ಮುತ್ತಯ್ಯ ಮುರಳೀಧರನ್ಗೆ 800 ವಿಕೆಟ್ ಕಬಳಿಸಲು ಅವಕಾಶ ಕೊಡುವುದಿಲ್ಲ ಎಂದು ಗಾಲೆ ಟೆಸ್ಟ್ಗೆ ಮುನ್ನ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ಹೇಳಿದಾಗ, ಅದನ್ನು ಉದ್ಧಟತನದ ಮಾತು ಎಂದು ಟೀಕಿಸಿದವರು ಬಹಳ ಮಂದಿ.
ಆದರೆ, ವಾಸ್ತವದಲ್ಲಿ ಭಾರತೀಯರು ಹಾಗೇನೂ ಮಾಡಲಿಲ್ಲ. ಮುರಳಿ 800 ವಿಕೆಟ್ಗಳ ಹೆಮ್ಮೆಯೊಂದಿಗೆ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದಾಗ ಇವರೂ ಸಂತೋಷಪಟ್ಟರು.
ಭಾರತೀಯರು ಮನಸ್ಸು ಮಾಡಿದ್ದರೆ ಮುರಳಿಗೆ 800 ವಿಕೆಟ್ ಸಿಗದಂತೆ ಮಾಡುವುದು ಕಠಿಣವೇನೂ ಆಗಿರಲಿಲ್ಲ. ಅದು ಕಾನೂನುಬಾಹಿರ ಎನಿಸಿಕೊಳ್ಳುತ್ತಲೂ ಇರಲಿಲ್ಲ.ಾಲೆ ಟೆಸ್ಟ್ನಲ್ಲಿ ಭಾರತೀಯರು ಸೋಲುವುದು ಖಚಿತವಾಗಿತ್ತು. 2ನೇ ಇನಿಂಗ್ಸ್ನಲ್ಲಿ ತಂಡದ ಮೊತ್ತ 314 ರನ್ ಆಗಿದ್ದಾಗ ಲಕ್ಷ್ಮಣ್ 9 ವಿಕೆಟ್ ರೂಪದಲ್ಲಿ ರನೌಟ್ ಆದರು. ಆ ಕೂಡಲೇ ಭಾರತ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರೆ ಲಂಕೆಗೆ 95 ರನ್ ಬದಲು 71 ರನ್ಗಳ ಗುರಿ ನೀಡಿದಂತಾಗುತ್ತಿತ್ತು. ಅದರಿಂದ ಅಂಥ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ಆದರೆ, ಮುತ್ತಯ್ಯ ಮುರಳೀಧರನ್ ಅಂಥ ಸನ್ನಿವೇಶದಲ್ಲಿ 799 ವಿಕೆಟ್ಗಳೊಂದಿಗೆ ತ್ರಿಶಂಕುವಾಗುತ್ತಿದ್ದರು. 800 ವಿಕೆಟ್ ಅವರಿಗೆ ಎಟುಕುತ್ತಿರಲಿಲ್ಲ.ದರೆ, ಭಾರತೀಯ ಆಟಗಾರರು ಅಂಥ ಸಣ್ಣತನ ತೋರಲಿಲ್ಲ.ದರೆ, ಡಂಬುಲ ಏಕದಿನ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ 13ನೇ ಶತಕ ಬಾರಿಸಲು 1 ರನ್ ಅಗತ್ಯ ಹೊಂದಿದ್ದಾಗ ಸೂರಜ್ ರಣದಿವ್ ನೋಬಾಲ್ ಎಸೆದರು. ಆ ರೀತಿ ಮಾಡುವಂತೆ ತಿಲಕರತ್ನೆ ದಿಲ್ಶಾನ್ ಪ್ರಚೋದಿಸಿದ್ದರು. ಲಂಕಾ ನಾಯಕ ಕುಮಾರ ಸಂಗಕ್ಕರ ಸಹ ತಮ್ಮ ಆಟಗಾರರ ಮೋಸದಲ್ಲಿ ಶಾಮೀಲಾಗಿದ್ದರು (ಅವರು ಇದನ್ನು ಒಪ್ಪಿಕೊಳ್ಳದಿರಬಹುದು). ಇದಕ್ಕಾಗಿ ಲಂಕಾ ಕ್ರಿಕೆಟ್ ಮಂಡಳಿ ಆ ಮೂವರಿಗೆ ನಿಷೇಧ, ದಂಡ ಹಾಗೂ ಛೀಮಾರಿಯ ಶಿಕ್ಷೆಧಿವಿಸಿದೆ.್ರಕೆಟ್ನಲ್ಲಿ ಕ್ರೀಡಾಸೂರ್ತಿಗೆ ಧಕ್ಕೆ ತರುವ ಇಂಥ ಪ್ರಸಂಗಗಳು ಹೊಸದೇನೂ ಅಲ್ಲ. ರಣದೀವ್ ಮೋಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದ ಸೆಹ್ವಾಗ್ ಸಂತರೇನೂ ಅಲ್ಲ ಎನ್ನುವವರಿದ್ದಾರೆ. ಅದಕ್ಕೆ ಅವರು ಉದಾಹರಿಸುವುದು ಕಳೆದ ವರ್ಷ ಕೋಲ್ಕತ್ತದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ನಲ್ಲಿ ಸೆಹ್ವಾಗ್ ದಂಡಶಿಕ್ಷೆ ಅನುಭವಿಸಿದ ಪ್ರಕರಣವನ್ನು.ಟೆಸ್ಟ್ನಲ್ಲಿ ಭಾರತ ಇನಿಂಗ್ಸ್ ಗೆಲುವಿಗೆ ಹತ್ತಿರದಲ್ಲಿತ್ತು. ದಕ್ಷಿಣ ಆಫ್ರಿಕಾದ ಕೊನೆಯ ವಿಕೆಟ್ ಜೋಡಿ ಹಾಶಿಮ್ ಆಮ್ಲಾ ಮತ್ತು ಮಾರ್ನ್ ಮಾರ್ಕೆಲ್ ಕ್ರೀಸ್ನಲ್ಲಿದ್ದರು. ಅದಾಗಲೇ ಶತಕ ಬಾರಿಸಿದ್ದ ಅನುಭವಿ ಆಟಗಾರ ಆಮ್ಲ, ತೆಂಡುಲ್ಕರ್ ಓವರ್ನ ನಾಲ್ಕನೇ ಎಸೆತವನ್ನು ಸೆಹ್ವಾಗ್ರತ್ತ ತಳ್ಳಿ ಒಂಟಿ ರನ್ಗಾಗಿ ಓಡಿದರು. ಆದರೆ, ಸೆಹ್ವಾಗ್ ಚೆಂಡು ತಡೆಯುವ ಬದಲು ಸ್ವತಃ ಬೌಂಡರಿ ಗೆರೆಯತ್ತ ಒದ್ದರು. ಮುಂದಿನ ಓವರ್ನಲ್ಲಿ ಆಮ್ಲಾಗೆ ಬ್ಯಾಟಿಂಗ್ ಸಿಗದೆ, ಮಾರ್ಕೆಲ್ಗೆ ಸಿಗಲಿ ಎನ್ನುವುದು ಸೆಹ್ವಾಗ್ ಉದ್ದೇಶವಾಗಿತ್ತು. ಇದಕ್ಕಾಗಿ ಕ್ರೀಡಾ ್ಫೂರ್ತಿ ಉಲ್ಲಂಘಿಸಿದ ಆಪಾದನೆ ಹಾಗೂ ಶಿಕ್ಷೆಗೆ ದೆಹಲಿ ಆಟಗಾರ ಗುರಿಯಾದರು.ದರೆ, ರಣದಿವ್ ಪ್ರಕರಣಕ್ಕೂ ವೀರೂ ಪ್ರಕರಣಕ್ಕೂ ವ್ಯತ್ಯಾಸವಿದೆ. ಟೀಕಾಕಾರರು ಅದನ್ನು ಗಮನಿಸಬೇಕು.ಮ್ಲ ಶತಕ ಗಳಿಸುವುದಕ್ಕೆ ವೀರೂ ಅಡ್ಡಿ ಮಾಡಿರಲಿಲ್ಲ. ಜೊತೆಗೆ ಅವರು ಆ ರೀತಿ ಮಾಡಿದ್ದು ಭಾರತ ಬೇಗನೆ ಗೆಲ್ಲಲಿ ಎಂಬ ಕಾರಣದಿಂದ. ಆದರೆ, ರಣದಿವ್ ಕೃತ್ಯದಿಂದ ಪಂದ್ಯದ ಫಲಿತಾಂಶದ ಮೇಲೆ ಯಾವುದೇ ವ್ಯತ್ಯಾಸವಾಗುವುದು ಸಾಧ್ಯವಿರಲಿಲ್ಲ. ಏಕೆಂದರೆ, ಭಾರತದ ಗೆಲುವಿಗೆ 1 ರನ್ ಮಾತ್ರ ಬೇಕಿತ್ತು. ಅವರು ವೀರೂ ಶತಕ ಗಳಿಸಬಾರದು ಎಂಬ ಏಕೈಕ ವಿಕೃತಿಯಿಂದ ನೋಬಾಲ್ ಎಸೆದಿದ್ದರು.ರಡೂ ಪ್ರಕರಣಗಳ ನಡುವೆ ಇನ್ನೂ ಒಂದು ದೊಡ್ಡ ವ್ಯತ್ಯಾಸವಿದೆ.
ಸೆಹ್ವಾಗ್ ಚೆಂಡನ್ನು ಬೌಂಡರಿಯತ್ತ ಒದ್ದಾಗ ಮೈದಾನದ ಅಂಪೈರ್ಗಳು ಕೂಡಲೇ ಕ್ರಮ ತೆಗೆದುಕೊಂಡಿದ್ದರು. ಆಮ್ಲ ಗಳಿಸಿದ್ದು ಒಂಟಿ ರನ್ ಮಾತ್ರ ಎಂದು ಪರಿಗಣಿಸಿದ್ದರು ಹಾಗೂ 5 ಇತರೆ ರನ್ಗಳನ್ನು ದಂಡ ರೂಪದಲ್ಲಿ ನೀಡಿದ್ದರು. ಜೊತೆಗೆ ಉದ್ದೇಶಪೂರ್ವಕವಾಗಿ ಚೆಂಡು ಒದ್ದ ಸೆಹ್ವಾಗ್ ಕ್ರೀಡ್ಫಾೂರ್ತಿ ಉಲ್ಲಂಘಿಸಿದ್ದಾರೆ ಎಂದು ಮ್ಯಾಚ್ರೆಫ್ರಿಗೆ ದೂರು ನೀಡಿ ಶಿಕ್ಷೆ ಕೊಡಿಸಿದ್ದರು.ದರೆ, ರಣದಿವ್ ಪ್ರಕರಣದಲ್ಲಿ ಹಾಗಾಗಲೇ ಇಲ್ಲ. ಅಂಪೈರ್ಗಳು ಹೆಚ್ಚು ಜಾಗೃತರಾಗಿದ್ದರೆ, ರಣದಿವ್ ‘ಉದ್ದೇಶಪೂರ್ವಕವಾಗಿ ಎಸೆದ ನೋಬಾಲ್’ ಅನ್ನು ಅಮಾನ್ಯ ಮಾಡಿ ಸೆಹ್ವಾಗ್ ಬಾರಿಸಿದ ಸಿಕ್ಸರ್ ಅನ್ನು ಮಾನ್ಯ ಮಾಡಬಹುದಿತ್ತು. ಐಸಿಸಿ ನೀತಿಸಂಹಿತೆಯಲ್ಲಿ ಇದಕ್ಕೆ ಅವಕಾಶವಿತ್ತು. ಆದರೆ, ಡಂಬುಲದಲ್ಲಿದ್ದ ಅಂಪೈರ್ಗಳು ಕಣ್ಣುಮುಚ್ಚಿಕೊಂಡಿದ್ದರು. ಹಾಗೆ ನೋಡಿದರೆ, ಅಂಪೈರ್ಗಳಲ್ಲೇ ಗೊಂದಲವಿತ್ತು. ರಣದಿವ್ ನೋಬಾಲ್ ಮಾಡಿದ ಅರಿವಿದ್ದೂ, ಅಂಪೈರ್ ಅಸದ್ ರಾಫ್ ಸೆಹ್ವಾಗ್ರ ಹೊಡೆತಕ್ಕೂ ಸಿಕ್ಸರ್ ಸಂಕೇತ ನೀಡಿದರು. ಕೊನೆಗೆ ಸಿಕ್ಸರ್ ಮಟ್ಟಗೋಲು ಹಾಕಿಕೊಂಡು ಶತಕ ವಂಚಿಸಲಾಯಿತು.
No comments:
Post a Comment