Sunday, June 28, 2009
ರಾಗಲಹರಿ
ಎಂದೋ ಬರೆದಿದ್ದು...
ಮುತ್ತಿನ ಗಮ್ಮತ್ತು!
ಪ್ಲೀಸ್...
ಹಟ ಮಾಡ್ಬೇಡ...
ಒಂದೇ ಒಂದು...
ಅಹಂಕಾರ ನಿನಗೆ....
ನನ್ ಮೇಲೆ ಕರುಣೇನೇ ಇಲ್ವಾ...
ಇಷ್ಟೊಂದು ಸತಾಯಿಸಬಾರ್ದು...
ಒಂದೇ ಒಂದು ಕೊಟ್ರೆ ನಿನ್ ಗಂಟೇನ್ ಹೋಗುತ್ತೆ...
ಕಣ್ಣು ಮುಚ್ಕೊಂಡ್ ಬಿಡು...
ಸಿಟ್ಟು ಬರಿಸ್ಬೇಡ...
ನಾನು ಹಟ ತೊಟ್ರೇ ಬಿಡೋದಿಲ್ಲಾ...
***
ಸಾಮ್ರಾಜ್ಯಗಳು ಉರುಳಿದವು...
ಮಹಾಕಾವ್ಯಗಳು ರಚನೆಯಾದವು...
ಹೊಸ ಹೊಸ ಆವಿಷ್ಕಾರಗಳಾದವು...
ಕೃತಕ ಹಲ್ಲುಗಳ ಸಂಶೋಧನೆಗೆ ದಾರಿಯಾದವು...
ಒಂದು,,, ಒಂದೇ ಒಂದು ಮುತ್ತಿಗೆ ಎಷ್ಟೆಲ್ಲಾ ಶಕ್ತಿ ಇದೆ...?
ಮಾತಿಗೆ ಸಾರ ಅರ್ಥ, ಆದರೆ ಮುತ್ತಿಗೆ ಒಂದೇ ಅರ್ಥ...
ಅದು ಪ್ರೀತಿ.
ನೀನು ತೋಳಿನಲ್ಲಿ ನನ್ನ ಬಳಸಿದಾಗ ನನಗನ್ನಿಸಿತು ನನ್ನನ್ನು ನೀನೆಷ್ಟು ಪ್ರೀತಿಸುತ್ತಿ, ನೀನು ನನ್ನನ್ನು ಪ್ರೀತಿುಂದ ನೋಡಿ, ಮುಗುಳ್ನಕ್ಕಾಗ ನನಗನ್ನಿಸಿತು ನನ್ನನ್ನು ನೀನೆಷ್ಟು ಪ್ರೀತಿಸುತ್ತಿ ನಿನ್ನ ತುಟಿಗಳು ನನ್ನ ತುಟಿಗಳನ್ನು ಚುಂಬಿಸಿದಾಗ ನನಗನ್ನಿಸಿತು ನಾನೂ ನಿನ್ನನ್ನು ಪ್ರಾಣಕ್ಕಿಂತ ಪ್ರೀತಿಸುತ್ತೇನೆ...
ಮುತ್ತು ಎಂಬುದೊಂದು ಜನರಿಗೆ ತಿಳಿಯದೇ ಹೋಗಿದ್ದರೆ ಜಗತ್ತು ಹೇಗಿರುತ್ತಿತ್ತು? ನಿಜಕ್ಕೂ ಅಂಥ ಒಂದು ಜಗತ್ತು ಇರಲು ಸಾಧ್ಯವೇ? ನಿಜಕ್ಕೂ ಮುತ್ತನ್ನು ಸಂಶೋಧಿಸಿದ ಮಹಾನುಭಾವನಿಗೆ (ಅಂಥವನೊಬ್ಬನಿದ್ದರೆ..) ಸಾವಿರ ಸಾವಿರ ಥ್ಯಾಂಕ್ಸ್ ಹೇಳಲೇಬೇಕು. ಪ್ರೀತಿಸಲು ಸಾವಿರ ಬಗೆ. ಆದರೆ ಅಭಿವ್ಯಕ್ತಿಗೊಳಿಸಲು ಇರುವುದು ಒಂದೇ ಬಗೆ. ಅದು ಮುತ್ತು. ಮುತ್ತು ಎಂದರೆ ಮತ್ತು. ಗಮತ್ತು. ಎಚ್ಚರ ತಪ್ಪಿದರೆ ಆಪತ್ತು. ಪ್ರಾಣಕ್ಕೆ ಕುತ್ತು. ಆದರೂ ಮುತ್ತು ಪ್ರತಿಯೊಬ್ಬರ ಸ್ವತ್ತು. ಮುತ್ತು ಪ್ರತಿಯೊಬ್ಬರ ಸಂಪತ್ತು.
ಮೊದಲ ಮುತ್ತು.
ಜೀವನದಲ್ಲಿ ಮೊದಲ ಮುತ್ತಿಗೆ ಮಹತ್ವ. ಪ್ರತಿಯೊಬ್ಬರ ಜೀವನಕ್ಕೆ ತಿರುವು ನೀಡುವ ಕ್ಷಣ ಅದು. ಆಜನ್ಮ ಬ್ರಹಚಾರಿಯೂ ಕನಿಷ್ಠ ಒಂದು ಮುತ್ತಿನ ಸವಿ ಸವಿಯದೇ ಇರಲಾರ. ಜೀವನದ ಯಾವ ಹಂತದಲ್ಲಿ, ಯಾವ ಸಂದರ್ಭದಲ್ಲಿ, ಯಾವ ರೀತಿಯಲ್ಲಿ ಮೊದಲ ಮುತ್ತು ಕಾದಿರುತ್ತದೆ ಹೇಳಲಸಾಧ್ಯ. ಮಕ್ಕಳಿಗೆ ಕೊಡುವ ಮುತ್ತು ಬೇರೆ. ಅದು ಮೊದಲ ಚುಂಬನ ಎನಿಸಿಕೊಳ್ಳುವುದಿಲ್ಲ. ಪ್ರಜ್ಞಾರ್ವಕವಾಗಿ ನಡೆಯುವ ಗಂಡು-ಹೆಣ್ಣಿನ ತುಟಿಗಳ ಬೆಸುಗೆ (ಗಂಡು-ಗಂಡು, ಹೆಣ್ಣು-ಹೆಣ್ಣು ತುಟಿ ಬೆಸೆದುಕೊಳ್ಳುವುದು ಬೇರೆ ಮಾತು) ಮುತ್ತು ಎನಿಸಿಕೊಳ್ಳುತ್ತದೆ. ಬಲವಂತವಾಗಿ ಕೊಡುವ ಮುತ್ತು (ಬಲಾತ್ಕಾರದಂಥ ಅಪರಾಧಗಳು) ಮುತ್ತಲ್ಲ. ಅದೊಂದು ಕಾಮವಿಕೃತಿ. ಹಾಗಾಗಿ ಆ ಚರ್ಚೆ ಬೇಡ.
ಸ್ವಲ್ಪ ನಾಜೂಕಾಗಿ ಹೇಳುವುದಾದರೆ
ಒಂದು ತುಟಿ ಇನ್ನೊಂದು ತುಟಿಗೆ ಅಭಿನಂದಿಸುವುದನ್ನು ಬಲ್ಲವರು ಚುಂಬನ ಎನ್ನುತ್ತಾರೆ....
ಮೊದಲು ಮುಗುಳ್ನಗುವಿನ ವಿನಿಮಯ, ಬಳಿಕ ಕಣ್ಣಲ್ಲೇ ಸಂಭಾಷಣೆ, ಪರಸ್ಪರರ ಆರಾಧನೆ, ಆಲಿಂಗನಗಳ ಮೂಲಕ ಅವಲಂಬನೆ, ನಂತರದ ಹಂತ ಚುಂಬನ.
ಪ್ರೀತಿ ಎಂಬ ಚುಂಬಕ ಎಂಬ ಕವಿವಾಣಿ ಅದೆಷ್ಟು ನಿಜ. ಪ್ರೀತಿಯ ಸುಳಿಗೆ ಸಿಲುಕಿದವರು ಚುಂಬನದ ಸನ್ಯಾಸ ಸ್ವೀಕರಿಸುವುದು ಅಸಾಧ್ಯ. ಪ್ರೀತಿಸಿದವರು ಬೇರ್ಪಡುವುದು ಎಷ್ಟು ಸಹಜವೋ, ಚುಂಬಿಸಿಕೊಳ್ಳುವುದೂ ಅಷ್ಟೇ ಸಹಜ, ನಿಜ.
ಪ್ರೀತಿಯ ಕಲೆಯಲ್ಲಿ ಪಳಗಿದವರು ಹೇಳುತ್ತಾರೆ, ಪ್ರೀತಿಸುವುದು, ಚುಂಬಿಸುವುದು ನಿನ್ನ ಕರ್ತವ್ಯ ನೀನು ಚುಂಬಿಸಿದ ಹುಡುಗಿಯನ್ನು ನೀನೇ ಮದುವೆ ಆಗುವೆಯೋ, ಬೇರೆಯವರು ಆಗುತ್ತಾರೋ ದೈವ ನಿಯಾಮಕ...!
ಪ್ರಪಂಚದಲ್ಲಿ ಎಷ್ಟು ಮಂದಿ ತಾವು ಪ್ರಥಮ ಚುಂಬನ ನೀಡಿದವರನ್ನೇ ಮದುವೆ ಆಗಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷರ ಹೆಂಡತಿ ಲಾರಾ ಬುಷ್ ಸಹ ಶಾಲಾ ದಿನಗಳಲ್ಲಿ ಹುಡುಗನೊಬ್ಬನನ್ನು ಚುಂಬಿಸಿದ ಗಳಿಗೆಯನ್ನು ನೆನಪಿಸಿಕೊಂಡಿದ್ದರು. ಆದರೂ ಪ್ರಥಮ ಚುಂಬನದ ನೆನಪು, ಆ ರೋಮಾಂಚನ, ಮೊದಲ ಬಾರಿ ಸಿಗರೇಟ್ ಸೇದುವವರಂತೆ ಮುಖ ಹಿಂಡಿಕೊಂಡ, ಹುಳ್ಳಗೆ ಮಾಡಿಕೊಂಡ ನೆನಪು.. ಮಧುರ, ಮಧುರ
ಅದರಂ ಮಧುರಂ, ವದನಂ ಮಧುರಂ...
ವಿಶ್ವದಲ್ಲೇ ದಿನಂಪ್ರತಿ ಅತಿ ಹೆಚ್ಚು ಮುತ್ತುಗಳ ವಿನಿಮಯ ಆಗುವುದು ಭಾರತದಲ್ಲೇ ಆದರೂ, ಸಾರ್ವಜನಿಕವಾಗಿ ಅದಿನ್ನೂ ನಿಷಿದ್ಧವೇ. ವಿದೇಶಗಳಲ್ಲಿ ಚುಂಬಿಸುವುದು (ಕೈ, ಕೆನ್ನೆ) ಸೌಜನ್ಯ. ಆದರೆ ನಮಲ್ಲಿ ಚುಂಬನ ಎಂದರೆ ಪ್ರಣಯ. ವ್ಯವಹಾರದಲ್ಲಿ ನಾವಿನ್ನೂ ಕೈ ಕೊಡುವುದರಿಂದ (!) ಮುಂದೆ ಸಾಗಿಲ್ಲ. ಆಲಿಂಗನ, ಚುಂಬನ ಪ್ರೀತಿಗೆ ಮಾತ್ರ ಸೀಮಿತ. ಜನ ಸ್ವಲ್ಪ ವಿಶಾಲವಾಗಿ (ವಿನೋದವಾಗಿಯಾದರೂ) ಯೋಚಿಸಬೇಕಿದೆ. ಏಕೆಂದರೆ..
ಒಂದು ತಲೆಗಿಂತ ಎರಡು ತಲೆ ಉತ್ತಮ ಎನ್ನುವುದರ ಸಂಕೇತ ಚುಂಬನ...
ಮುತ್ತಿನ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅದೊಂದು ಮುಗಿಯದ, ಸಾಕೆನಿಸದ ಹಸಿವು, ಬಾಯಾರಿಕೆ. ಮುತ್ತಿನ ಬಗೆಗಿನ ಹೆಚ್ಚಿನ ಚಿಂತನೆಗಳನ್ನು ಅವರವರ ಭಾವಕ್ಕೆ ಬಿಟ್ಟುಬಿಡುವುದು ಒಳಿತು. ಆದರೂ ಮುತ್ತು ಕೊಡುವವರಿಗಾಗಿ ಇಲ್ಲಿ ಕೆಲವೊಂದು ಸಲಹೆ, ವಿನೋದ, ಕಿವಿ ಮಾತುಗಳಿವೆ.
ಎಷ್ಟೆಂದರೂ ಮುತ್ತು ಗಾಜಿನ ಮನೆಯ ವಾಸದಂತೆ.
ಮನೆಯಾಕೆಗೆ ಕೊಟ್ಟರೆ ಗಮತ್ತು ಪಕ್ಕದ ಮನೆಯಾಕೆಗೆ ಕೊಟ್ಟರೆ ಆಪತ್ತು.
***
ಮುತ್ತು ಕೊಡುವುದೆಂದರೆ
ಉಪ್ಪು ನೀರು ಕುಡಿದಂತೆ
ಕುಡಿದಷ್ಟೂ ಬಾಯಾರಿಕೆ ಹೆಚ್ಚುತ್ತದೆ... ***
ಓರ್ವ ಮೂರ್ಖ
ನಿನ್ನನ್ನು ಚುಂಬಿಸಲು
ಅವಕಾಶ ಕೊಡುವುದು ಮೂರ್ಖತನ
ಚುಂಬಿಸಿ ಮೋಸ ಹೋಗುವುದು
ಅದಕ್ಕಿಂತ ಮೂರ್ಖತನ... ***
ಚುಂಬನ
ಪರಸ್ಪರರ ಪ್ರೀತಿಯನ್ನು
ಅಭಿವ್ಯಕ್ತಗೊಳಿಸುತ್ತದೆ
ಆದರೆ ನಿಜವಾದ ಪ್ರೀತಿ
ಹೃದಯದಲ್ಲಿ ಆರಂಭವಾಗುತ್ತದೆ
ತುಟಿಗಳಲ್ಲಲ್ಲ...
***
ಎರಡು ಹೃದಯಗಳು
ಕಣ್ಣುಗಳಲ್ಲೇ
ಸಂಭಾಷಣೆ ನಡೆಸಲು ಸಾಧ್ಯ
ಹಾಗಾದರೆ ನೋಟದಲ್ಲೇ
ಚುಂಬಿಸಿಕೊಳ್ಳುವುದೂ ಸಾಧ್ಯ... ***
ಪ್ರೀತಿಪಾತ್ರರ ಕಣ್ಣು ತೇವಗೊಂಡಿದ್ದರೆ
ಅವನ್ನೊಮ್ಮೆ ಚುಂಬಿಸಿಬಿಡಿ...
ಚುಂಬನ ಸರ್ವ ನೋವುಗಳಿಗೂ ಔಷಧ.
Subscribe to:
Post Comments (Atom)
No comments:
Post a Comment