Friday, July 31, 2009

ರಾಗ ಲಹರಿ


ಮನೆ ಹುಟುಕಾಟ ಮತ್ತು ಸೆಕ್ಯುಲರಿಸಂ

ಇಮ್ರಾನ್ ಹಶ್ಮಿ ಸಾಲು ಸಾಲು ಚಿತ್ರಗಳಲ್ಲಿ ನಾಯಕಿಯರ ತುಟಿಗೆ ತುಟಿ ಬೆಸೆದು ಮುತ್ತಿಡುವಾಗ ನಾನು ಮುಸ್ಲಿಂ, ಈ ಹುಡುಗಿಯರೆಲ್ಲಾ ಹಿಂದು ಎನ್ನುವುದು ಅವರಿಗೆ ನೆನಪಾಗಿರಲಿಲ್ಲ. ಆಗ ಅವರು ಕೇವಲ ಕಲಾವಿದರಾಗಿದ್ದರು. ಹಿಂದೂ ನಿದರ್ೇಶಕರ, ನಿಮರ್ಾಪಕರ, ಸಹ ಕಲಾವಿದರ ಜೊತೆ ಕೆಲಸ ಮಾಡುವಾಗ ತಾವು ಮುಸ್ಲಿಂ ಎನ್ನುವುದು ಹಶ್ಮಿಗೆ ನೆನಪಾಗಿರಲಿಲ್ಲ. ಆಗ ಅವರು ಕೇವಲ ಕಲಾವಿದರಾಗಿದ್ದರು. ಮುಂಬೈನ ಪಾಲಿ ಹಿಲ್ನಲ್ಲಿ ಖರೀದಿಸಲು ಮನೆ ಸಿಗಲಿಲ್ಲ ಎಂಬ ಕಾರಣಕ್ಕೆ ಅವರಿಗೆ ತಾವು ಮುಸ್ಲಿಂ ಎನ್ನುವುದು ನೆನಪಾಯಿತು. ಮನೆ ಸಿಗದಿರುವುದಕ್ಕೆ ನನಗೆ ನನ್ನ ಧರ್ಮವೇ ಕಾರಣ. ನಾನು ಮುಸ್ಲಿಂ ಆಗಿರದಿದ್ದರೆ, ನನಗೆ ಮನೆ ಸಿಕ್ಕಿರುತ್ತಿತ್ತು ಎಂದು ಕಂಬನಿ ಸುರಿಸಿದರು. ಇದೇನಾ ಜಾತ್ಯತೀತವಾದ ಎಂದು ಪ್ರಶ್ನೆ ಎತ್ತಿದರು.
ಕೆಲವರಿಗೆ (ಎಲ್ಲರೂ ಅಲ್ಲ) ಬದುಕಿನುದ್ದಕ್ಕೂ ಹಲವು ಲಾಭದಾಯಕ ಮಜಲುಗಳನ್ನು ದಾಟುವಾಗ, ಅವಕಾಶಗಳನ್ನು ಪಡೆಯುವಾಗ ಮತ್ತು ಜನಪ್ರಿಯತೆಯ ಏಣಿ ಏರುವಾಗ ತಮ್ಮ ಜಾತಿ, ಧರ್ಮದ ನೆನಪಿರುವುದಿಲ್ಲ. ನಾವು ಭಾರತೀಯರು ಎಂದೇ ಅವರು ಪೋಸ್ ಕೊಡುತ್ತಾರೆ. ಆದರೆ, ತಮ್ಮ ಇಷ್ಟದಂತೆ ಯಾವುದೋ ಕೆಲಸ ನೆರವೇರದೇ ಇದ್ದಾಗ ಅವರಿಗೆ ತಾವು ಅಲ್ಪಸಂಖ್ಯಾತ ಎಂಬ ವಿಷಯ ನೆನಪಾಗಿ ಬಿಡುತ್ತದೆ. ತಾನು ಅಲ್ಪ ಸಂಖ್ಯಾತ ಆಗಿರದಿದ್ದರೆ, ಹೀಗಾಗುತ್ತಲೇ ಇರಲಿಲ್ಲ ಎಂದು ಘಂಟಾಘೋಷವಾಗಿ ಹೇಳಿಬಿಡುತ್ತಾರೆ. ಹಶ್ಮಿಗೆ ಪಾಲಿ ಹಿಲ್ನಲ್ಲಿ ಮನೆ ಸಿಗದೇ ಇರುವುದಕ್ಕೆ ಬೇರೆಯೇ ಕಾರಣ ಇರಬಹುದು. ಇದಕ್ಕೆಲ್ಲಾ ಮತೀಯ ಬಣ್ಣ ಹಚ್ಚುವ ಅಗತ್ಯವಿರಲಿಲ್ಲ. ಬೆಂಗಳೂರಿನಲ್ಲೂ ಹಿಂದೂಏತರರು ಹೆಚ್ಚಾಗಿ ನೆಲೆಸಿರುವ ಕೆಲವು ಬಡಾವಣೆಗಳಲ್ಲಿ ಹಿಂದೂಗಳಿಗೆ ಮನೆ ಸಿಗುವುದಿಲ್ಲ. ಬ್ರಾಹ್ಮಣರು ಹೆಚ್ಚಾಗಿರುವ ಕೆಲವು ಬಡಾವಣೆಗಳಲ್ಲಿ ಮುಸ್ಲಿಮರಿಗೆ ಮಾತ್ರವಲ್ಲ, ಅನ್ಯ ಜಾತಿಗಳ ಹಿಂದೂಗಳಿಗೇ ಮನೆ ಸಿಗುವುದಿಲ್ಲ. ಆದರೆ, ಇದಕ್ಕೆಲ್ಲಾ ಮತೀಯ ತಾರತಮ್ಯ ಕಾರಣವೇನಲ್ಲ. ಸುತ್ತ ಮಾಂಸಾಹಾರಿಗಳೇ ಇರುವ ವಠಾರದಲ್ಲಿ ಸಸ್ಯಾಹಾರಿಗಳು ಮನೆ ಮಾಡಲು ಹಿಂಜರಿಯುವುದಕ್ಕೆ ಇರುವಂಥ ಕಾರಣಗಳೇ ಅದಕ್ಕೂ ಇರುತ್ತವೆ.
ಹೀಗೆಲ್ಲಾ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ.
ಕ್ರಿಕೆಟಿಗ ಮೊಹ್ಮದ್ ಅಜರುದ್ದೀನ್ ಸಹ ಮ್ಯಾಚ್ಫಿಕ್ಸಿಂಗ್ ಸುಳಿಗೆ ಸಿಲುಕಿ ನಿಷೇಧ ಅನುಭವಿಸುತ್ತಿದ್ದ ದಿನಗಳಲ್ಲಿ ತಾನು ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಹೀಗೆಲ್ಲಾ ಆಗುತ್ತಿದೆ ಎಂದು ದೂರಿದ್ದರು. ಆದರೆ, ಅವರು ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದ ದಿನಗಳಲ್ಲಿ ಅವರಿಗೆ ತಾವು ಅಲ್ಪ ಸಂಖ್ಯಾತ ಎನ್ನುವುದು ನೆನಪಿರಲಿಲ್ಲ. ಸದ್ಯ ಕಾಂಗ್ರೇಸ್ ಪಕ್ಷದ ಸಂಸದರಾಗಿರುವ ಅಜರ್ ತಾವು ಅಲ್ಪ ಸಂಖ್ಯಾತ ಎನ್ನುವುದನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ. ಮತ ಕೇಳುವ ಸಂದರ್ಭದಲ್ಲೂ ಅವರು ತಾವು ಭಾರತೀಯ ಹಾಗೂ ಕ್ರಿಕೆಟಿಗ ಎಂದು ಹೇಳಿಕೊಂಡಿದ್ದರು.
ಭಾರತೀಯ ಸಮಾಜ ಯಾವತ್ತೂ ಬಹುಸಂಖ್ಯಾತ, ಅಲ್ಪ ಸಂಖ್ಯಾತರೆಂಬ ಮತೀಯ, ಜನಾಂಗೀಯ ತಾರತಮ್ಯ ಮಾಡಿಲ್ಲ. ಬಾಲಿವುಡ್ನ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್, ಆಮೀರ್ ಖಾನ್, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್ರನ್ನು ನಾವು ಅವರ ಕಲೆಯಿಂದ ಗುರುತಿಸುತ್ತೇವೆ. ಧರ್ಮದಿಂದಲ್ಲ. ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರ ಪಾದಸ್ಪಶರ್ಿಸಿ ಗೌರವಿಸುವಾಗ ಎಲ್ಲರಿಗೂ ಅವರ ಸಾಧನೆ,ಮೇರು ವ್ಯಕ್ತಿತ್ವ ಕಾಣುವುದೇ ಹೊರತು ಜಾತಿಯಲ್ಲ. ಹಿಂದೂಸ್ತಾನಿ ಸಂಗೀತದ ಬಹುಪಾಲು ದಿಗ್ಗಜರು ಮುಸ್ಲಿಮರಾಗಿದ್ದರೂ (ಬಿಸ್ಮಿಲ್ಲಾ ಖಾನ್, ಬಡೇ ಗುಲಾಮ್ ಅಲಿ ಖಾನ್, ಅಮ್ಜದ್ ಅಲಿ ಖಾನ್, ಫತೇ ಅಲಿ ಖಾನ್, ಪವರ್ೀನ್ ಸುಲ್ತಾನಾ, ರಷೀದ್ ಖಾನ್ ಇನ್ನೂ ಅನೇಕ ಮಹಾನುಭಾವರು) ಅವರೆಲ್ಲರನ್ನೂ ಕಲಾವಿದರೆಂದೇ ಗೌರವಿಸಲಾಗುತ್ತದೆ, ಪೂಜಿಸಲಾಗುತ್ತದೆ. ಯೂಸುಫ್ ಪಠಾಣ್, ಇಫರ್ಾನ್ ಪಠಾನ್, ಜಹೀರ್ ಖಾನ್ ಇವರನ್ನೆಲ್ಲಾ ನಾವು ಟೀಮ್ ಇಂಡಿಯಾ ಆಟಗಾರರೆಂದು ಗುರುತಿಸುತ್ತೇವೆಯೇ ಹೊರತು ಅವರ ಜಾತಿ=ಮತದಿಂದಲ್ಲ. ಇದಕ್ಕೆ ಕೆಲವು ಅಪವಾದಗಳಿರಬಹುದು. ಆದರೆ, ಇಂಥ ಘಟನೆಗಳು ಭಾರತಕ್ಕೆ ಮಾತ್ರ ಸೀಮಿತವಲ್ಲ. ಜಗತ್ತಿನ ಎಲ್ಲಾ ರಾಷ್ಟ್ರ, ಧರ್ಮ, ಸಮುದಾಯಗಳಲ್ಲೂ ಇಂಥದ್ದು ಇದ್ದೇ ಇರುತ್ತದೆ. ಮನೆ ಸಿಗಲಿಲ್ಲ ಎಂಬ ಕಾರಣಕ್ಕೆ ಹಶ್ಮಿಗೆ ತಾನು ಅಲ್ಪ ಸಂಖ್ಯಾತನೆನ್ನುವುದು ನೆನಪಾಗುವುದು ಬೇಡವಾಗಿತ್ತು. ಇದೇನಾ ಸೆಕ್ಯುಲರಿಸಂ ಎನ್ನುವಷ್ಟು ದೂರ ಹಶ್ಮಿ ವಿಚಾರ ಲಹರಿ ಸಾಗುವುದು ಬೇಡವಾಗಿತ್ತು.

No comments:

Post a Comment