Wednesday, June 3, 2009

ರಾಗ ಲಹರಿ


ಪ್ರೀತಿಯೋ, ಸ್ನೇಹವೋ ಏನೋ ನಾ ಅರಿಯೆನು
ಆದರೂ ಒಮೆಯೂ ನಿನ್ನ ನಾ ಮರೆಯೆನು...



ಸಂಬಂಧಗಳು ಹಳತಾದಷ್ಟೂ ಹಳಸುತ್ತವೆ
ಸ್ನೇಹ ಚಿಗುರೊಡೆಯುತ್ತಲೇ ಇರುತ್ತದೆ
***
ಸ್ನೇಹ ಎಂಬುದೊಂದು ಇಲ್ಲದಿದ್ದರೆ ವಿಶ್ವ ಹೇಗಿರುತ್ತಿತ್ತು?
ಬರೀ ಯಾಂತ್ರಿಕವಾಗಿರುತ್ತಿತ್ತು.
ಸ್ನೇಹ ಎಂದರೆ ಭಾವನೆಗಳು, ಭಾವುಕತೆ
ಸ್ನೇಹ ಎಂದರೆ ಆತೀಯತೆ.
ಸ್ನೇಹ ಎಂದರೆ ಪ್ರೀತಿ
ಸ್ನೇಹ ಎಂದರೆ ಸ್ವಾರ್ಥ ಇಲ್ಲದ್ದು
ಸ್ನೇಹ ಎಂದರೆ ಇತರರಿಗಾಗಿ ಬದುಕುವ ರೀತಿ
ಸ್ನೇಹಕ್ಕೆ ಪರ್ಯಾಯವಿಲ್ಲ
***
ವಿಜ್ಞಾನ ಯುಗದ ಬದುಕು ಬರೀ ಯಾಂತ್ರಿಕವೇ ಆಗಿದೆ.
ಹಾಗಿದ್ದೂ ಬಾಳಿಗೊಂದು ನಂಬಿಕೆ, ಬದುಕುವುದಕ್ಕೊಂದು ಉತ್ಸಾಹ ನಮಲ್ಲಿ ಇನ್ನೂ ಉಳಿದಿದ್ದರೆ ಅದು ಸಮಾಜದಲ್ಲಿ ನಾವು ಗಳಿಸುವ, ಉಳಿಸುವ, ಬೆಳೆಸುವ ಸ್ನೇಹದಿಂದ.
***
ಗೊಂದಲಗಳು ಕಾಡುತ್ತವೆ.
ಎಷ್ಟೋ ಬಾರಿ ಗ್ರಹಿಕೆಗಳೇ ತಪ್ಪಾಗಿರುತ್ತದೆ.
ಎಷ್ಟೋ ಬಾರಿ ನಮಗೆ ನಾವೇ ಲಕ್ಷ್ಮಣರೇಖೆಗಳನ್ನು ಎಳೆದುಕೊಳ್ಳುತ್ತೇವೆ ಮತ್ತು ನಿಗ್ರಹ ಸಾಧ್ಯವಾಗದೇ ದಾಟುತ್ತೇವೆ.
ವ್ಯತ್ಯಾಸಗಳನ್ನು ತಿಳಿಯದೇ ಹೋಗುತ್ತೇವೆ
***
ಬದುಕಿನಲ್ಲಿ ತಪ್ಪು ಹೆಜ್ಜೆಗಳನ್ನು ತಪ್ಪಿಸುವುದು ನಮಿಂದ ಹಲವು ಬಾರಿ ಸಾಧ್ಯವಾಗುವುದಿಲ್ಲ.
ಸ್ನೇಹ ಪ್ರೀತಿಯ ಮೆಟ್ಟಿಲು ಎಂಬ ಭ್ರಮೆಯಲ್ಲಿ ಮುಳುಗಿ ಹೋಗಿರುತ್ತೇವೆ.
ನಿರೀಕ್ಷೆಗಳು ಮತ್ತು ಸಾಧ್ಯತೆಗಳ ನಡುವಿನ ಸಡಿಲ ರೇಖೆಯಲ್ಲಿ ಎಷ್ಟೋ ಬಾರಿ ಅವಕಾಶವಾದಿಗಳಾಗಿ ದಾರಿ ತಪ್ಪುತ್ತೇವೆ.
ಏನನ್ನೋ ಪಡೆದುಕೊಳ್ಳುವ ನಿರೀಕ್ಷೆಯಲ್ಲಿ ಬಹಳಷ್ಟನ್ನು ಕಳೆದುಕೊಳ್ಳುತ್ತೇವೆ.
ಕೆಲವೊಮೆ ನಮ ಕೈಜಾರಿ, ಕೈಮೀರಿ ಹೋಗುವುದು ನಮಗೆ ಗೊತ್ತಾಗುತ್ತಿರುತ್ತದೆ. ಆದರೆ ತಡೆಯುವುದು ನಮಿಂದ ಸಾಧ್ಯವಾಗುವುದಿಲ್ಲ.
ಕೈಯಲ್ಲಿ ಮರಳನ್ನು ಬಿಗಿಯಾಗಿ ಹಿಡಿಯುವ ವ್ಯರ್ಥ ಪ್ರಯತ್ನದಂತೆ ಕಷ್ಟ ಪಡುತ್ತಿರುತ್ತೇವೆ ಮತ್ತು ನಿರಾಸೆ ತುಂಬಿ ಕೊಂಡಿರುತ್ತೇವೆ.
***
ಸ್ನೇಹ ಪ್ರೀತಿಯ ಮೆಟ್ಟಿಲೇ?
ಸ್ನೇಹ ಹೆಚ್ಚು ಭಾವುಕ.
ಪ್ರೀತಿ ಮಾನಸಿಕ.
ಪ್ರೀತಿ ಫ್ರೇಮ್‌ ಹಾಕಿಸಿದ ಸುಂದರ ಚಿತ್ರದಂತೆ.
ಸ್ನೇಹಕ್ಕೆ ನೋಡಿದಷ್ಟೂ ಮನ ತಣಿಯದ ಪ್ರಕೃತಿ.
ಪ್ರೀತಿ ಹೆಚ್ಚು ಸ್ವಾರ್ಥಪರ
ಸ್ನೇಹ ನಿಸ್ವಾರ್ಥ.
ಪ್ರೀತಿಯಲ್ಲಿ ಹಕ್ಕು ಚಲಾಯಿಸಲು ಹೋಗುತ್ತೇವೆ.
ಪ್ರೀತಿಯಲ್ಲಿ ಎಲ್ಲವನ್ನೂ ಪಡೆದುಕೊಳ್ಳುವ, ನಿರೀಕ್ಷೆಗಳನ್ನು ಬೆಳೆಸಿಕೊಳ್ಳುವ ಆತುರವಿರುತ್ತದೆ.
ಸ್ನೇಹ ಏನನ್ನೂ ಅಪೇಕ್ಷಿಸುವುದಿಲ್ಲ.
ಎಲ್ಲವನ್ನು ಮೊಗೆದು ಕೊಡುವ ನಿಸ್ವಾರ್ಥ ತಳಹದಿಯ ಮೇಲೆ ನಿಲ್ಲುವುದು ಸ್ನೇಹ.
ಸ್ನೇಹ `ನಾವು' ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುತ್ತದೆ.
ಪ್ರೀತಿಯಲ್ಲಿ ನನ್ನದು ಮತ್ತು ನನ್ನದು ಮಾತ್ರ ಎಂಬ ಭಾವನೆ ನಮಿಂದ ದೂರವಾಗುವುದೇ ಇಲ್ಲ.
ಪ್ರೀತಿಯನ್ನು ನಾವು ಯಾರಿಗೂ ಬಿಟ್ಟು ಕೊಡುವುದಿಲ್ಲ.
ಸ್ನೇಹವನ್ನು ಎಲ್ಲರೊಡನೆ ಹಂಚಿಕೊಳ್ಳುತ್ತೇವೆ.
ಪ್ರೀತಿ ಕನ್ನಡಿಯಂತೆ.
ಅದರಲ್ಲಿ ನಮ ಪ್ರತಿಬಿಂಬವಷ್ಟೇ ಕಾಣುತ್ತದೆ.
ಸ್ನೇಹ ಗಾಜಿನಂತೆ, ಅದರ ಮೂಲಕ ಪ್ರಪಂಚವೆಲ್ಲಾ ಕಾಣುತ್ತದೆ.
***
ಸ್ನೇಹ ಸ್ನೇಹವಾಗಿಯೇ ಉಳಿಯುವುದೇ, ಪ್ರೀತಿಯಲ್ಲಿ ಪರಿವರ್ತನೆಯಾಗುವುದೇ?
ಸ್ನೇಹಕ್ಕೆ ಹೊತ್ತಿಲ್ಲ, ಗೊತ್ತಿಲ್ಲ. ಬದುಕಿನ ಯಾವ ಕ್ಷಣದಲ್ಲೂ ಸ್ನೇಹ ಸಿಗಬಹುದು.
ಆದರೆ ಜೀವನದಲ್ಲಿ ಪ್ರೀತಿಸುವುದು ಒಮೆ ಮಾತ್ರ.
ನಿಜವಾದ ಸ್ನೇಹ ಅಳಿಸಲಾಗದ ಹಚ್ಚೆಯಂತೆ. ಪ್ರೀತಿ ಮರಳಿನ ಮೇಲೆ ಬರೆದ ಅಕ್ಷರದಂತೆ. ತೆರೆಗಳು ಅಳಿಸುತ್ತಲೇ ಇರುತ್ತವೆ. ನಾವು ಮತ್ತೆ ಮತ್ತೆ ಬರೆಯಲು ಯತ್ನಿಸುತ್ತೇವೆ.
ಕಳೆದು ಹೋದ ಪ್ರೀತಿ ಮತ್ತೆ ಸಿಗುವುದಿಲ್ಲ.
ಪ್ರೀತಿಗೆ ಪರ್ಯಾಯವಿಲ್ಲ. ಔಷಧ ಅಂಗಡಿಗಳಲ್ಲಿ ಇಲ್ಲದ ಮಾತ್ರೆಗೆ ಪರ್ಯಾಯವಾದ್ದನ್ನು ಕೊಡುವಂತೆ ಪ್ರೀತಿಗೆ ಪರ್ಯಾಯ ಇಲ್ಲ. ಒಬ್ಬರಲ್ಲಿ ಕಳೆದುಕೊಂಡ ಪ್ರೀತಿಯನ್ನು ಮತ್ತೊಬ್ಬರಲ್ಲಿ ಪಡೆಯಲು ಸಾಧ್ಯವಿಲ್ಲ.
ಕಳೆದುಕೊಂಡಿದ್ದು ಮಾತ್ರ ಪ್ರೀತಿ.
ನಂತರ ಮತ್ತೊಮೆ ಪಡೆಯಲು ಯತ್ನಿಸುವುದೆಲ್ಲಾ ನಮ ಬದುಕಿನ ಅನಿವಾರ್ಯತೆ.
ಅದಿಲ್ಲದೆ ನಾವಿರುವುದು ಸಾಧ್ಯವಿಲ್ಲ ಎಂಬ ಹುಚ್ಚು ಭ್ರಮೆಯಿಂದ ಹುಡುಕಾಡುತ್ತೇವೆ, ತಡಕಾಡುತ್ತೇವೆ, ಚಡಪಡಿಸುತ್ತೇವೆ. ಮೊದಲು ಪ್ರೀತಿಸಿದ್ದು ಪ್ರೀತಿ. ನಂತರ ಕಂಡು ಕೊಂಡಿದ್ದು ನಮ ಬದುಕಿಗೆ ನಾವು ಮಾಡಿಕೊಂಡ ಹೊಂದಾಣಿಕೆ. ಅದನ್ನೇ ಪ್ರೀತಿಯ ಸೋಗಿನಲ್ಲಿ ಗುರುತಿಸಿಕೊಳ್ಳುತ್ತೇವೆ.
ಸ್ನೇಹ ಹಾಗಲ್ಲ.
ನಿಜವಾದ ಸ್ನೇಹ ಯಾವತ್ತೂ ಮುರಿದುಹೋಗುವುದಿಲ್ಲ.
ಮುರಿದು ಹೋದದ್ದು ಸ್ನೇಹವಲ್ಲ.
ಯಾವುದೇ ಉದ್ದೇಶಗಳಿಗಾಗಿ, ಸ್ವಾರ್ಥಕ್ಕಾಗಿ ಇರಿಸಿಕೊಂಡ ಒಡನಾಟ ಸ್ನೇಹ ಆಗುವುದಿಲ್ಲ.
ಸ್ನೇಹ ಸ್ವತಃ ಮೋಸ ಹೋಗ ಬಹುದು. ಆದರೆ ಮೋಸ ಮಾಡುವುದಿಲ್ಲ.
***
ಸಂಬಂಧಗಳು ಹಳತಾದಷ್ಟೂ ಹಳಸುತ್ತವೆ.
ಅಂತರಂಗಿಕ ವಿಷಯಗಳನ್ನು ಪರಸ್ಪರ ಹಂಚಿಕೊಳ್ಳುವುದೂ ಪ್ರೀತಿ ಸಡಿಲವಾಗಲು ಕಾರಣವಾಗುತ್ತದೆ.
ರಹಸ್ಯಗಳು ತಿಳಿದ ಮೇಲೆ ಸ್ವಾರಸ್ಯ ಉಳಿಯುವುದಿಲ್ಲ.
ಎಷ್ಟೋ ಪ್ರೀತಿಗಳು ಖಾಲಿ ಆಗುವುದು ಇದೇ ಕಾರಣಕ್ಕೆ.
ಎಷ್ಟೊ ಬಾರಿ ಪ್ರೀತಿಯ ಉಗಮಕ್ಕೆ ಭ್ರಮೆಗಳು ಕಾರಣವಾಗಿರುತ್ತದೆ.
ಆದರೆ ಸ್ನೇಹಕ್ಕೆ ಯಾವುದೇ ಭ್ರಮೆ ಇಲ್ಲ.
ಜೊತೆಯಲ್ಲಿದ್ದರೂ, ದೂರದಲ್ಲಿದ್ದರೂ ಶಾಶ್ವತವಾಗಿರುವುದು ಸ್ನೇಹ.
ಅದರಲ್ಲಿ ಮುಚ್ಚುಮರೆ ಇಲ್ಲ.
ಅನುಮಾನ- ಆತಂಕಗಳಿಲ್ಲ. ದೇಹ-ಮನಸ್ಸು, ಆಸೆ-ಆಕಾಂಕ್ಷೆಗಳನ್ನು ಮೀರಿದ್ದು ಸ್ನೇಹ.
***
ಸ್ನೇಹಿತನಿಗೂ ಒಂದು ಒಳ್ಳೆಯ [ಸ್ತಕಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ.
ಸ್ನೇಹ ಸುಮಧುರ ಸಂಗೀತದಂತೆ. ಬದುಕಿಗೆ ಲಯವನ್ನು ಕಲ್ಪಿಸಿಕೊಡುತ್ತದೆ.
ಸ್ನೇಹಿತ ನಮ ಮುಂದೆಯೂ ಸಾಗುವುದಿಲ್ಲ, ಹಿಂದೆ ಹಿಂಬಾಲಿಸುವುದೂ ಇಲ್ಲ
ನಮ ಜೊತೆಯಲ್ಲಿ ನಡೆಯುತ್ತಾನೆ.
ಇದು ಸ್ನೇಹದ ಪರಿ.
***
ಒಂದು ಪ್ರೀತಿ ಕವಿತೆ
ಕ್ಷಣ ಕ್ಷಣವೂ ನಿನ್ನನ್ನು ನೆನಪಿಸಿಕೊಂಡು
ನಿನ್ನನ್ನು ಮರೆಯುವ ಯತ್ನದಲ್ಲಿದ್ದೇನೆ ನಾನು
ಜಗತ್ತಿನ ವಿರುದ್ಧವಲ್ಲ,
ನನ್ನ ವಿರುದ್ಧವೇ ಹೋರಾಟ ನಡೆಸಿದ್ದೇನೆ ನಾನು
***
ಉಪಸಂಹಾರ:
ಅವಳ ಮುಖವನ್ನೇ ದಿಟ್ಟಿಸಿ ನೋಡಿದೆ.
ಅವಳ ಹೃದಯದಲ್ಲಿ ನನಗೂ ಸ್ವಲ್ಪ ಜಾಗವಿದೆ ಎಂದು ಗೊತ್ತಾಗಿದ್ದು ಆಗಲೇ.
***
ಕೊಟ್ಟ ಕೊನೆ ಮಾತು:
ನಿನ್ನ ಮನಸ್ಸಿನಲ್ಲಿ ಒಬ್ಬರಿರಬಹುದು.
ನಿನ್ನ ಕನಸಿನಲ್ಲಿ ಇನ್ನೊಬ್ಬರಿರಬಹುದು.
ನಿನ್ನ ಹೃದಯದಲ್ಲಿ ಮತ್ತೊಬ್ಬರಿರಬಹುದು.
ನಿನ್ನ ಜೀವನದಲ್ಲಿ ಮಗದೊಬ್ಬರಿರಬಹುದು.
ಆದರೆ ನಿನ್ನ ಜೊತೆ ಅವರೆಲ್ಲರೂ ಇದ್ದಾಗಲೂ, ಇಲ್ಲದಿರುವಾಗಲೂ
ನಾನಿರುತ್ತೇನೆ
ನಾನು ಸ್ನೇಹ...

1 comment:

  1. ಇವತ್ತಷ್ಟೇ ನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಪಟ್ಟಿಯಲ್ಲಿ ನನ್ನ ಬ್ಲಾಗ್ ಇರುವುದು ಹರ್ಷ ತಂದಿತು.
    ಅರೆ, ನಿಮ್ಮ ಬ್ಲಾಗ್ ನೋಡಿದಾಗ ಕ್ರಿಕೆಟ್ ಲೇಖನಗಳಲ್ಲದೆ ಕವನ ಸಿಡಿಸಿದ್ದು ಕಾಣೀಸಿತು. ಅದೂ ಇಂಗ್ಲೀಷ್‌ನಲ್ಲಿ ಕೂಡ. ಅವನ್ನು ವಿಶ್ಲೇಷಿಸುವ ಸಾಮರ್ಥ್ಯ ನನಗಿಲ್ಲ. ಒಟ್ಟಾರೆ ನಿಮ್ಮ ಬ್ಲಾಗ್ ‘ಪಕ್ಕದ ಮನೆ ಹುಡುಗಿ’ಯಂತಿದೆ!

    ReplyDelete