Thursday, August 12, 2010

ಮಾತಿನ ಮಂಟಪ

ನಾನು ಯಾವಾಗಲೂ ದಿನಪತ್ರಿಕೆಗಳಲ್ಲಿ ಕ್ರೀಡಾ ಸುದ್ದಿಗಳನ್ನು ಮೊದಲು ಓದುತ್ತೇನೆ. ಕ್ರೀಡಾಪುಟದಲ್ಲಿ ಜನರ ಸಾಧನೆಗಳಿರುತ್ತವೆ. ಮುಖಪುಟದಲ್ಲಿರುವುದು ವೈಫಲ್ಯಗಳ ವೈಭವೀಕರಣ ಮಾತ್ರ....
-ಅರ್ಲ್ ವಾರೆನ್

*****
ಕ್ರೀಡಾ ಪಟುಗಳೆಂದರೆ ಯಾವ ತತ್ವಜ್ಞಾನಿಗಳಿಗೂ ಕಡಿಮೆ ಇಲ್ಲ. ಏಕೆಂದರೆ, ಸೋಲು-ಗೆಲುವುಗಳನ್ನು ಸ್ವತಃ ಕ್ರೀಡಾಪಟುಗಳಿಗಿಂತ ಉತ್ತಮವಾಗಿ ಬೇರೆ ಯಾರಿಂದಲೂ ವಿಶ್ಲೇಷಿಸಲು ಸಾಧ್ಯವಿಲ್ಲ.

ಯಾವುದೇ ಕ್ರೀಡೆಯ ಫಲಿತಾಂಶ, ಸಾಧನೆ, ವೈಫಲ್ಯಗಳ ಬಗ್ಗೆ ಮಾಧ್ಯಮಗಳು, ಜನರ ಅಭಿಪ್ರಾಯ ಒಂದು ರೀತಿಯಾಗಿದ್ದರೆ, ಆಯಾ ಕ್ರೀಡೆ, ಫಲಿತಾಂಶದಲ್ಲಿ ಪಾತ್ರ ವಹಿಸಿರುವ ಕ್ರೀಡಾಪಟುಗಳು ಅದನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತದೆ. ಕ್ರೀಡಾ ಪಟುಗಳು ತಾವು ಕಳಪೆಯಾಗಿ ಆಡಿದ್ದನ್ನು ಒಪ್ಪಿಕೊಳ್ಳುವುದು ಬಹಳ ಕಡಿಮೆ. ಎದುರಾಳಿಗಳ ಉತ್ತಮ ಆಟವನ್ನು ಹೊಗಳುವುದೂ ವಿರಳ. ಮಾತ್ರವಲ್ಲ. ಗೆದ್ದಾಗ ಹಾಗೂ ಸೋತಾಗ ಅವರ ಚಿಂತನೆಯ ರೀತಿ ತದ್ವಿರುದ್ಧವಾಗಿರುತ್ತದೆ.ಾವು ಪಂದ್ಯ ಸೋಲಲಿಲ್ಲ. ನಮಗೆ ಸಮಯ ಸಾಕಾಗಲಿಲ್ಲ...’ ಇದು ಅಮೆರಿಕನ್ ಫುಟ್ಬಾಲ್ನ ಖ್ಯಾತ ಕೋಚ್ ವಿನ್ಸಿ ಲೊಂಬಾರ್ಡಿ ಹೇಳಿಕೆ. ಇಂಥ ಹೇಳಿಕೆ ನೀಡುವುದು ಇವರು ಮಾತ್ರವಲ್ಲ. ಮೊಹಮ್ಮದ್ ಅಜರುದ್ದೀನ್ರಿಂದ, ಸಾನಿಯಾ ಮಿರ್ಜಾವರೆಗೆ, ಟೈಗರ್ ವುಡ್ಸ್ರಿಂದ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ವರೆಗೆ ಎಲ್ಲರೂ ಸೋಲಿನ ಸಂದರ್ಭದಲ್ಲಿ ಏನಾದರೊಂದು ಸಬೂಬಿಗೆ ಅಂಟಿಕೊಂಡವರ್ರೇೀಡಾಪಟುಗಳ ಇಂಥ ಉಕ್ತಿಗಳು ಕೇಳಲು ಮಜವಾಗಿರುತ್ತದೆ. ಎಷ್ಟೋ ಬಾರಿ ಅವುಗಳಲ್ಲಿ ಜೀವನದರ್ಶನವಿರುತ್ತದೆ. ಕ್ರೀಡಾಪಟುಗಳ ಹೇಳಿಕೆಗಳು ಅವರ ಚಿಂತನೆ, ಗ್ರಹಿಕೆ, ಓದು, ವಿಚಾರಶೀಲತೆಯನ್ನು ಪ್ರತಿಫಲಿಸುತ್ತವೆ.ಾಂಪಿಯನ್ನರಿಗೆ ಬೆಳಗಿನ ಉಪಾಹಾರವೆಂದರೆ ಲಘು ತಿಂಡಿಯಲ್ಲ... ಎದುರಾಳಿಗಳು ಎಂಬ ಗಾಲ್ಫ್ಆಟಗಾರ ನಿಕ್ ಸೀಜ್ ಮಾತು ಅನ್ವರ್ಥ.
ಯಾವುದೇ ಕ್ರೀಡೆಯೆಂದ ಮೇಲೆ ಸೋಲು ಗೆಲುವು ಸಾಮಾನ್ಯ. ಆದರೆ, ‘ಬಹುತೇಕ ಪಂದ್ಯಗಳನ್ನು ಗೆಲ್ಲುವದಕ್ಕಿಂತ ಹೆಚ್ಚಾಗಿ ಸೋಲಲಾಗುತ್ತದೆ’ ಎಂಬ ಅಮೆರಿಕದ ಬೇಸ್ಬಾಲ್ ಆಟಗಾರ ಮತ್ತು ಕೋಚ್ ಮಾತು ಅಕ್ಷರಶಃ ನಿಜ.

" ಪಂದ್ಯ ಟೈ ಆಗುವುದೆಂದರೆ ಸೋದರಿಯನ್ನು ಚುಂಬಿಸುವಂತೆ. ಸೋಲುವುದೆಂದರೆ ಹಲ್ಲು ಬಿದ್ದುಹೋಗಿರುವ ಅಜ್ಜಿಗೆ ಮುತ್ತು ಕೊಟ್ಟಂತೆ ಎಂದು ಅಮೆರಿಕದ ಮತ್ತೊಬ್ಬ ಬ್ಯಾಸ್ಕೆಟ್ಬಾಲ್ ಆಟಗಾರ ಜಾರ್ಜ್ ಬ್ರೆಟ್ ಹೇಳಿಕೆಯಲ್ಲಿ ಹತಾಶೆ ಇದೆಯೇ, ವಿನೋದ ಇದೆಯೇ ಎನ್ನುವುದನ್ನು ಹುಡುಕಬೇಕು.ರಿದರಲಿ ಪಿರಿದರ್ಥವಂ.... ಎಂಬ ಉಕ್ತಿಗೆ ಸೌರವ್ ಗಂಗೂಲಿ ಸ್ವಲ್ಪ ಮಟ್ಟಿಗೆ ಅನ್ವರ್ಥ. ಅವರು ಏನನ್ನಾದರೂ ಹೇಳುವಾಗ ಸುಮ್ಮನೆ ಮಾತು ಎಳೆಯುವುದಿಲ್ಲ. ಎರಡೇ ಮಾತಿನಲ್ಲಿ ಛಾಟಿ ಏಟು ಬೀಸಿರುತ್ತಾರೆ. ಅವರೊಮ್ಮೆ ಭಾರತದ ಗೆಲುವಿನ ಬಳಿಕ ಹೇಳಿದ್ದು ಹೀಗೆ... ‘ಅವರನ್ನು ನಾವು ಸೋಲಿಸಬಲ್ಲೆವು ಎಂದು ನಮಗೆ ಗೊತ್ತಿತ್ತು... ಅವರಿಗೂ ಗೊತ್ತಿತ್ತು...್ರೀಡಾಪಟುಗಳಿಗೆ ಹಾಸ್ಯಪ್ರಜ್ಞೆ ಬಹಳ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ, ಕೆಲವೊಮ್ಮೆ ಆಕಸ್ಮಿಕವಾಗಿ ಅವರ ಮಾತುಗಳಲ್ಲಿ ಹಾಸ್ಯ ಇಣುಕುತ್ತಿರುತ್ತದೆ. ತೆಂಡುಲ್ಕರ್ ಹರಟೆ ಕೊಚ್ಚುವುದು ಕಡಿಮೆ. ಆದರೆ, ಮಾತನಾಡಿದಾಗ ಅರ್ಥಗರ್ಭಿತವಾಗಿರುತ್ತದೆ. ಕೆಲವೊಮ್ಮೆ ಹಾಸ್ಯದ ಲೇಪವೂ ಇರುತ್ತದೆ. ಅಂಥ ಒಂದು ಹೇಳಿಕೆ ಇಲ್ಲಿದೆ... ‘ನಾನು ಇಲ್ಲಿಗೆ ಬರುವ ಮುನ್ನ ನನಗೆ ಸ್ವಲ್ಪ ಬೆನ್ನು ನೋವಿತ್ತು. ಪಾಕ್ ವಿರುದ್ಧ ಆಡುವಾಗಲೆಲ್ಲಾ ನನಗೆ ಬೆನ್ನು ನೋವು ಬರುತ್ತದೆ ಎನ್ನುವುದು ನನ್ನ ಭಾವನೆ’...ಥ್ಲೀಟ್ ಆದವನು ಜೇಬಿನಲ್ಲಿ ಹಣ ಇಟ್ಟುಕೊಂಡು ಓಡುವುದು ಅಸಾಧ್ಯ. ಅವನು ಹೃದಯದಲ್ಲಿ ಭರವಸೆ ಮತ್ತು ತಲೆಯಲ್ಲಿ ಕನಸು ತುಂಬಿಕೊಂಡು ಓಡಬೇಕು ಎನ್ನುವುದು ಜೆಕ್ ಗಣರಾಜ್ಯದ ಮಾಜಿ ಒಲಿಂಪಿಕ್ಸ್ ಚಾಂಪಿಯನ್ ಎಮಿಲ್ ಝಾಟೊಪೆಕ್ರ ಜಗತ್ಪ್ರಸಿದ್ಧ ಹೇಳಿಕೆ.ಸೋಲುಗಳು ಬಹಳ ವಿಚಿತ್ರ. ಆರಂಭದಲ್ಲಿ ಸೋತರೆ ಕಳಪೆ ಆರಂಭವೆನ್ನಲಾಗುತ್ತದೆ. ಋತುವಿನ ಮಧ್ಯದಲ್ಲಿ ಸೋತರೆ ಕಳಪೆ ಫಾರ್ಮ್ ಎನ್ನಲಾಗುತ್ತದೆ. ಕೊನೆಯಲ್ಲಿ ಸೋತರೆ ಬೇಕೆಂದೇ ಸೋತಿರೆಂದು ಜರಿಯಲಾಗುತ್ತದೆ ಎಂದು ಅಮೆರಿಕದ ಬೇಸ್ಬಾಲ್ ಆಟಗಾರ ಜೇನ್ ವೌಚ್ ಹೇಳಿದ್ದರು.ದೇವರೇ, ಸ್ವರ್ಗದಲ್ಲಿ ಕ್ರಿಕೆಟ್ ಎನ್ನುವುದೇನಾದರೂ ಇದ್ದರೆ, ಅಲ್ಲಿಯೂ ಮಳೆ ಬರಲಿ...’ ಎನ್ನುವುದು ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಇಂಗ್ಲೆಂಡ್ನ ಏಕೈಕ ಪ್ರಧಾನಿ ಅಲೆಕ್ ಡಗ್ಲಾಸ್ ಹೋಮ್ ಹೇಳಿಕೆ.ಂಪೈರ್ಗಳೆಂದರೆ ಬಚ್ಚಲುಮನೆಯ ಗೀಸರ್ನಂತೆ. ಅದು ನಮಗೆ ಬೇಕೇ ಬೇಕು. ಆದರೆ, ಅದರ ಅಸ್ತಿತ್ವ ನಮಗೆ ನೆನಪಾಗುವುದು ಕೆಟ್ಟುಹೋದಾಗ ಮಾತ್ರ... ಎನ್ನುವುದು ಇಂಗ್ಲೆಂಡ್ನ ಪ್ರಖ್ಯಾತ ಕ್ರಿಕೆಟ್ ವಿಮರ್ಶಕ ನೆವಿಲ್ ಕಾರ್ಡಸ್ ಅಭಿಪ್ರಾಯ.


ಪೋಲೋ ಆಡುವುದೆಂದರೆ, ಭೂಕಂಪದ ಸಂದರ್ಭದಲ್ಲಿ ಗಾಲ್ಫ್ಕಲಿಯಲು ಯತ್ನಿಸಿದಂತೆ ಎಂದು ಹಾಲಿವುಡ್ ನಟ ಸಿಲ್ವೆಸ್ಟರ್ ಸ್ಟಾಲೋನ್ ಹೇಳಿದ್ದರು. ವಿವಾದಗಳಲ್ಲಿ ಸಿಲುಕಿದಾಗ ಕ್ರೀಡಾಪಟುಗಳು ತಮ್ಮನ್ನು ಸಮರ್ಥಿಸಿಕೊಳ್ಳುವ ರೀತಿ ಭಿನ್ನವಾಗಿರುತ್ತದೆ. ‘ನಾನು ಕೆಲವರೊಂದಿಗೆ ಮಲಗಿದ್ದೇನೆ. ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ. ನನಗೆ ಸಂತೋಷವೇನೆಂದರೆ, ಅವೆಲ್ಲವೂ ನನ್ನದೇ ತಪ್ಪುಗಳು. ಬೇರೆ ಯಾರೂ ಕಾರಣರಲ್ಲ ಎನ್ನುವುದಾಗಿದೆ’ ಎನ್ನುವುದು ಅನೇಕ ಲೈಂಗಿಕ ಹಗರಣಗಳಲ್ಲಿ ಸಿಲುಕಿರುವ ಶೇನ್ ವಾರ್ನ್ರ ಮಾತು.ಮಹಿಳೆಯರ ಜೊತೆ ವಿವಾಹಬಾಹಿರ ಸಂಬಂಧ ಬೆಳೆಸಿ ಸಿಕ್ಕಿಬಿದ್ದು, ಧರ್ಮಪತ್ನಿಯಿಂದ ವಿಚ್ಛೇದನ ಪಡೆದಿರುವ ಗಾಲ್ಫ್ತಾರೆ ಟೈಗರ್ ವುಡ್ಸ್ ಹೇಳುವುದು ಹೀಗೆ.... ‘ಗಾಲ್ಫ್ಅಂಕಣದ ಸಾಧನೆಗಳಿಗೆ ಅಷ್ಟೇನೂ ಬೆಲೆಯಿಲ್ಲ. ಸಭ್ಯತೆ ಮತ್ತು ಪ್ರಾಮಾಣಿಕತೆಗೆ ಮಾತ್ರ ಮಹತ್ವ...’
ಪತ್ನಿ ಬಿಟ್ಟುಹೋದ ಮೇಲೆ ವುಡ್ಸ್ ಒಂಟಿಯಾಗಿ (?) ಬದುಕುತ್ತಿದ್ದಾರೆ. ಹಾಗಾದರೆ, ಅವರ ಊಟೋಪಚಾರದ ಗತಿ? ಅದಕ್ಕೆ ಅವರ ಉತ್ತರ ಹೀಗೆ... ‘ನನಗೆ ಅಡುಗೆ ಮಾಡಲು ಬರುವುದಿಲ್ಲ. ಆದರೆ, ಮನೆ ಬಾಗಿಲಿಗೆ ಪಿಝಾ ತಂದುಕೊಡುವವರು ಇರುವವರೆಗೂ ಅದೇನೂ ಸಮಸ್ಯೆಯಲ್ಲ...’
ರೋಜರ್ ಫೆಡರರ್ ವಿಶ್ವದಾಖಲೆ ಸತತ 237 ವಾರ ಕಾಲ ವಿಶ್ವ ನಂ.1 ಆಟಗಾರರೆನಿಸಿದ್ದವರು. ಇತ್ತೀಚೆಗೆ ರಾಫೆಲ್ ನಡಾಲ್ಗೆ ಆ ಗೌರವ ಬಿಟ್ಟುಕೊಟ್ಟಿದ್ದಾರೆ. ಆದರೆ, ಆ ಬಗ್ಗೆ ಅವರೇನೂ ತಲೆಕೆಡಿಸಿಕೊಂಡಿಲ್ಲ. ‘ನಾನು ಐವತ್ತು ವರ್ಷ ಕಾಲ ನಂ.1 ಆಗಿರಲು ಸಾಧ್ಯವಿಲ್ಲ. ಮುಂದೇನಾಗುವುದೋ ನೋಡೋಣ...’ ಎನ್ನುವುದು ಇತ್ತೀಚಿನ ಅವರ ಹೇಳಿಕೆ.


ಕೆಲವು ಪ್ರಸಿದ್ಧ ಉಕ್ತಿಗಳು

ಚಾಂಪಿಯನ್ಗಳು ಜಿಮ್ನಲ್ಲಿ ತಯಾರಾಗುವುದಿಲ್ಲ. ಚಾಂಪಿಯನ್ನರು ತಮ್ಮಳಗೆ ಅಂತರ್ಗತವಾಗಿರುವ ಪ್ರಬಲವಾದ ಇಚ್ಛೆ, ಕನಸು ಮತ್ತು ದೂರದೃಷ್ಟಿಯಿಂದ ರೂಪುಗೊಂಡಿರುತ್ತಾರೆ.
-ಮುಹಮ್ಮದ್ ಅಲಿ
ದೇವರು ನಾನು ಚೆನ್ನಾಗಿ ಆಡುವಂತೆ ಮಾಡುತ್ತಾನೆ. ಅದೇ ಕಾರಣಕ್ಕೆ ನಾನು ಯಾವಾಗಲೂ ಮೈದಾನ ಪ್ರವೇಶಿಸುವ ಸಂದರ್ಭದಲ್ಲಿ ಶಿಲುಬೆಯ ಸಂಕೇತ ಪ್ರದರ್ಶಿಸುತ್ತೇನೆ. ಹಾಗೆ ಮಾಡದಿದ್ದರೆ, ದೇವರಿಗೆ ವಂಚನೆ ಮಾಡಿದ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ.
-ಡೀಗೋ ಮರಡೋನಾ
ನನ್ನನ್ನು ನಾನು ಮೈಕೆಲ್ ಫೆಲ್ಪ್ಸ್ಗೆ ಹೋಲಿಸಿಕೊಳ್ಳಲಾರೆ. ನಾನು ಟ್ರ್ಯಾಕ್ ಮೇಲೆ ಓಡುತ್ತೇನೆ. ಅವರು ನೀರಿನಲ್ಲಿ ಈಜುತ್ತಾರೆ. ಅವರ ಕ್ರೀಡೆಯಲ್ಲಿ ಅವರು ಶ್ರೇಷ್ಠರು.
-ಉಸೇನ್ ಬೋಲ್ಟ್
ನಿಮಗೆ ಬೈಕ್ನಿಂದ ಬೀಳುವ ಭಯವಿದ್ದರೆ, ಬೈಕ್ ಏರಲೇ ಬೇಡಿ
-ಲ್ಯಾನ್ಸ್ ಆರ್ಮ್ಸ್ಟ್ರಾಂಗ್
ಅಭ್ಯಾಸದಲ್ಲಿ ಹೆಚ್ಚು ಬೆವರು ಹರಿಸುವವನು, ಹೋರಾಟದಲ್ಲಿ ಕಡಿಮೆ ರಕ್ತ ಚೆಲ್ಲುತ್ತಾನೆ.
-ಅನಾಮಿಕ
ಪಿಚ್ ಬ್ಯಾಟಿಂಗ್ಗೆ ಸುಲಭವಾಗಿತ್ತು. ಆದರೂ, ಆಡುವುದು ಸುಲಭವಾಗಿರಲಿಲ್ಲ.
-ಎಂಎಸ್ ಧೋನಿ
ಒಂದೆರಡು ಬಾರಿಯಾದರೂ ಪಂಕ್ಚರ್ ಆಗದೆ ಯಶಸ್ಸಿನ ದಾರಿಯಲ್ಲಿ ಪ್ರಯಾಣ ಮಾಡಿದವರು ಯಾರೂ ಇಲ್ಲ.
-ನವ್ಜೋತ್ ಸಿಧು
ಮದುವೆಯಾದ ಬಳಿಕ ಬೇರೆಯವರ ಹೆಂಡತಿ ಸುಂದರವಾಗಿ ಕಾಣುತ್ತಾಳೆ.
-ನವ್ಜೋತ್ ಸಿಧು

No comments:

Post a Comment