಂದು ಭಿನ್ನ.
ಅನಿಶ್ಚಿತವಾದ ಜೀವನದಲ್ಲಿ ಇಂದಿಗೂ ನಾಳೆಗೂ ಅಜಗಜಾಂತರ ವ್ಯತ್ಯಾಸ.
ಬೆಳೆಯುವ ಪೈರನ್ನು ಮೊಳಕೆಯಲ್ಲಿ ಗುರುತಿಸಬಹುದು. ಆದರೆ, ನಾಳೆ ಆಗುವುದನ್ನು ಇಂದೇ ಹೇಳಲು ಸಾಧ್ಯವಿಲ್ಲ.
ನಟಾಲಿ ಡು ಟಾಯ್ಟ ವಿಚಾರದಲ್ಲೂ ಹಾಗೆಯೇ ಆಯಿತು.
ಸರಿಯಾಗಿ ಒಂಬತ್ತು ವರ್ಷ ಹಿಂದೆ. ಫೆಬ್ರವರಿ ತಿಂಗಳ ಒಂದು ಸೋಮವಾರ ರಸ್ತೆ ಅಪಘಾತದಲ್ಲಿ ಆಕೆ ಕಾಲನ್ನೇ ಕಳೆದುಕೊಂಡರು!
ಕೌಲಾಲಂಪುರದಲ್ಲಿ ನಡೆದ 1998ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಆಗಿನ್ನೂ 14 ವರ್ಷದ ನಟಾಲಿ ದೊಡ್ಡ ಸೆನ್ಸೇಶನ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಈ ಮಿಂಚಿನ ಬಳ್ಳಿ ಈಜುಕೊಳದಲ್ಲಿ ಭವಿಷ್ಯದ ವಿಶ್ವತಾರೆ ಎಂದೇ ಆ ಸಂದರ್ಭದಲ್ಲಿ ಗುರುತಿಸಲಾಗಿತ್ತು. ಅಂಥ ಪ್ರತಿಭಾವಂತೆ ಆಕೆ. ವಯಸ್ಸಿಗೆ ಮೀರಿದ ಸಾಮರ್ಥ್ಯ. ಈಜುಕೊಳಕ್ಕೆ ಧುಮುಕಿದರೆ ಪದಕ ಗೆಲ್ಲದೆ ಮೇಲೇಳುತ್ತಿರಲಿಲ್ಲ.
ಆದರೆ, ದುರ್ವಿಧಿ ಕಾರಿನ ರೂಪದಲ್ಲಿ ಆಕೆಗೆ ಬಡಿಯಿತು. ನಟಾಲಿ ಈಜು ಅಭ್ಯಾಸ ಮುಗಿಸಿಕೊಂಡು ಸ್ಕೂಟರ್ ಏರಿ ಶಾಲೆಗೆ ತೆರಳುತ್ತಿರುವಾಗ ಯಮನಂತೆ ಬಂದ ಕಾರು ಡಿಕ್ಕಿ ಹೊಡೆಯಿತು. ಗ್ರಹಚಾರವೆಂದರೆ, ಅವಸರದ ತರುಣಿಯೊಬ್ಬಳು ರಸ್ತೆಯ ಬದಲು ಪಾರ್ಕಿಂಗ್ ಜಾಗದಲ್ಲಿ ಕಾರು ಓಡಿಸಿಕೊಂಡು ಬಂದು ಏಕಾಏಕಿ ರಸ್ತೆಗೆ ನುಗ್ಗಿದ್ದಳು. ಆ ಹುಡುಗಿಯ ಪ್ರಮಾದದಿಂದ ನಟಾಲಿ ಎಡಗಾಲು ಕಳೆದುಕೊಂಡಿದ್ದರು.
ವಿಧಿಯೆಂದರೆ ಹಾಗೆ, ನಟಾಲಿಗೆ ಆ ದಿನ ಶಾಲೆಯಲ್ಲಿ ಜೀವಶಾಸ್ತ್ರ ಪರೀಕ್ಷೆಯಿತ್ತು. ಆದರೆ, ಆಕೆ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿರಲಿಲ್ಲ. ಪ್ರಿಟೋರಿಯಾದಲ್ಲಿ ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳಿದ್ದ ಆ ಹುಡುಗಿ ಹಿಂದಿನ ದಿನವಷ್ಟೇ 18 ಗಂಟೆಗಳ ಬಸ್ ಪ್ರಯಾಣ ಮುಗಿಸಿ ಕೇಪ್ಟೌನ್ನ ತಮ್ಮ ಮನೆಗೆ ಮರಳಿದ್ದರು. ಬಂದ ಮೇಲೆ ಆಯಾಸ. ಮಾರನೇ ದಿನ ಬೆಳಗ್ಗೆ 5 ಗಂಟೆಗೆಲ್ಲಾ ಈಜು ಅಭ್ಯಾಸಕ್ಕೆ ತೆರಳಬೇಕಿತ್ತು. ಅರೆಬರೆ ನಿದ್ರೆ, ಪ್ರಯಾಣದ ಆಯಾಸ, ಪರೀಕ್ಷೆಯ ಚಿಂತೆ. ಇವೆಲ್ಲದರ ನಡುವೆ ಈಜು ಅಭ್ಯಾಸ ಬೇರೆ. ಹಾಗಾಗಿ ನಾಳೆ ಅಭ್ಯಾಸಕ್ಕೆ ಹೋಗುವುದಿಲ್ಲ ಎಂದು ಅಮ್ಮನ ಬಳಿ ಹೇಳಿದ್ದರು. ಆದರೆ, ರಾತ್ರಿ ಮಲಗುವ ಹೊತ್ತಿಗೆ ನಿರ್ಧಾರ ಬದಲಾಗಿತ್ತು. ಬೆಳಗ್ಗೆ ಬೇಗನೆ ಎದ್ದು ಈಜುಕೊಳಕ್ಕೆ ತೆರಳಿದ್ದಳು. 6 ಗಂಟೆಯಿಂದ 7 ಗಂಟೆವರೆಗೆ ಅಭ್ಯಾಸ ನಡೆಸಿ ಸ್ಕೂಟರ್ ಏರಿ ಶಾಲೆಗೆ ತೆರಳುವ ಹಾದಿಯಲ್ಲಿ ಅಪಘಾತವಾಗಿತ್ತು. ಅಂದು 2001ರ ಫೆಬ್ರವರಿ 26, ಸೋಮವಾರ.
ಅಪಘಾತವಾದ ರಭಸಕ್ಕೆ ತನ್ನ ಎಡಗಾಲು ಹೋಯಿತೆಂಬ ಸತ್ಯ ನಟಾಲಿಗೆ ಗೊತ್ತಾಗಿತ್ತು. ಆದರೂ, ಆ ಸಂದರ್ಭದಲ್ಲಿ ಆಕೆಗೆ ತನಗಿಂತ ಅಮ್ಮ ಹೇಗೆ ಸಹಿಸಿಕೊಂಡಾಳು ಎಂಬ ಚಿಂತೆ ಕಾಡುತ್ತಿತ್ತು. ಅಪಘಾತ ಸ್ಥಳಕ್ಕೆ ಬಂದ ಅಮ್ಮನಿಗೆ ತನ್ನ ಕಾಲು ತೋರಿಸಲು ಆಕೆ ನಿರಾಕರಿಸಿದರು. ಅಪಘಾತವಾದ ನಾಲ್ಕು ದಿನಗಳಲ್ಲಿ ಅಂದರೆ ಶುಕ್ರವಾರ ನಟಾಲಿಯ ಎಡಗಾಲು ಕತ್ತರಿಸಲಾಯಿತು. ಶನಿವಾರ ಆಕೆಗೆ ವಿಷಯ ತಿಳಿಸಲಾಯಿತು. ಭಾನುವಾರವೆಲ್ಲಾ ನಟಾಲಿ ಊರುಗೋಲು ಹಾಗೂ ವೈದ್ಯರ ಸಹಾಯದಿಂದ ನಡೆಯಲು ಯತ್ನಿಸುತ್ತಿದ್ದರು.
ಅದೊಂದು ರೀತಿ ವಿಧಿಯ ವಿರುದ್ಧದ ಹೋರಾಟ. ದೈವವೊಂದು ಬಗೆದರೆ ತಾನೊಂದು ಬಗೆಯುತ್ತೇನೆಂಬ ಛಲ. ಈಜಬೇಕು ಈಜಿ ಜೈಸಬೇಕು ಎಂಬುದು ನಟಾಲಿ ತಲೆಯಲ್ಲಿ ಅಚ್ಚೊತ್ತಿತ್ತು. ಬದುಕಿನಲ್ಲಿ ಈಜುವುದಕ್ಕಿಂತ ಈಜುಕೊಳದಲ್ಲಿ ಕಷ್ಟವೇನಲ್ಲ ಎಂದು ಆಕೆಗೆ ಹೊಳೆದಿತ್ತು. ಅಪಘಾತವಾದ ಮೂರೇ ತಿಂಗಳಲ್ಲಿ ಆಕೆ ಈಜುಕೊಳದಲ್ಲಿದ್ದರು!
ಈ ಹೊತ್ತಿಗೆ ಕೃತಕ ಕಾಲಿನ ನೆರವಿನಿಂದ ಎಲ್ಲರಂತೆ ಸಹಜವಾಗಿ ನಡೆದಾಡಲು ಕಲಿತಿದ್ದ ಛಲಗಾರ್ತಿ ನಟಾಲಿ, ಈಜುಕೊಳದಲ್ಲಿ ಕಾಲು ಕಳಚಿಟ್ಟು ಒಂದೇ ಕಾಲು, ಎರಡು ಕೈಗಳ ನೆರವಿನಿಂದ ಈಜುತ್ತಿದ್ದರು. ಜಗತ್ತು ಏನೇ ಹೇಳಲಿ, ತಾವು ಅಂಗವಿಕಲೆ ಎಂದು ಒಪ್ಪಿಕೊಳ್ಳಲು ಆಕೆ ಸಿದ್ಧರಿರಲಿಲ್ಲ. ಹಾಗೆಂದೇ ಅವರು ಸಹಜ ಈಜುಗಾರ್ತಿಯರ ಜೊತೆಯಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರೊಂದಿಗೇ ಸ್ಪರ್ಧಿಸುತ್ತಿದ್ದರು.
ಅಪಘಾತವಾದ ಒಂದೇ ವರ್ಷದಲ್ಲಿ ನಟಾಲಿ ಮ್ಯಾಂಚೆಸ್ಟರ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (2002) ದಕ್ಷಿಣ ಆಫ್ರಿಕಾವನ್ನು ಪ್ರತಿನಿಸಿದ್ದರು. ಆಗ ಆಕೆಗೆ 18 ವರ್ಷ.
ಮ್ಯಾಂಚೆಸ್ಟರ್ನಲ್ಲಿ ನಟಾಲಿ ವಿಕಲಾಂಗರ 50 ಮೀ. ಫ್ರೀಸ್ಟೈಲ್ ಮತ್ತು 100 ಮೀ. ಫ್ರೀ ಸ್ಟೈಲ್ ಈಜಿನಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿದರು. ಮಾತ್ರವಲ್ಲ, ಮುಖ್ಯ ಕ್ರೀಡಾಕೂಟದ 800 ಮೀ. ಫ್ರೀಸ್ಟೈಲ್ ಈಜಿನ ಫೈನಲ್ಗೆ ಅರ್ಹತೆ ಪಡೆದರು. ವಿಕಲಾಂಗ ಈಜುಗಾರ್ತಿಯೊಬ್ಬರು ದೈಹಿಕವಾಗಿ ಸಬಲರಾದ ಈಜುಪಟುಗಳೊಂದಿಗೆ ಅಂತಾರಾಷ್ಟ್ರೀಯ ಈಜು ಸ್ಪರ್ಧೆಯೊಂದರ ಫೈನಲ್ನಲ್ಲಿ ಪಾಲ್ಗೊಂಡಿದ್ದು ಅದೇ ಮೊದಲ ಬಾರಿಯಾಗಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದ ಸರ್ವ ಶ್ರೇಷ್ಠ ಕ್ರೀಡಾಪಟುವಿಗೆ ನೀಡಲಾಗುವ ಡಿಕ್ಸನ್ ಪ್ರಶಸ್ತಿ ಆ ಬಾರಿ ನಟಾಲಿಗೇ ಲಭಿಸಿತು.
ಅದಾದ ನಂತರ ಅಥೆನ್ಸ್ (2004) ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ನಟಾಲಿ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ 10ಮೀ. ಮುಕ್ತ ಈಜು ಸ್ಪರ್ಧೆಗೆ ಅರ್ಹತೆ ಗಳಿಸಿದರು. ಅದಕ್ಕೆ ಮುನ್ನ ನಡೆದ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ವಿಜೇತರಿಗಿಂತ ಕೇವಲ 5.1 ಸೆಕೆಂಡ್ ಹಿಂದುಳಿದು 5ನೇ ಸ್ಥಾನ ಪಡೆದಿದ್ದರು. ಬೀಜಿಂಗ್ನಲ್ಲಿ ಅವರು 16ನೇ ಸ್ಥಾನ ಪಡೆದರು.
ಲಂಡನ್ ಒಲಿಂಪಿಕ್ಸ್ ಬಳಿಕ ಈಜುಕೊಳದಿಂದ ನಿವೃತ್ತರಾಗುವ ಬಯಕೆ ಹೊಂದಿರುವ ನಟಾಲಿ ದೆಹಲಿಯಲ್ಲಿ ಕೊನೆಯ ಬಾರಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕೂಟದಲ್ಲಿ 3 ಚಿನ್ನದ ಪದಕ ಗೆದ್ದಿರುವುದು ಅವರ ಸಾಧನೆ. ಬಂಗಾರದ ಹ್ಯಾಟ್ರಿಕ್ನೊಂದಿಗೆ ಕಾಮನ್ವೆಲ್ತ್ ಕೂಟಗಳಿಗೆ ವಿದಾಯ ಹೇಳಿರುವ 27 ವರ್ಷದ ನಟಾಲಿ ಮುಂದಿನ ದಿನಗಳಲ್ಲಿ ಸಮಾಜ ಸೇವೆ ಮಾಡಲು ಬಯಸಿದ್ದಾರೆ.
ಅಂಗವೈಕಲ್ಯ ಶಾಪವಲ್ಲ ಎಂದು ತಮ್ಮದೇ ಉದಾಹರಣೆ ನೀಡುವ ನಟಾಲಿ ಶೈಕ್ಷಣಿಕವಾಗಿ ವಿಜ್ಞಾನ ಪದವೀಧರೆಯೂ ಹೌದು. ಬಿಡುವಿನ ವೇಳೆಯಲ್ಲಿ ಅವರು ಸ್ಫೂರ್ತಿದಾಯಕ ಉಪನ್ಯಾಸಗಳನ್ನು ನೀಡುತ್ತಾರೆ.
ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.ಜೀವನವೊಂದು ಹೋರಾಟ.

ಹಾಗೆ ನೋಡಿದರೆ ನಟಾಲಿ ಬದುಕೇ ವಿಶ್ವಕ್ಕೆ ಸ್ಫೂರ್ತಿ.
Subscribe to:
Post Comments (Atom)
No comments:
Post a Comment