Friday, September 25, 2009

ರಾಗ ಲಹರಿ



ಸ್ನೇಹದ ಬಗ್ಗೆ ಒಂದಿಷ್ಟು
ಗಾಯವಾದರೆ ಆ ನೋವನ್ನು ಸಹಿಸುವುದು ಸುಲಭ. ಆದರೆ ಮನಸ್ಸಿಗೆ ಆಗುವ ನೋವು ಸಹಿಸುವುದು ಕಷ್ಟ.
ಅದರಲ್ಲೂ ಸ್ನೇಹಿತರಿಂದ ಆಘಾತಕ್ಕೊಳಗಾದಾಗ ಸ್ನೇಹವೇ ಮುರಿದುಹೋಗುವ ಅಪಾಯ ಜಾಸ್ತಿ.
ಎಲ್ಲಾ ಸ್ನೇಹಿತರೂ ಒಂದೇ ರೀತಿ ಇರುವುದಿಲ್ಲ. ಕೆಲವರು ಆಪ್ತಸ್ನೇಹಿತರಿರುತ್ತಾರೆ. ಆಪ್ತರೆನಿಸಿಕೊಂಡೂ ಸಮಯದಲ್ಲಿ ಕೈಕೊಡುವವರಿರುತ್ತಾರೆ.
ಎಲ್ಲವನ್ನೂ ಕೊಡಲು ಸಿದ್ಧನಿರುವವನು, ಏನನ್ನೂ ಅಪೇಕ್ಷೆ ಪಡದವನು ಸ್ನೇಹಿತನೆನಿಸಿಕೊಳ್ಳುತ್ತಾನೆ. ನೋವನ್ನು ಹಂಚಿಕೊಳ್ಳುವವನು, ಸಂತೋಷವನ್ನು ಹಂಚುವವನು ಸ್ನೇಹಿತ. ಆದರೆ ಸ್ನೇಹವೆಂದರೆ ಒನ್‌ ವೇ ಟ್ರಾಫಿಕ್‌ ಅಲ್ಲವಲ್ಲ, ನಾವು ಸ್ನೇಹಿತರ ಬಗ್ಗೆ ಯೋಚಿಸುವ ಮಾದರಿಯಲ್ಲೇ ಸ್ನೇಹಿತರೂ ನಮ ಬಗ್ಗೆ ಯೋಚಿಸಬಹುದು.
ಸ್ನೇಹ ನಿತ್ಯನೂತನ. ನಿತ್ಯ ಯಾರಾದರೂ ಹೊಸಬರು ಪರಿಚಯವಾಗುತ್ತಾರೆ. ಹಲವರು ಆ ಕ್ಷಣದಲ್ಲೇ ಮರೆತುಹೋಗುತ್ತಾರೆ. ಕೆಲವರು ನೆನಪಿನಲ್ಲುಳಿಯತ್ತಾರೆ. ಕೆಲವರು ಆಪ್ತರಾಗುತ್ತಾರೆ. ಈ ನಡುವೆ ನಾವು ಎಷ್ಟೂ ಉತ್ತಮ ಸ್ನೇಹಿತರನ್ನು ಕಳೆದುಕೊಂಡಿರುತ್ತೇವೆ. ಎಷ್ಟೋ ಜನರ ಸ್ನೇಹದ ಸುಳಿಗೆ ಸಿಲುಕಿ ಬಳಲುತ್ತಿರುತ್ತೇವೆ. ಆದರೆ ನಮಗೆ ಎಂಥ ಸ್ನೇಹಿತರಿರುತ್ತಾರೆ ಎನ್ನುವುದು ನಮ ಮನೋಸ್ಥಿತಿಯನ್ನೂ ಅವಲಂಬಿಸಿರುತ್ತದೆ. ಹಲವು ಬಾರಿ ನಾವು ಸ್ನೇಹವನ್ನು, ಸ್ನೇಹಿತರನ್ನು ಗುರುತಿಸುವಲ್ಲಿ ಎಡವಿರುತ್ತೇವೆ. ಇದು ಗೊತ್ತಾದ ಮೇಲೂ ಸರಿಪಡಿಸುವ ಯತ್ನವನ್ನೇ ಮಾಡುವುದಿಲ್ಲ.
ಸ್ನೇಹ ಇವರಿಗೊಂದು ಏಣಿ: ಕೆಲವರಿರುತ್ತಾರೆ. ಲೆಕ್ಕಾಚಾರದ ಸ್ನೇಹಿತರು ಅವರು. ತಮ ಯಾವುದೋ ಉದ್ದೇಶ ಸಾಧನೆಗಾಗಿ ಅವರು ಪರಿಚಯ ಬೆಳೆಸಿಕೊಳ್ಳುತ್ತಾರೆ. ಆಪ್ತ ಸ್ನೇಹಿತರಂತೆ ಮರುಳು ಮಾಡುತ್ತಾರೆ. ಎಷ್ಟು ಸಾಧ್ಯವೋ ಅಷ್ಟೂ ಸಹಾಯವನ್ನು ಬಾಚಿಕೊಳ್ಳುತ್ತಾರೆ. ಉದ್ದೇಶ ಸಾಧನೆ ಆದ ಮೇಲೆ ಮತ್ತೆ ತಿರುಗಿಯೂ ನೋಡುವುದಿಲ್ಲ.
ವಿಶ್ವಾಸದ್ರೋಹಕ್ಕಿಂತ ದ್ರೋಹವಿಲ್ಲ: ಸ್ನೇಹಕ್ಕೆ ಪರಸ್ಪರ ವಿಶ್ವಾಸವೇ ತಳಹದಿ. ಆದರೆ ಕೆಲವರ ಸ್ನೇಹದಲ್ಲಿ ಪರಸ್ಪರ ವಿಶ್ವಾಸಕ್ಕೆ ಬೆಲೆಯೇ ಇರುವುದಿಲ್ಲ. ಎಷ್ಟೋ ಅಂತರಂಗದ ವಿಷಯಗಳನ್ನು ತಿಳಿದುಕೊಂಡ ಬಳಿಕ ದೂರ ಸರಿಯುತ್ತಾರೆ. ಶಾಶ್ವತವಾಗಿ ಸ್ನೇಹಿತರಾಗಿರುತ್ತಾರೆ ಎಂಬ ವಿಶ್ವಾಸದ ಮೇಲೆ ಇರುವುದೆಲ್ಲವನ್ನೂ ಹೇಳಿಕೊಂಡ ಮೇಲೆ ಸಲ್ಲದ ಕಾರಣಗಳಿಗಾಗಿ ದೂರ ಸರಿಯುವ, ಬೆನ್ನಿಗೆ ಚೂರಿ ಇರಿಯುವ ಇಂಥ ಸ್ನೇಹಿತರಿಂದ ಆಗುವ ನೋವಿಗೆ ಸುಲಭದಲ್ಲಿ ಮದ್ದು ಸಿಗುವುದಿಲ್ಲ.
ಹಿಟ್ಲರ್‌ ವಂಶದವರು: ಕೆಲವರಿರುತ್ತಾರೆ. ಸಣ್ಣ ಸಣ ವಿಷಯಕ್ಕೂ ಹಟ ಮಾಡುತ್ತಾರೆ. ತಾವು ಹೇಳಿದಂತೆಯೇ ಎಲ್ಲವೂ ನಡೆಯಬೇಕೆಂದರು ಬಯಸುತ್ತಾರೆ. ತಮ ಸಹಾಯ ಮತ್ತು ಮಾರ್ಗದರ್ಶನವಿಲ್ಲದೇ ಇತರರು ಬದುಕುವುದೇ ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ. ಇತರರ ನಿರ್ಧಾರಗಳನ್ನು ಸ್ವತಃ ತಾವೇ ತೆಗೆದುಕೊಳ್ಳುತ್ತಾರೆ. ಇಂಥ ಸ್ನೇಹಿತರೂ ಬಹಳ ಅಪಾಯಕಾರಿ.
ತೀರ್[ಗಾರರು: ಮಹಾನ್‌ ತೀರ್[ಗಾರರು ಇವರು. ಆತವಿಶ್ವಾಸವನ್ನೇ ನಾಶಮಾಡಿಬಿಡುತ್ತಾರೆ ಇಂಥ ಸ್ನೇಹಿತರು. ಇವರು ಯಾವಾಗಲೂ ನೆಗೆಟೀವ್‌ ಚಿಂತನೆಯಲ್ಲೇ ಇರುತ್ತಾರೆ. ಅವರಿಗೆ ಯಾವಾಗಲೂ ತಪ್ಪುಗಳೇ ಕಾಣುತ್ತವೆ. ಎಷ್ಟೂ ಬಾರಿ ಸ್ನೇಹದ ಗೆರೆಯನ್ನು ದಾಟಿ ಕಟು ಮಾತುಗಳನ್ನಾಡಿಬಿಡುತ್ತಾರೆ.
ಮಾತು ಉಳಿಸಿಕೊಳ್ಳದವರು: ಇಂಥ ಸ್ನೇಹಿತರಿಗೆ ತಮ ಮಾತಿನಂತೆ ನಡೆಯುವುದು ಗೊತ್ತಿಲ್ಲ. ಇಂಥ ಸ್ನೇಹಿತರನ್ನು ಸಿನಿಮಾಕ್ಕೋ, ಮತ್ತೆಲ್ಲಿಗೋ ಕರೆಯುವುದೂ ಅಪಾಯಕಾರಿ. ಏಕೆಂದರೆ ಅವರು ಯಾವತ್ತೂ ಸಮಯಕ್ಕೆ ಸರಿಯಾಗಿಬರುವುದಿಲ್ಲ ಅಥವಾ ಬರುವುದೇ ಇಲ್ಲ. ಇಂಥ ಸ್ನೇಹಿತರನ್ನು ಯಾವತ್ತೂ, ಯಾವ ವಿಷಯಕ್ಕೂ ಅವಲಂಬಿಸುವುದು ಸಾಧ್ಯವಿಲ್ಲ.
ಸುದ್ದಿಕೋರರು: ಗಾಸಿಪ್‌ಗಳನ್ನು ಯಾರು ತಾನೇ ಆಸ್ವಾದಿಸುವುದಿಲ್ಲ? ಆದರೆ ಇಂಥ ಸ್ನೇಹಿತರು ಸ್ನೇಹವನ್ನೇ ಗಾಸಿಪ್‌ ವಿಷಯವಾಗಿ ಮಾಡಿಕೊಂಡಿರುತ್ತಾರೆ. ಸ್ನೇಹದಿಂದ ಹೇಳಿಕೊಂಡ ಆಪ್ತ ಸಂಗತಿಗಳನ್ನು ಇಂಥ ಸ್ನೇಹಿತರು ಯಾರ ಬಳಿ ಚರ್ವಿತಚರ್ವಣವಾಗಿ ಹೇಳಿಕೊಂಡು ನಗುತ್ತಿರುತ್ತಾರೋ ತಿಳಿಯುವುದಿಲ್ಲ. ದೂರ ಇರಿಸಬೇಕಾದಂಥ ಸ್ನೇಹಿತರು ಇವರು.
ಸ್ವಾರ್ಥಿಗಳು: ಯಾವಾಗಲೂ ತಮ ಬಗ್ಗೆಯೇ ಯೋಚಿಸುತ್ತಾರೆ. ಬೇರೆಯವರ ಅಭಿಪ್ರಾಯಗಳಿಗೆ ಬೆಲೆ ಕೊಡುವುದಿಲ್ಲ. ಸ್ನೇಹಿತರಿಗಾಗಿ ಯೋಚಿಸಲು ಅವರ ಬಳಿ ವ್ಯವಧಾನವೇ ಇರುವುದಿಲ್ಲ.
ಸ್ಪರ್ಧಿ: ಸ್ನೇಹ ಇಂಥವರಿಗೆ ಅರ್ಥವೇ ಆಗಿರುವುದಿಲ್ಲ. ಸಣ್ಣ ಸಣ್ಣ ವಿಷಯಗಳಿಗೂ ಸ್ನೇಹಿತರೊಂದಿಗೆ ಸ್ಪರ್ಧೆ ನಡೆಸುತ್ತಾರೆ. ತ್ಯಾಗದ ಮಹತ್ವವಂತೂ ತಿಳಿದಿರುವುದೇ ಇಲ್ಲ ಬಿಡಿ.
ಅವಲಂಬಿಗಳು: ಸದಾ ಕಾಲ, ಎಲ್ಲಾ ವಿಷಯಕ್ಕೂ ಸ್ನೇಹಿತರನ್ನೇ ಅವಲಂಬಿಸಿರುತ್ತಾರೆ. ಸ್ವಂತವಾಗಿ ಯೋಚಿಸುವ ಶಕ್ತಿಯನ್ನೇ ಅವರು ಕಳೆದುಕೊಂಡಿರುತ್ತಾರೆ. ಸ್ನೇಹಿತರು ಸದಾ ಕಾಲ ತಮಗಾಗಿಯೇ ಇರಬೇಕು ಎಂದು ಬಯಸುತ್ತಾರೆ. ತಮನ್ನು ಬಿಟ್ಟು ಬೇರೊಬ್ಬ ಸ್ನೇಹಿತರನ್ನು ಹೊಂದಿರಬಾರದು ಎಂದು ಅಸಹನೆ ವ್ಯಕ್ತ ಪಡಿಸುತ್ತಾರೆ. ಇಂಥ ಸ್ನೇಹಿತರು ತಾವೂ ನರಳುತ್ತಾರೆ. ಇತರರಿಗೂ ನೋವು ತರುತ್ತಾರೆ.

No comments:

Post a Comment